ದಿನದ ಅಪರಾಧಗಳ ಪಕ್ಷಿನೋಟ 09ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍08.01.2020 ರಂದು ದಾಖಲಾಗಿರುವಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹರೀಶ್ ಬಿನ್ ವೆಂಕಟೇಶ್, ಚಿಕ್ಕ ಯಲುವಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರ ಮನೆಯವರಿಗೆ ಹಾಗೂ ಅವರ ಸಂಬಂಧಿಕರಾದ ಮುನಿರಾಜು ರವರಿಗೆ ಜಮೀನು ವಿಚಾರದಲ್ಲಿ ತಕರಾರಿದ್ದು, ದಿನಾಂಕ 06.01.2020 ರಂದು ರಾತ್ರಿ 7.00 ಗಂಟೆಯಲ್ಲಿ  ಮುನಿರಾಜು & ಭಾಗ್ಯಮ್ಮ ರವರು ದೂರುದಾರರ ತಂದೆ-ತಾಯಿಯವರಿಗೆ ಪ್ರಾಣ ಬೆದರಿಕೆ ಹಾಕಿದ್ದು, ದಿನಾಂಕ 07.01.2020 ರಂದು ಸಂಜೆ 5.30 ಗಂಟೆಯಲ್ಲಿ ದೂರುದಾರರು ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂಗಾರಪೇಟೆಯ ಹುಣಸನಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ, ಮುನಿರಾಜು  ಮತ್ತು ಭಾಗ್ಯಮ್ಮ ರವರು ಹಾಗೂ ಅವರ ಜೊತೆಯಲ್ಲಿ ಇನ್ನಿಬ್ಬರು ಬಂದು ದೂರುದಾರರನ್ನು ಅಡ್ಡಗಟ್ಟಿ, ಪ್ರಾಣ ಬೆದರಿಕೆ ಹಾಕಿ, ಕೈಯಲ್ಲಿದ್ದ ಬ್ಲೇಡ್ ಮತ್ತು ಇಟ್ಟಿಗೆ ಕಲ್ಲುಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಕೃಷ್ಣಪ್ಪ, ಚಿಕ್ಕಬೊಂಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿಯ ತಮ್ಮನಾದ ಮರುಗೇಶ್ ರವರಿಗೆ ದೂರುದಾರರ ಮಗಳಾದ ಅರ್ಚನಾ ರವರನ್ನು ಕೊಟ್ಟು  ದಿನಾಂಕ 27.03.2019 ರಂದು ಮದುವೆ ಮಾಡಿದ್ದು, ಮುರುಗೇಶ್‌ ಮತ್ತು ಅರ್ಚನಾ ರವರು ದೂರುದಾರರ ಮನೆಯಲ್ಲೇ ವಾಸ ಇದ್ದು,   ದಿನಾಂಕ 29.09.2019 ರಂದು ಮದ್ಯಾಹ್ನ 3-30 ಗಂಟೆಗೆ ಮರುಗೇಶ್ ಕೆವಿ ರವರು ಕಾಮಸಮುದ್ರಂಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಲೋಚನಮ್ಮ ಕೊಂ ಹೊನ್ನೂರಪ್ಪ, ಕಣ್ಣೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡನಾದ ಹೊನ್ನೂರಪ್ಪ, 65 ವರ್ಷ ರವರು ದಿ-03-01-2020 ರಂದು  ರಾತ್ರಿ ಮನೆಯಿಂದ ಎಲ್ಲಿಯೋ ಹೊರಟು ಹೋಗಿ ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *