ದಿನದ ಅಪರಾಧಗಳ ಪಕ್ಷಿನೋಟ 08 ನೇ ಎಪ್ರಿಲ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 07.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕನ್ನಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಆಂಡ್ರಸನ್ಪೇಟೆ ಮಾರ್ಕೆಟ್  ಬಳಿ  ಓ.ಡ್ಯಾನಿಯಲ್  ರಸ್ತೆಯಲ್ಲಿರುವ ಈ ಪಿರ್ಯಾದಿದಾರರಾದ ದಂಡಾಯುಧಪಾಣಿ, ಎಂವಿ ನಗರ, ಬೆಮಲ್ ನಗರ, ಕೆ.ಜಿ.ಎಫ್ ರವರ ಮಾಲಿಕತ್ವದ ನ್ಯೂ ಲಕ್ಕಿ ಲಿಕ್ಕರ್ಸ್  ಎಂಬ ಸಿ.ಎಲ್-02  ವೈನ್ಸ್ ಶಾಪ್ ಅನ್ನು  ಕರೋನ ವೈರಸ್  ವ್ಯಾಪಕವಾಗಿ  ಹರಡುತ್ತಿದ್ದರಿಂದ  ಮುಚ್ಚರಿಕೆ ಕ್ರಮವಾಗಿ ದಿನಾಂಕ 24.03.2020 ರಂದು  ಬೆಳಿಗ್ಗೆ 8.00 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ, ಕೋಲಾರ ರವರು ಜಿಲ್ಲಾದ್ಯಾಂತ ಲಾಕ್ಡೌನ್ ಅನ್ನು  ಪ್ರಕಟಿಸಿ  ಬಾರ್/ವೈನ್ಸ್ ಶಾಪ್‌ಗಳಲ್ಲಿ  ಮಧ್ಯ ಮಾರಾಟ ಮಾಡುವುದನ್ನು  ನಿಷೇದಿಸಿ ಅಬಕಾರಿ ಇಲಾಖೆಯಿಂದ ಅಂಗಡಿಯ ಬಾಗಿಲಿಗೆ ಬೀಗ ಹಾಕಿ ಮೊಹರು ಮಾಡಿರುತ್ತಾರೆ. ಸದರಿ ಶಾಪ್ ಬಳಿ  ಪಿರ್ಯಾದಿದಾರರು ಪ್ರತಿ ದಿನ ಬಂದು ಹೋಗುತ್ತಿದ್ದು,  ದಿನಾಂಕ 06.04.2020 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 07.04.2020 ರ ಬೆಳಿಗ್ಗೆ  6.00  ಗಂಟೆಯ ಮದ್ಯೆ ಯಾರೋ ಕಳ್ಳರು  ವೈನ್ಸ್  ಶಾಪಿನ ಹಿಂಭಾಗದ ಗೋಡೆಯನ್ನು ರಂದ್ರ ಮಾಡಿ   ವೈನ್ಸ್  ಶಾಪ್ ಒಳಗೆ ಪ್ರವೇಶ  ಮಾಡಿ ಅಂಗಡಿಯಲ್ಲಿ  ಇಟ್ಟಿದ್ದ   ಸುಮಾರು 90,000/- ರೂ ಬೆಲೆ ಬಾಳುವ  906 ವಿವಿಧ ರೀತಿಯ ಮದ್ಯದ ಬಾಟೆಲ್‌ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ಇತರೆ : 01

ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಭಾರತದ್ಯಾಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ತುರ್ತು ಘೋಷಣೆ ಮಾಡಿದ್ದು, ಈ ಸಂಬಂಧ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ 01 ಪ್ರಕರಣ ದಾಖಲಾಗಿರುತ್ತದೆ.

ಮಾರಿಕುಪ್ಪಂ ಪೊಲೀಸ್ ಠಾಣೆ  ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದೊಬ್ಬರಿಗೆ ದೇಶದಾದ್ಯಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ತುರ್ತು ಘೋಷಣೆ ಮಾಡಿ(ಲಾಕ್ ಡೌನ್), ದಿನಾಂಕ 25.03.2020 ರಿಂದ 14.04.2020 ರವರೆಗೆ ಎಲ್ಲಾ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿಸಿ ಹಾಗೂ ಜನರ ಓಡಾಟವನ್ನು ನಿಯಂತ್ರಿಸಲು ಆದೇಶವಾಗಿದ್ದು, ಸಾರ್ವಜನಿಕರ ಅವಶ್ಯಕತೆಗೆ ಬೇಕಾದ ಹಾಲು, ತರಕಾರಿ, ಮೆಡಿಕಲ್ ಸ್ಟೋರ್ ಮತ್ತು ದಿನಸಿ ಅಂಗಡಿಗಳನ್ನು ನಿಗದಿತ ಅವದಿಯಲ್ಲಿ ತೆಗೆಯಲು ಅನುಮತಿ ನೀಡಿರುತ್ತದೆ. ಹೀಗಿರುವಾಗ, ದಿನಾಂಕ 07.04.2020 ರಂದು ಈ ಕೇಸಿನ ಪಿರ್ಯಾದಿದಾರರು ಶ್ರೀಮತಿ ರಾಜೇಶ್ವರಿ,  ಪ್ರೋಬೇಷನರಿ ಪಿಎಸ್‌ಐ ರವರು  ಮತ್ತು ಸಿಬ್ಬಂದಿಯವರು ಕೆಂಪಾಪುರ ಚೆಕ್‌ಪೋಸ್ಟ್ ನಲ್ಲಿ ಬೆಳಿಗ್ಗೆ 11.30 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಒಂದು ದ್ವಿಚಕ್ರ ವಾಹನದಲ್ಲಿ 3 ಜನ ಮಂಜುನಾಥ, ಅಭಿಷೇಕ್, ಲಕ್ಷ್ಮಿನಾರಾಯಣ, ಬ್ಯಾಟರಾಯನಹಳ್ಳಿ, ಮಾರಿಕುಪ್ಪಂ ರವರು ಬರುತ್ತಿದ್ದವರನ್ನು ತಡೆದು ವಾಹನವನ್ನು ನೋಡಲಾಗಿ ನಂಬರ್ ಪ್ಲೇಟ್ ಇರುವುದಿಲ್ಲ. ಆರೋಪಿಗಳು ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಕೋಲಾರ ಜಿಲ್ಲಾಧಿಕಾರಿಗಳು ಹೊರಡಿಸಿರುವ ನಿಷೇದಾಜ್ಞೆ ಜಾರಿಯಲ್ಲಿದ್ದರು ಸಹ ಸದರಿ ಆದೇಶವನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಇವರುಗಳ ಕಾನೂನು ಕ್ರಮ ಜರುಗಿಸಿರುತ್ತಾರೆ.

– ಹಲ್ಲೆ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಗಣಪತಿ ಬಿನ್ ಚಿನ್ನಸ್ವಾಮಿನಾಯ್ಡು, ಕಣ್ಣೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಹೆಂಡತಿ ಅಮರಮ್ಮ ರವರಿಗೆ ಮತ್ತು ಕನಕಮ್ಮ ರವರಿಗೆ ದಿನಾಂಕ-06-04-2020 ರಂದು ಸಂಜೆ 6.00 ಗಂಟೆಯಲ್ಲಿ ಜಗಳವಾಗಿದ್ದು, ದಿನಾಂಕ 07-04-2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ದೂರುದಾರರ ಹೆಂಡತಿ ಅಮರಮ್ಮ ರವರೊಂದಿಗೆ ಕನಕಮ್ಮ ರವರ ಮಗನಾದ ಶಂಕರಪ್ಪ ರವರು ಕೆಟ್ಟಮಾತುಗಳಿಂದ ಬೈದು,  ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.

ದೂರುದಾರರಾದ ಶ್ರೀ. ಶಂಕರಪ್ಪ ಬಿನ್ ಚಂಗಪ್ಪ, ಕಣ್ಣೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ ಗಣೇಶ್ ರವರು 75,000 ರೂ ಕೊಡಬೇಕಾಗಿದ್ದು, ದಿನಾಂಕ-07-04-2020 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಗ್ರಾಮದ ಹಾಲು ಡೈರಿ ಬಳಿ  ದೂರುದಾರರು ಗಣೇಶ್‌ ರವರನ್ನು ಹಣ ಕೇಳಿದಕ್ಕೆ, ಕೆಟ್ಟಮಾತುಗಳಿಂದ ಬೈದಿದ್ದು, ಅಮರಮ್ಮ, ಭರತ್‌ ಮತ್ತು ಹರೀಶ್‌  ರವರು ಅಲ್ಲಿಗೆ ಬಂದು ದೂರುದಾರರೊಂದಿಗೆ ಜಗಳ ಮಾಡಿ ಕೈಗಳಿಂದ ಮತ್ತು ಕೋಲಿನಿಂದ ಹೊಡೆದಿರುತ್ತಾರೆ.

Leave a Reply

Your email address will not be published. Required fields are marked *