ದಿನದ ಅಪರಾಧಗಳ ಪಕ್ಷಿನೋಟ 09ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:08.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಕನ್ನಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಾಕೀರ್‌ ಬಿನ್ ಜಾನಿ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಆಂಡ್ರಸನ್ ಪೇಟೆ   ಮಾರ್ಕೆಟ್ ನಲ್ಲಿರುವ ಜಾನಿ ಪ್ರಾವಿಜನ್  ಸ್ಟೋರ್  ನಲ್ಲಿ  ದಿನಾಂಕ 07.03.2020 ರಂದು ರಾತ್ರಿ 8.00   ಗಂಟೆಯಿಂದ ದಿನಾಂಕ 08.03.2020  ರಂದು ಬೆಳಿಗ್ಗೆ 8.00 ಗಂಟೆಯ ಮದ್ಯೆ ಯಾರೋ ಕಳ್ಳರು ಪ್ರಾವಿಜನ್  ಸ್ಟೋರ್  ನ ಮುಂಬಾಗದಲ್ಲಿರುವ ಮರದ ಡೋರನ್ನು ಕಿತ್ತು ಅಂಗಡಿಯೊಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿಟ್ಟಿದ್ದ, 7,600/- ರೂ ಬೆಲೆ ಬಾಳುವ 08 ಅಕ್ಕಿ ಮೂಟೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 03

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವೀಂದ್ರ ಕುಮಾರ್‌ ಬಿನ್ ರಾಮಪ್ಪ, ಸಕ್ಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 08.03.2020 ರಂದು ಸಂಜೆ 4.45 ಗಂಟೆಯಲ್ಲಿ ಬಂಗಾರಪೇಟೆಯಿಂದ ಸಕ್ಕನಹಳ್ಳಿ ಗ್ರಾಮಕ್ಕೆ ಹೋಗಲು ಹೋಂಡಾ ಡ್ರೀಮ್ ಯುಗ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಸ್-0198 ರ ಹಿಂಬದಿಯಲ್ಲಿ ಹೆಂಡತಿ ನಿರ್ಮಲಾ ಮತ್ತು ಮಗನಾದ ಚೇತನ್ ರವರನ್ನು ಕುಳ್ಳರಿಸಿಕೊಂಡು, ಸಕ್ಕನಹಳ್ಳಿ ಬಸ್ ನಿಲ್ದಾಣದ ಸಮೀಪವಿರುವ ಮೋರಿಯ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಕಾಮಸಮುದ್ರಂ ಕಡೆಯಿಂದ ಹೀರೋಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-09-ವೈ-1551 ನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ದೂರುದಾರರು ಮತ್ತು ನಿರ್ಮಲಾ ರವರಿಗೆ ರಕ್ತಗಾಯಗಳಾಗಿರುತ್ತದೆ. ಚೇತನ್ ಗೆ ಯಾವುದೇ ಗಾಯಗಳಾಗಿರುವುದಿಲ್ಲ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ಚಂದ್ರಶೇಖರ್‌ ಬಿನ್ ವೆಂಕಟೇಶಪ್ಪ, ಮುದಿಮಡುಗು ಗ್ರಾಮ, ವಿ.ಕೋಟ ಮಂಡಲ್‌, ಆಂದ್ರಪ್ರದೇಶ ರವರ  ತಂದೆ ವೆಂಕಟೇಶಪ್ಪ ರವರು ದೂರುದಾರರ ತಾಯಿ ಪದ್ಮಮ್ಮ ರವರನ್ನು ಆಟೊರಿಕ್ಷಾ ಸಂಖ್ಯೆ ಎ.ಪಿ.03-ಟಿಎ-9894 ರಲ್ಲಿ ಕುಳ್ಳರಿಸಿಕೊಂಡು ದಿನಾಂಕ 08-03-2020 ರಂದು ರಾತ್ರಿ 7.00 ಗಂಟೆಯಲ್ಲಿ  ಬೇತಮಂಗಲ ವಿ.ಕೋಟೆ ಮುಖ್ಯ ರಸ್ತೆ  ತಾಯಲೂರು ಕ್ರಾಸ್ ಬಳಿ  ಬೇತಮಂಗಲ ಕಡೆಯಿಂದ ಹೋಗುತ್ತಿದ್ದಾಗ, ವಿ.ಕೋಟೆ ಕಡೆಯಿಂದ ಆಶೋಕ ಲೈಲ್ಯಾಂಡ್ ಟೆಂಪೋ ಸಂಖ್ಯೆ ಟಿ.ಎನ್-23-ಸಿವೈ-2356 ರ ಚಾಲಕ ಅತಿವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ತಂದೆ ಚಲಾಯಿಸಿಕೊಂಡು ಬರುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಆಟೋ ಜಖಂ ಗೊಂಡಿದ್ದು ದೂರುದಾರರ ತಂದೆ ವೆಂಕಟೇಶಪ್ಪ, 62 ವರ್ಷ ರವರು ಮೃತಪಟ್ಟಿರುದ್ದು, ತಾಯಿ ಪದ್ಮಮ್ಮ ರವರಿಗೆ ರಕ್ತಗಾಯಗಳಾಗಿರುತ್ತದೆ.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರೇಮಲತಾ ಕೊಂ ಮುರುಗ, ಅಶೋಕ್‌ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ.05.03.2020 ರಂದು  ರಾತ್ರಿ 10-00 ಗಂಟೆಯಲ್ಲಿ ಗಂಡ ಮುರುಗಾ ರವರೊಂದಿಗೆ ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ.08-ಎಲ್9715 ರಲ್ಲಿ ಅಶೋಕನಗರದಿಂದ ಉರಿಗಾಂಪೇಟೆ ಕಡೆ ಹೋಗುವ ರಸ್ತೆಯಲ್ಲಿರುವ ಬ್ರಿಜ್ ಹತ್ತಿರ ಹೋಗುತ್ತಿದ್ದಾಗ, ಉರಿಗಾಂಪೇಟೆ ಕಡೆಯಿಂದ ಲಗೇಜ್ ಆಟೋ ಸಂಖ್ಯೆ:ಕೆ.ಎ.8-7728 ಅನ್ನು ಜಾವೀದ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ದೂರುದಾರರ ಗಂಡ ಮುರುಗ ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುರುಗ ಮತ್ತು ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರತ್ನಮ್ಮ ಕೊಂ ನಾಗರಾಜ್‌, ಕುವೆಂಪು ನಗರ, ಬೆಮೆಲ್ ನಗರ ರವರ ಮಗ ರಾಜೇಶ್ .ಎನ್. ಮತ್ತು ಸೊಸೆ ವೇದಾವತಿ ರವರಿಗೆ ದಿನಾಂಕ.13-01-2020 ರಂದು ಸಂಸಾರದ ವಿಚಾರದಲ್ಲಿ ಗಲಾಟೆಗಳಾಗಿ ವೇದಾವತಿ ರವರು ಆಕೆಯ ತವರು ಮನೆಗೆ ಹೊರಟು ಹೋಗಿದ್ದು, ದಿನಾಂಕ.08-03-2020 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ದೂರುದಾರರು ಮತ್ತು ಆಕೆಯ ಮಗಳು ನೇತ್ರಾವತಿ ರವರು ಅವರ ಮನೆಯ ಬಳಿ ಇದ್ದಾಗ, ವೇದಾವತಿ, ಗೌರಮ್ಮ, ಅರಸಪ್ಪ, ಮತ್ತು ಚಂದ್ರಪ್ಪ ರವರು ದೂರುದಾರರ ಮನೆ ಬಳಿ ಬಂದು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಚಾಕು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿದ್ದು, ದೂರುದಾರರ ಗಂಡ ನಾಗರಾಜ್ ರವರು ಬಂದು ಕೇಳಿದ್ದಕ್ಕೆ, ಕೆಟ್ಟಮಾತುಗಳಿಂದ ಬೈದು, ಕಾಲುಗಳಿಂದ  ಒದ್ದು ನೋವುಂಟುಪಡಿಸಿರುತ್ತಾರೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶ್ವನಾಥ ಪಿ. ಬಿನ್ ಪಾಟಪ್ಪ, ಮೂತನೂರು ಗ್ರಾಮ ರವರ ತಂಗಿ ಕು.ಭವಾನಿ.ಪಿ, 19 ವರ್ಷ ರವರು ದಿನಾಂಕ 07.03.2020 ರಂದು ರಾತ್ರಿ 9.00 ಗಂಟೆಯಲ್ಲಿ ಮನೆಯಿಂದ ಹೊರಗೆ ಹೋದವಳು ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *