ದಿನದ ಅಪರಾಧಗಳ ಪಕ್ಷಿನೋಟ 09ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 08.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ನಿಷೇದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತೆ. ದೂರುದಾರರಾದ ಶ್ರೀಮತಿ. ಭವ್ಯ ಕೊಂ ಹರೀಶ್‌, ವಿವೇಕಾನಂದನಗರ, ಬಂಗಾರಪೇಟೆ ರವರು  ದಿನಾಂಕ 28.04.2019 ರಂದು ಹರೀಶ್‌ ರವರನ್ನು  ಮದುವೆಯಾಗಿದ್ದು, ಮದುವೆ ಕಾಲದಲ್ಲಿ 350 ಗ್ರಾಂ ಚಿನ್ನ ಹಾಗೂ  1/2 ಕೆ.ಜಿ ಯಷ್ಟು  ಬೆಳ್ಳಿ ಪಾತ್ರೆಗಳು ನೀಡಿದ್ದು, ಮದುವೆಯಾದ ಎರಡು ತಿಂಗಳ ನಂತರ ಹರೀಶ್‌, ನಾರಾಯಣಸ್ವಾಮಿ, ರೆಡ್ಡೆಮ್ಮ, ಅರುಣಾ, ಕೋನಪ್ಪ, ಚಿನ್ನಪ್ಪ ರವರುಗಳು ದೂರುದಾರರಿಗೆ ತವರುಮನೆಯಿಂದ ವರದಕ್ಷಿಣೆ ತರುವಂತೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳವನ್ನು ನೀಡುತ್ತಿದ್ದು, ದಿನಾಂಕ 03.04.2020 ರಂದು ರಾತ್ರಿ 10.30 ಗಂಟೆಯಲ್ಲಿ ಹರೀಶ್‌ ರವರು ದೂರುದಾರರೊಂದಿಗೆ ಜಗಳ ಮಾಡಿ, ಕೈಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.

– ಇತರೆ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಲಾಕ್ಡೌನ್ ಉಲ್ಲಂಘನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ಕೋವಿಡ್-19 ಸೋಂಕು ಖಾಯಿಲೆ ಹರಡುತ್ತಿರುವ ಪ್ರಯುಕ್ತ ಸರ್ಕಾರವು ದಿನಾಂಕ:25.03.2020 ರಂದು 14.04.2020 ರವರೆಗೆ ಲಾಕ್ ಡೌನ್  ಘೋಷಿಸಿದ್ದು,  ದಿನಾಂಕ: 08.04.2020 ರಂದು ತಾತೇನಹಳ್ಳಿ ಕ್ರಾಸ್ ಬಳಿ  ನಾಗರಾಜ್‌ ಬಿನ್ ನಾರಾಯಣಪ್ಪ, ಬಸವನತ್ತ ಗ್ರಾಮ, ಕೋಲಾರ ತಾಲ್ಲೂಕು ರವರು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಭವಾನಿ ಹೋಟೆಲ್ ಮುಂದೆ ಒಂದು ಕಡಪ ಕಲ್ಲಿನ ಜಗುಲಿಯ ಮೇಲೆ  ನಿಷೇದಾಜ್ಞೆ ಜಾರಿಯಲ್ಲಿದ್ದರು ಟೀ ವ್ಯಾಪಾರ ಮಾಡುತ್ತಿದ್ದು, ದೂರುದಾರರಾದ ಪಿ.ಎಸ್.ಐ ಶ್ರೀ. ನವೀನ್‌ ಮತ್ತು ಸಿಬ್ಬಂದಿ ಆರೋಪಿಯನ್ನು ಮತ್ತು ಸ್ಥಳದಲ್ಲಿದ್ದ ಟೀ ಪ್ಲಾಸ್ಕ್ ಮತ್ತು ಟೀ, ಕುಡಿದಿರುವ  10 ಪೇಪರ್ ಗ್ಲಾಸ್  ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಕವರನಲ್ಲಿದ್ದ ಸುಮಾರು 50 ಪೇಪರ್ ಗ್ಲಾಸ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಲಾಕ್ಡೌನ್ ಉಲ್ಲಂಘನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.04.2020 ರಂದು ಬೆಳಗ್ಗೆ 6.10 ಗಂಟೆಯಲ್ಲಿ ದೂರುದಾರರಾದ ಶ್ರೀ. ಸಂಜೀವ್‌ ಸಾವಂತ್‌, ಪಿ.ಸಿ ರವರು  2 ಪಿ.ಓ ಬಾಕ್ ಕಡೆ ಗಸ್ತು ಮಾಡುತ್ತಿದ್ದಾಗ, ಶ್ರೀನಿವಾಸ್‌,  2 ಪಿ.ಓ ಬ್ಲಾಕ್, ಕೆ.ಜಿ.ಎಫ್ ವಾಸಿ ರವರು ನಿಷೇದಾಜ್ಞೆ ಜಾರಿಯಲ್ಲಿದ್ದರು ಟೀ ವ್ಯಾಪಾರ ಮಾಡುತ್ತಿದ್ದು, ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕುಮಾರಿ ಮಾನಿಷ ಬಿನ್ ಪಿ. ಕುಮಾರ್, ಪೈಪ್‌ ಲೈನ್‌, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ತಾಯಿ ಶ್ರೀಮತಿ. ಮಾಲತಿ, 52 ವರ್ಷ ರವರು ದಿನಾಂಕ. 08.04.2020 ರಂದು ಮಧ್ಯ ರಾತ್ರಿ ನೀರು ಬರುತ್ತೆಂದು ಸಂಪ್ ನಲ್ಲಿದ್ದ ನೀರನ್ನು ಮೇಲೆತ್ತಲು ನಿದ್ದೆ ಕಣ್ಣಿನಲ್ಲಿ ಮೋಟರ್ ಸ್ವೀಚ್ ಆನ್ ಮಾಡಲು ಹೋಗಿ ಸಂಪ್ನ ಚೇಂಬರ್ ತೆಗೆದಿರುವುದನ್ನು ಗಮನಿಸದೆ ಆಕಸ್ಮಿಕವಾಗಿ ಕಾಲಿಟ್ಟು ಜಾರಿ ಸಂಪ್ ನ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಮೂರ್ತಿ ಬಿನ್ ಕೃಷ್ಣಪ್ಪ ನಾಯ್ಡು, ರಾಜ್‌ಪೇಟ್‌ ರಸ್ತೆ, ಕೆ.ಜಿ.ಎಫ್ ತಾಲ್ಲೂಕು ರವರು  ದಿನಾಂಕ 07.04.2020  ರಂದು ಸಂಜೆ 5.00  ಗಂಟೆಯಲ್ಲಿ  ರಾಜಪೇಟೆ ರಸ್ತೆಯಲ್ಲಿ ಮಳೆ ಬಿದ್ದು ನಿಂತ ಮೇಲೆ ರಾಜಪೇಟೆ  ರಸ್ತೆಯ ಸರ್ಕಾರಿ ಪಶು ಆಸ್ಪತ್ರೆಯ ರಸ್ತೆಯ  ಪಕ್ಕದಲ್ಲಿ  ನಡೆದುಕೊಂಡು ಹೋಗುತ್ತಿದ್ದಾಗ, ನಾಯನಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಇದ್ದ 50-55 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯು  ಮದ್ಯಾಹ್ನ 03 ರಿಂದ 04 ಗಂಟೆಯ ಮದ್ಯೆ  ಮೃತಪಟ್ಟಿರುತ್ತಾರೆಂದು ನೀಡಿರುವ ದೂರು.

Leave a Reply

Your email address will not be published. Required fields are marked *