ದಿನದ ಅಪರಾಧಗಳ ಪಕ್ಷಿನೋಟ 08 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:07.07.2019 ರಂದು ಸಂಜೆ ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ದುರ್ಗಾದೇವಿ ಕೊಂ ಕಾಂತರಾಜ್, ಅಂಬೇಡ್ಕರ್ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳಾದ ಶೃತಿ ಐಶ್ವರ್ಯ, 19 ವರ್ಷ ರವರು ದಿನಾಂಕ 06.07.2019 ರಂದು ರಾತ್ರಿ ಮನೆಯಲ್ಲಿ ಮಲಗಿದ್ದು, ದೂರುದಾರರು ರಾತ್ರಿ 1.00 ಗಂಟೆಗೆ ನೋಡಿದಾಗ ಶೃತಿ ಐಶ್ವರ್ಯ ಮನೆಯಲ್ಲಿ ಇರದೆ ಕಾಣೆಯಾಗಿರುತ್ತಾರೆ. 

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು|| ನಿವೇದಿತ ಬಿನ್ ಮುನಿವೆಂಕಟಪ್ಪ, ದೊಡ್ಡೂರು ಕರಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಅಕ್ಕ ಎಂ. ಸಂದ್ಯಾರಾಣಿ, 22 ವರ್ಷ ರವರು ದಿನಾಂಕ 06-07-2019 ರಂದು ರಾತ್ರಿ  8-30 ಗಂಟೆಯಲ್ಲಿ ಮನೆಯಿಂದ ಹೊರಗೆ ಹೋದವಳು ಮನೆಗೆ ಬರದೆ ಕಾಣೆಯಾಗಿರುತ್ತಾರೆ. 

Leave a Reply

Your email address will not be published. Required fields are marked *