ದಿನದ ಅಪರಾಧಗಳ ಪಕ್ಷಿನೋಟ 08 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 07.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಸಂಬಂದ 02 ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ನಾರಾಯಣಮ್ಮ ಕೊಂ ಮುನಿರಾಜು, ದೊಡ್ಡವಲಗಮಾದಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ಮಗಳಾದ ಅರುಣ @ ಶಶಿಕಲ, 26 ವರ್ಷ ರವರು ದಿನಾಂಕ 06.01.2021 ರಂದು ಬೆಳಿಗ್ಗೆ 10.30 ಗಂಟೆಗೆ  ಬೆಂಗನೂರು ಬಳಿಯಿರುವ ಐ.ಡಿ.ಬಿ.ಎಲ್ ಗಾರ್ಮೆಂಟ್ಸ್ ನಲ್ಲಿ ಗೇಟ್ ಪಾಸ್ ತೆಗೆದುಕೊಂಡು ಹೋದವರು ಮನೆಗೆ ಹೋಗದೆ ಕಾಣೆಯಾಗಿರುತ್ತಾರೆ.

 ದೂರುದಾರರಾದ ಶ್ರೀ. ಬುಜ್ಜಿಬಾಬು ಬಿನ್ ಸುಬ್ಬಯ್ಯ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿ ಶ್ರೀಮತಿ. ರೇಣುಕಾ, 35 ವರ್ಷ ರವರು ದಿನಾಂಕ 06.01.2021 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಮಗಳಾದ ಇಕ್ಷಿತಾ(5 ವರ್ಷ) ರವರನ್ನು ಜೊತೆಯಲ್ಲಿ ಕರೆದುಕೊಂಡು ಹೋದವರು ಕೆಲಸಕ್ಕೆ ಹೋಗದೇ ಮನೆಗೂ ಬರದೇ ಕಾಣೆಯಾಗಿರುತ್ತಾರೆ.

– ದೊಂಬಿ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ತಿಮ್ಮಪ್ಪ ಬಿನ್ ಪ್ರಕಾಶ್, ಉದಯ್ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ 07.01.2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಮಂಜುಳ, ವಸಂತ, ಸುಮ, ಮಗೇಶ್, ಧನಲಕ್ಷ್ಮಿ, ಕಳಾವತಿ, ಮಂಜು, ಮಣಿ, ಮಗೇಶ್ವರಿ ಮತ್ತು ಲಕ್ಷ್ಮಮ್ಮ ರವರು ಗ್ರಾಮದಲ್ಲಿನ ಓವರ್ ಟ್ಯಾಂಕ್ ಬಳಿ ಇರುವ ಸರ್ಕಾರಿ ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಳನ್ನು ಕೀಳುತ್ತಿದ್ದು, ತಿಪ್ಪಮ್ಮ, ಮಂಜುಳ ಮತ್ತು ಕಾವ್ಯ ರವರು ಅದನ್ನು ನೋಡಿ  ಅಲ್ಲಿಗೆ  ಹೋಗಿ,  “ಈ ಜಾಗ ನಮ್ಮದು ಯಾಕೆ ಕ್ಲೀನ್ ಮಾಡುತ್ತಿದ್ದೀರಾ” ಎಂತ ಕೇಳಿದಾಗ ಕೈಗಳಿಂದ ತಿಪ್ಪಮ್ಮ, ಮಂಜುಳ ಮತ್ತು ಕಾವ್ಯ ರವರಿಗೆ ಹೊಡೆದು, ಕಾಲುಗಳಿಂದ ಮಚ್ಚನ್ನು ತೋರಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀಮತಿ. ವಸಂತಾ ಕೊಂ ಸುರೇಶ್, ಉದಯ್‌ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ಮಜರಾ ಗುಟ್ಟಹಳ್ಳಿ (ಉದಯ ನಗರ) ಕ್ಕೆ ಹೊಂದಿಕೊಂಡಂತೆ ಇರುವ  ಸರ್ಕಾರಿ ಗೋಮಾಳ ಜಮೀನಿನಲ್ಲಿ ಗ್ರಾಮಸ್ಥರು ಅವರವರ  ಇಷ್ಟದಂತೆ ನಿವೇಶನಗಳನ್ನು  ಮಾಡಿಕೊಂಡಿದ್ದು, ದಿನಾಂಕ 07.01.2021 ರಂದು  ಮದ್ಯಾಹ್ನ 1.00 ಗಂಟೆಗೆ  ದೂರುದಾರರು ಮನೆಯ ಬಳಿ ಇರುವಾಗ ಶಿವಶಂಕರ್, ಸೂರಿ,  ವೆಂಕಟೇಶ್ ರವರುಗಳು  ಬಂದು ಗೋಮಾಳ ಜಮೀನಿನಲ್ಲಿ ನಿವೇಶನಗಳನ್ನು ಮಾಡಿಕೊಂಡು ಮಾರಾಟಮಾಡಿದ್ದಿರಾ  ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಇವರ ಜೊತೆ ಗೋಪಾಲ್, ಕಲಾವತಿ, ತಿಪ್ಪಕ್ಕ, ಮಂಜುಳ, ರಮಣಿ,  ರಮ್ಯ ಜ್ಯೂತಿ ರವರುಗಳು ಸೇರಿಕೊಂಡು  ಅಕ್ರಮ ಗುಂಪುಕಟ್ಟಿಕೊಂಡು  ಬಂದು  ದೂರುದಾರರ ಸಂಬಂಧಿ ಮಂಜುಳಮ್ಮ ರವರ ಮನೆಯ ಹತ್ತಿರ ದೂರುದಾರರನ್ನು ಅಡ್ಡಗಟ್ಟಿ ನಿಲ್ಲಿಸಿ  ಕೈಗಳಿಂದ ಹೊಡೆದಿದ್ದು, ಜಗಳ ಬಿಡಿಸಲು ಬಂದ ಮಂಜುಳಮ್ಮ, ಸುಮ, ಮಗೇಶ್ವರಿ  ಮತ್ತು ಕಲಾವತಿ  ಹಾಗೂ ಲಕ್ಷ್ಮಮ್ಮ ರವರುಗಳಿಗೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ  ಹಾಕಿರುತ್ತಾರೆ.

Leave a Reply

Your email address will not be published. Required fields are marked *