ದಿನದ ಅಪರಾಧಗಳ ಪಕ್ಷಿನೋಟ 09ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 08.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಲಕೃಷ್ಣ ಬಿನ್ ವೆಂಕಟೇಶ್‌, ಚೌಡೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 05.05.2020 ರಂದು ರಾತ್ರಿ 8.45 ಗಂಟೆಯಲ್ಲಿ ಚಿಂಚಾಂಡ್ಲಹಳ್ಳಿ  ಗ್ರಾಮದ   ಕುಡಿಯುವ ನೀರಿನ  ಟ್ಯಾಂಕ್ ಬಳಿ   ಪೈಪ್ ಅನ್ನು ರಿಪೇರಿ ಮಾಡುತ್ತಿದ್ದಾಗ,  ಚಿಂಚಾಂಡ್ಲಹಳ್ಳಿ ಗ್ರಾಮದ  ವಾಸಿಗಳಾದ ಟಿ. ಗಂಟ್ಲಪ್ಪ , ಜಿ. ನಾರಾಯಣಪ್ಪ ಬಿನ್ ಗಂಟ್ಲಪ್ಪ ಮತ್ತು ನಾರಾಯಣಪ್ಪ ಬಿನ್ ಮುನಿವೆಂಕಟಪ್ಪ ರವರು ದೂರುದಾರರನ್ನು “ನಿನ್ಯಾರೋ   ಈ ಸಮಯದಲ್ಲಿ ರಿಪೇರಿ ಮಾಡುವುದಕ್ಕೆ” ಎಂದು ಕೇಳಿ ಕೆಟ್ಟ ಮಾತುಗಳಿಂದ ಬೈದು, ಕಲ್ಲಿನಿಂದ  ಹೊಡೆದು ನೋವುಂಟು ಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ   ಪಿರ್ಯಾದಿ ಶ್ರೀ.ನೀಲಮೇಗಡು, ಅಮರವತಿನಗರ, ಬಂಗಾರಪೇಟೆ ರವರ ತಮ್ಮನಾದ ಪಿ. ಕರುಣಾನಕರನ್ ಬಿನ್ ಲೇಟ್ ಶಿರಾಲನ್, 55 ವರ್ಷ, ತಮಿಳುನಾಡಿನ ಕೇಲ್ ಕಾಲ್ ಪಟ್ಟಿ ಗ್ರಾಮದಲ್ಲಿ ಅವರ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಲಾಕ್ ಡೌನ್ ಆಗುವ ಮೊದಲು ಪಿರ್ಯಾದಿಯ ಮನೆಗೆ ಬಂದಿದ್ದು, ಲಾಕ್ ಡೌನ್ ಕಾರಣದಿಂದ ವಾಪಸ್ಸು ಹೋಗಲು ಸಾದ್ಯವಾಗದೇ ಇದ್ದುದರಿಂದ ಪಿರ್ಯಾದಿಯ ಮನೆಯಲ್ಲಿಯೇ ಉಳಿದುಕೊಂಡಿದ್ದು, ಪಿ. ಕರುಣಾನಕರನ್ ಆರ್ನೀಯ ಕಾಯಿಲೆ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾರೆ. ದಿನಾಂಕ 08.05.2020 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ಮೃತ ಕರುಣಾಕರನ್ ರವರಿಗೆ ಬೇದಿಗಳಾಗಿ ಸುಸ್ತಾಗಿ ಪ್ರಜ್ಞೆ ತಪ್ಪಿದಂತಾಗಿ, ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *