ದಿನದ ಅಪರಾಧಗಳ ಪಕ್ಷಿನೋಟ 08 ನೇ ನವೆಂಬರ್‌ 2018

ಮೋಸ/ವಂಚನೆ ಪ್ರಕರಣಗಳು : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂ,ಕ: 07.11.2018 ರಂದು ದೂರುದಾರರಾದ ಶ್ರೀ. ಮುನಿಸ್ವಾಮಿ ಬಿನ್‌ ವೇಲಾಯದಂ ಓರಿಯಂಟಲ್‌ಲೈನ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ದೂರುದಾರರು ರಾಬರ್ಟಸನ್ ಪೇಟೆ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಎಸ್.ಬಿ ಖಾತೆ ಹೊಂದಿದ್ದು ಅವರ ಖಾತೆಯ ಮೇಲೆ ಪಡೆದಿದ್ದ ಚೆಕ್ ಗಳ ಪೈಕಿ 913241 ರಿಂದ 913260 ಮತ್ತು 695591 ರಿಂದ 695690 ಮಾತ್ರ ದೂರುದಾರರ ಬಳಿ ಇದ್ದು ಇವುಗಳನ್ನು ಮತ್ತು ಕಳೆದುಹೋಗಿರುವ ಎಲ್ಲಾ ಚೆಕ್ಕುಗಳನ್ನು ರದ್ದುಗೊಳಿಸಲು ದಿನಾಂಕ: 09.10.2017 ರಂದು ಬ್ಯಾಂಕ್ ಮೇನೇಜರ್ ರವರಿಗೆ ಮನವಿ ಸಲ್ಲಿಸಲಾಗಿ ಅವರು ಎಲ್ಲಾ ಚೆಕ್ಕುಗಳನ್ನು ಅಮಾನ್ಯ  ಮಾಡಿದ ಬಳಿಕ ಕಳೆದು ಹೋಗಿರುವ ಚೆಕ್ ನಂಬರ್ ಪೈಕಿ 667240 ರಲ್ಲಿ ದೂರುದಾರರ ಖಾತೆಯಿಂದ ಆರೋಪಿ ಗೋವಿಂದರಾಜು ಎಂಬುವರು ದಿನಾಂಕ: 09.10.2017 ರಿಂದ 27.12.2017 ರ ನಡುವಿನ ಅವಧಿಯಲ್ಲಿ ಮೋಸದಿಂದ 3,80,000/-ರೂ ಡ್ರಾ ಮಾಡಿಕೊಳ್ಳಲು ಬ್ಯಾಂಕಿಗೆ ನೀಡಿ ಹಣ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿರುತ್ತಾರೆಂದು ದೂರು

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 07.11.2018 ರಂದು  ದೂರುದಾರರಾದ ಶ್ರೀ. ಮಂಜುನಾಥ ಬೇತಮಂಗಲ ಪೊಲೀಸ್ ಠಾಣೆ  ರವರು  ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಗಸ್ತಿಗೆ ಪೋತರಾಜನಹಳ್ಳಿ ಗ್ರಾಮಕ್ಕೆ ಹೋಗಿದ್ದಾಗ  ಗ್ರಾಮದ ಕೆರೆ ಅಂಗಳದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇಸ್ವಿಟ್ ಎಲೆಗಳಿಂದ ಯಾರೋ ಅಂದರ್ ಬಾಹರ್ ಅದೃಷ್ಟದ ಜೂಜಾಟ ಆಡುತ್ತಿರುತ್ತಾರೆ ಎಂದು ಮಾಹಿತಿ ಬಂದಿದ್ದು ಜೂಜಾಟ ಆಡುತ್ತಿರುವವರ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಗಿಡಗಳ ಮದ್ಯ ಕುಳಿತುಕೊಂಡು ಜೂಜಾಟ ಅಡುತ್ತಿದ್ದವರ ಮೇಲೆ ದಾಳಿ ನಡೆಸಿ ಹೆಸರು ವಿಳಾಸ ಕೇಳಲಾಗಿ 1. ಮುನಿರಾಜು,  2. ಗಣೇಶ್‌, 3 ಪ್ರಭಾಕರ್‌, 4. ಮಂಜುನಾಥ್‌ ರವರ ಬಳಿ ಇದ್ದ 52 ಇಸ್ಪಿಟ್‌ ಎಲೆಗಳು, ನಗದು  ರೂ 1330/- ಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ.

Leave a Reply

Your email address will not be published. Required fields are marked *