ದಿನದ ಅಪರಾಧಗಳ ಪಕ್ಷಿನೋಟ 08 ನೇ ನವೆಂಬರ್ 2019

– ರಸ್ತೆ ಅಪಘಾತಗಳು :02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಮುನಿಯಪ್ಪ, ಬತ್ಲಹಳ್ಳಿ ಬಂಗಾರಪೇಟೆ, ರವರು ಕೆ.ಎಸ್.ಆರ್.ಟಿ.ಸಿ ಚಾಲಕರಾಗಿದ್ದು, ದಿನಾಂಕ 07-11-2019 ರಂದು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮದ್ಯಾಹ್ನ ಸುಮಾರು 4-20 ಗಂಟೆಯಲ್ಲಿ ಭಾವರಹಳ್ಳಿ ಗೇಟ್ ನಲ್ಲಿ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಬಸ್ಸನ್ನು ನಿಲ್ಲಿಸಿದ್ದು, ಸದರಿ ಬಸ್ ನ ಹಿಂಭಾಗದಲ್ಲಿ ಕೆ.ಎ -01 ಎಂ.ಹೆಚ್-4879 ಬುಲೇರೋ ವಾಹನದ ಚಾಲಕ ಅತಿವೇಗ ಮತ್ತು ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ ಗೆ ಡಿಕ್ಕಿಪಡಿಸಿದ ಪ್ರಯುಕ್ತ ಬಸ್ ನ ಹಿಂಭಾಗದ ಬಲಬಾಗ ಕಡೆ ಜಖಂ ಗೊಂಡಿದ್ದು, ಬುಲೇರೋ ವಾಹನಕ್ಕೆ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಬುಲೇರೋ ವಾಹನದಲ್ಲಿದ್ದ ಚಾಲಕ ಮತ್ತು ಇನ್ನೊಬ್ಬರಿಗೆ ಸಣ್ಣ ಪುಟ್ಟ ರಕ್ತಗಾಯ ಮತ್ತು ತರಚಿದ ಗಾಯಗಳಾಗಿರುತ್ತೆಂತ ದೂರು ನೀಡಿರುತ್ತಾರೆ.

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟಾಚಲಪತಿ ಬಿನ್ ಮುನಿವೆಂಕಟಪ್ಪ, ದೊಡ್ಡವಲಗಮಾದಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 03-11-2019 ರಂದು ರಾತ್ರಿ 9-50 ಗಂಟೆಯಲ್ಲಿ  ದ್ವಿಚಕ್ರ ವಾಹನ TVS SUPER XL NO KA08-Q.6004 ನ್ನು ಚಲಾಯಿಸಿಕೊಂಡು ಬಂಗಾರಪೇಟೆ-ಕೆ.ಜಿ.ಎಪ್. ರಸ್ತೆ ಅಜ್ಜಪ್ಪನಹಳ್ಳಿ ಮಾರ್ಗದ, ಮಲ್ಲೆಂಗೂರ್ಕಿ ಗ್ರಾಮದ ಕ್ರಾಸ್ ಬಳಿ ಹೋಗುತ್ತಿರುವಾಗ, ಕೆ.ಜಿ.ಎಫ್. ಕಡೆಯಿಂದ ಒಂದು ಬಿಳಿ ಬಣ್ಣದ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ದೂರುದಾರರಿಗೆ ಗಾಯಗಳಾಗಿರುತ್ತದೆ. ಅಪಘಾತಪಡಿಸಿದ ಕಾರಿನ ಚಾಲಕ ವಾಹನ ಸಮೇತ ಪರಾರಿಯಾಗಿರುತ್ತಾನೆ.

Leave a Reply

Your email address will not be published. Required fields are marked *