ದಿನದ ಅಪರಾಧಗಳ ಪಕ್ಷಿನೋಟ 08 ನೇ ಆಗಸ್ಟ್‌ 2019

– ಸಾಧಾರಣ ಕಳ್ಳತನ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:07/08/2019 ರಂದು ದೂರುದಾರರಾದ ಶ್ರೀ. ಈಶ್ವರ್‌ ಕೋಂ ವೆಂಕಟೇಶಪ್ಪ ಕುಂಬಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ: 31/05/2019 ರಂದು ಬೆಳಿಗ್ಗೆ 7.30 ಗಂಟೆ ಸಮಯದಲ್ಲಿ ಅವರ ತಂದೆಯವರಾದ ವೆಂಕಟೇಶಪ್ಪರವರೊಂದಿಗೆ ದ್ವಿಚಕ್ರ ವಾಹನ ಫ್ಯಾಷನ್ ಪ್ರೋ ಸಂಖ್ಯೆ: ಕೆ.ಎ.07-ಡಬ್ಲ್ಯೂ-4627 ರಲ್ಲಿ ಕುರಿಗಳನ್ನು ತೆಗೆದುಕೊಂಡು ಹೋಗಲು ಬಂಗಾರಪೇಟೆ ಸಂತೆಗೆ ಬಂದು ಸದರಿ ದ್ವಿಚಕ್ರ ವಾಹನವನ್ನು ಬಂಗಾರಪೇಟೆ ಜೈನ್ ಸ್ಕೂಲ್ ಪಕ್ಕದಲ್ಲಿ ನಿಲ್ಲಿಸಿ ಕುರಿಗಳನ್ನು ತೆಗೆದುಕೊಳ್ಳಲು ಸಂತೆ ಒಳಗೆ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ದ್ವಿಚಕ್ರ ವಾಹನದ ಬೆಲೆ ರೂ 30,000/-ಗಳ ಬಾಳುವದಾಗಿರುತ್ತದೆ.

– ರಸ್ತೆ ಅಪಘಾತಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:07.08.2019 ರಂದು ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್‌ ವೆಂಕಟೇಶಪ್ಪ ಬೀರನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಅಣ್ಣರವರ ಹೆಂಡತಿ ದಿನಾಂಕ:06.07.2019 ರಂದು ಬೆಳಗ್ಗೆ 07-15 ಗಂಟೆಯಲ್ಲಿ ಮನೆಯಿಂದ ಆರೋಪಿ ನಾಗರಾಜ್ ರವರು ಅವರ ದ್ವಿಚಕ್ರ ವಾಹನ ಸುಜಿಕಿ ಜಿಕ್ಸರ್ ಸಂಖ್ಯೆ KA-01 HR 8650 ರಲ್ಲಿ ದೂರುದಾರರ ವಾಹನದ ಹಿಂಬದಿಯಲ್ಲಿ ಕುಳಿತುಕೊಂಡು ವಾಹನವನ್ನು ಚಲಾಯಿಸಿಕೊಂಡು ದಿಂಬಾಲದೆಬ್ಬನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಂದಾಗ ಹನುಮಂತಪ್ಪ ರವರು ಕೆ.ಜಿ.ಎಫ್ ಗೆ ಬರುವುದಾಗಿ ಹೇಳಿ ಸದರಿ ದ್ವಿಚಕ್ರ ವಾಹನದಲ್ಲಿ ದೂರುದಾರರನ್ನು ಹಿಂದುಗಡೆ ಕುಳಿತುಕೊಂಡಿದ್ದು ಆರೋಪಿ ನಾಗರಾಜ್ ದ್ವಿಚಕ್ರ ವಾಹನವನ್ನು ಚಲಾಸಿಕೊಂಡು ಕೆ.ಜಿ.ಎಪ್-ಕಾಮಸಮುದ್ರ ರಸ್ತೆಯ, ಬೋಯಿಸೊಣ್ಣೇನಹಳ್ಳಿ ಗ್ರಾಮದ ಬಳಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ನಾಯಿ ಅಡ್ಡ ಬಂದಿದ್ದು ದ್ವಿಚಕ್ರವಾಹನವನ್ನು ತಕ್ಷಣ ಬ್ರೇಕ್ ಹಾಕಿದಾಗ ವಾಹನ ಅತೋಟಿಗೆ ಸಿಗದೆ ವಾಹನ ಸಮೇತ ಮೂರು ಜನರು ಕೆಳಕ್ಕೆ ಬಿದ್ದ ಪ್ರಯುಕ್ತ ರಕ್ತ ಗಾಯಗಳಾಗಿರುತ್ತದೆ.
– ಇತರೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕೆಂಪೇಗೌಡ ಮೇರವಣೆಗೆ ಸಮಯದಲ್ಲಿ ದ್ವನಿವರ್ದಕಗಳನ್ನು ಹೆಚ್ಚಿನ ಶಬ್ದವನ್ನು ಇಟ್ಟುಕೊಂಡು ಮೇರವಣಿಗೆ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.08.2019 ರಂದು ಕಣಿಂಬೆಲೆ ಗ್ರಾಮದ ಬಂಗಾರಪೇಟೆ ತಾಲ್ಲೂಕು ವಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ ರವರು ಠಾಣೆಗೆ ಹಾಜರಾಗಿ ದಿನಾಂಕ 07.08.2019 ರಂದು ಕೆಂಪೇಗೌಡ ಭವನ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣೆ, ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮಕ್ಕೆ ದ್ವನಿವರ್ಧಕ ಅಳವಡಿಸಿಕೊಳ್ಳಲು ಹಾಗೂ ಪೊಲೀಸ್ ಬಂದೋಬಸ್ತ್ ನೀಡಲು ಅನುಮತಿ ಕೋರಿದ್ದು ಅದರಂತೆ ಪಿಎಸ್‌‌ಐ ಬಂಗಾರಪೇಟೆ ರವರು ಶ್ರೀನಿವಾಸ, ಜಗದೀಶ್ , ಮಂಜುನಾಥ್ , ಶ್ರೀನಿವಾಸ , ವಲ್ಲಮ್ಮ ಮತ್ತು ಶಿವಕುಮಾರ್‌ ರವರೆಗೆ ದಿನಾಂಕ 05.08.2019 ರಂದು ನಾಡಪ್ರಭು ಶ್ರೀ. ಕೆಂಪೇಗೌಡರ ಭವನದ ಉದ್ಘಾಟನೆ ಪ್ರಯುಕ್ತ ಬಂಗಾರಪೇಟೆ ಪಟ್ಟಣದಲ್ಲಿ ಸದರಿ ಕಾರ್ಯಕ್ರಮಕ್ಕೆ ಯಾವುದೇ ವನ್ಯಜೀವಿಗಳನ್ನು ಉಪಯೋಗಿಸಿದಲ್ಲಿ ಸಂಬಂದಪಟ್ಟವರಿಂದ ಅನುಮತಿಯನ್ನು ಪಡೆಯಬೇಕೆಂದು, ಸದರಿ ಕಾರ್ಯಕ್ರಮಗಳಿಗೆ ಪಲ್ಲಕ್ಕಿಗಳಿಗೆ ಬಳಸುವ ಟ್ರಾಕ್ಟರ್, ಕಾರ್, ಮಿನಿ ಬಸ್ ಹಾಗೂ ಇತರೆ ವಾಹನಗಳಿಗೆ ಸಂಬಂಧಪಟ್ಟ ಆರ್.ಸಿ ಪುಸ್ತಕ, ಇನ್‌ಶೂರೆನ್ಸ್, ಚಾಲನೆ ಮಾಡುವವರ ಚಾಲನಾ ಪರವಾನಗಿಯನ್ನು ಪ್ರತಿಯೊಂದು ವಾಹನಕ್ಕೂ ದ್ವನಿ ವರ್ಧಕವನ್ನು ಬಳಸಿದ್ದಲ್ಲಿ ಅದಕ್ಕೆ ಸರ್ಕಾರಕ್ಕೆ ಹಣವನ್ನು ಪಾವತಿಸಿ, ಅದರ ಚಲನ್‌ನ್ನು ಒದಗಿಸಲು ಸದರಿ ವಾಹನಗಳಲ್ಲಿ ಡಿ.ಜೆ ಸೆಟ್‌ಗಳನ್ನು ಬಳಸುವಂತಿಲ್ಲ. ಬಂಗಾರಪೇಟೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ನಿರ್ದಿಷ್ಟಪಡಿಸಿದ ಮಾರ್ಗದಲ್ಲಿ ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮವನ್ನು ಬೆಳಿಗ್ಗೆ 10.00 ಗಂಟೆಯಿಂದ ಮದ್ಯಾಹ್ನ 2.00 ಗಂಟೆವರೆಗೆ ನಡೆಸಿ ಮುಕ್ತಾಯಗೊಳಿಸುವುದೆಂದು. ಸ್ವಯಂ ಸೇವಕರನ್ನು ನೇಮಿಸಿಕೊಂಡು, ಸುಗಮವಾದ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆಗಳನ್ನು ಪಾಲಿಸಲು ಲಿಖಿತವಾಗಿ ಪೊಲೀಸ್ ನೋಟೀಸ್‌ನ್ನು ನೀಡಿರುತ್ತದೆ. ಸೂಚಿಸಿರುವ ಮಾರ್ಗದಲ್ಲಿ ಹೋಗಲು ಸೂಚನೆಯನ್ನು ಪಾಲಿಸಲು ಪೊಲೀಸ್ ನೋಟೀಸ್‌ನ್ನು ನೀಡಿದ್ದು ದಿನಾಂಕ 07.08.2019 ರಂದು ನಾಡಪ್ರಭು ಶ್ರೀ. ಕೆಂಪೇಗೌಡರ ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೆ ವಕ್ಕಲಿಗರ ಸಂಘದ ಪದಾದಿಕಾರಿಗಳು, ಸಮುದಾಯದವರು, ಸ್ಥಬ್ದ ಚಿತ್ರಗಳು, ಮೂರು ಕುದುರೆಗಳು, ಡಿಜೆ ಸೆಟ್(ದ್ವನಿವರ್ಧಕ)ಗಳನ್ನು ವಾಹನಗಳಿಗೆ ಅಳವಡಿಸಿಕೊಂಡು ಅತಿಹೆಚ್ಚು ಶಬ್ದವನ್ನು ಇಟ್ಟುಕೊಂಡು, ಕೆಂಪೇಗೌಡ ಭವನದಿಂದ ಎ.ಪಿ.ಎಂ.ಸಿ ಚೆಕ್ ಪೋಸ್ಟ್ ಮುಖೇನ ಬಂಗಾರಪೇಟೆ ಪಟ್ಟಣದಲ್ಲಿ ಸುಮಾರು 67 ಕ್ಕಿಂತ ಹೆಚ್ಚು ಸ್ಥಬ್ದ ಚಿತ್ರಗಳನ್ನು ಮತ್ತು ಡಿಜೆ ಸೆಟ್(ದ್ವನಿವರ್ಧಕ)ಗಳನ್ನು ಬಳಸಿಕೊಂಡು, ಆರೋಪಿಗಳು ಪೊಲೀಸ್ ನೋಟೀಸ್‌ನ್ನು, ಮಾಹಿತಿಯನ್ನು ಮತ್ತು ಹಿಂಬರಹವನ್ನು ನೀಡಿದ್ದರೂ ಸಹ ಅದನ್ನು ಲೆಕ್ಕಿಸದೇ ಸೂಚಿಸಿದ ಮಾರ್ಗವನ್ನು ತಪ್ಪಿಸಿ, ಡಿಜೆ ಸೆಟ್‌ಗಳನ್ನು ಮತ್ತು ಕುದುರೆಗಳನ್ನು ಬಳಸಬಾರದೆಂದು ನೋಟೀಸ್‌ನಲ್ಲಿ ತಿಳಿಸಿದರೂ ಸಹ ಬಳಸಿಕೊಂಡು ನಿರ್ಧಿಷ್ಟ ಪಡಿಸಿದ ಸಮಯದಂತೆ ಪಾಲಿಸಬೇಕೆಂದು ಸೂಚಿಸಿದ್ದರೂ ಅದನ್ನು ಉಲ್ಲಂಘನೆ ಮಾಡಿ ಕಾನೂನು ಬಾಹಿರವಾಗಿ ನಡೆದುಕೊಂಡು ಸುಗಮವಾದ ಸಂಚಾರಕ್ಕೆ ಅಡ್ಡಿಪಡಿಸಿರುವ ಕಾರಣ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

Leave a Reply

Your email address will not be published. Required fields are marked *