ದಿನದ ಅಪರಾಧಗಳ ಪಕ್ಷಿನೋಟ 09ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:08.02.2020 ರಂದು   ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್‌, ಹೆಚ್.ಸಿ 55, ಬಂಗಾರಪೇಟೆ ಪೊಲೀಸ್ ಠಾಣೆ ರವರು ದಿನಾಂಕ 07.02.2020 ರಂದು ರಾತ್ರಿ 10-30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಕ್ಕದ ರಸ್ತೆಯಲ್ಲಿ ದಟ್ಟವಾಗಿ ಹೊಗೆ ಬರುತ್ತಿದ್ದುದನ್ನು ಕಂಡು ಹೋಗಿ ನೋಡಲಾಗಿ, ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟಾಟಾ ಈಚರ್ ಟೆಂಪೋ ನಂ ಕೆ.ಎ-05 ಎಫ್-9427 ಗೆ ಯಾರೋ ಕಿಡಗೇಡಿಗಳು  ಬೆಂಕಿಯನ್ನು ಹಚ್ಚಿ ಸುಟ್ಟುಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 03

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕುಮುದಾ, ಎನ್.ಟಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರ 21 ವರ್ಷದ ಮಗಳು ಕು|| ಪ್ರಿಯಾಂಕ ಎಂಬಾಕೆಗೆ ಆಗಾಗ ಹೊಟ್ಟೆನೋವು ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ  ಹೊಟ್ಟೆ ನೋವು ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಹೊಂದಿ, ದಿನಾಂಕ:08.02.2020 ರಂದು ಮದ್ಯಾಹ್ನ  2.00 ರಿಂದ 2.30 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಚಾವಣಿಯ ರೀಪರ್ ಗೆ ಓಣಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ವರಲಕ್ಷ್ಮೀ, ದೇಶಿಹಳ್ಳಿ, ಬಂಗಾರಪೇಟೆ ರವರ ಗಂಡನಾದ ಹರೀಶ್, 35 ವರ್ಷ ರವರಿಗೆ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 06.02.2020 ರಂದು ಹರೀಶ್ ರವರು ಅತಿಯಾಗಿ ಮದ್ಯಪಾನ ಮಾಡಿ, ಮನಸ್ಸಿಗೆ ಬೇಜಾರು ಮಾಡಿಕೊಂಡು ರಾತ್ರಿ 9.30 ಗಂಟೆಯಲ್ಲಿ ಮಲಗುವ ಕೊಠಡಿಯಲ್ಲಿ ಪ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ದೂರುದಾರರಾದ ಶ್ರೀ. ಮುನಿವೆಂಕಟೇಗೌಡ ಬಿನ್ ಮುನಿಯಪ್ಪ, ರಾಮಕೃಷ್ಣ ಹೆಗ್ಡೆ ಕಾಲೊನಿ, ಬಂಗಾರಪೇಟೆ ರವರ ಹೆಂಡತಿಯಾದ ಕೆ. ಸುಮಿತ್ರಮ್ಮ, 50 ವರ್ಷ ರವರಿಗೆ ಸುಮಾರು 7 ವರ್ಷಗಳಿಂದ ಹೊಟ್ಟೆ ಮತ್ತು ಸೊಂಟದ ನೋವು ಬರುತ್ತಿದ್ದು, ಔಷದಿಯನ್ನು ಕೊಡಿಸುತ್ತಿದ್ದರೂ ಸಹ ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 07.02.2020 ರಂದು ಮದ್ಯಾಹ್ನ 12-30 ಗಂಟೆಗೆ ಸುಮಿತ್ರಮ್ಮ ರವರಿಗೆ ಹೊಟ್ಟೆನೋವು ಮತ್ತು ಸೊಂಟದ ನೋವು ಜಾಸ್ತಿಯಾಗಿ ಹೆಚ್ಚಿನ ಮಾತ್ರೆಗಳನ್ನು ತಗೆದುಕೊಂಡಿದ್ದು, ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಅಸ್ಪತ್ರೆಯಲ್ಲಿ ದಾಖಲಾಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08.02.2020 ರಂದು ಬೆಳಿಗಿನ ಜಾವ 03-00 ಗಂಟೆಗೆ ಮೃತಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *