ದಿನದ ಅಪರಾಧಗಳ ಪಕ್ಷಿನೋಟ 08ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍07.01.2020 ರಂದು  ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲಗೌಡ ಬಿನ್ ಕೃಷ್ಣಪ್ಪ, ನೇರಳಕೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ಈಗ್ಗೆ 15 ದಿನಗಳ ಹಿಂದೆ ಎಸ್.ಜಿ.ಕೋಟೆ ಶನೇಶ್ವರ ದೇವಾಲಯ ಮತ್ತು ಆಂಜನೇಯ ಸ್ವಾಮಿ ದೇವಾಲಯದ ಬಳಿ ಬಿಕ್ಷೆ ಬೇಡಿಕೊಂಡು ಇದ್ದ ಸುಮಾರು 70 ವರ್ಷ ವಯಸ್ಸಿನ ಗಂಡಸು ಎಡಕಾಲು ಮತ್ತು ಬಲಕೈಗೆ ಹುಣ್ಣುಗಳಾಗಿ ಯಾವುದೋ ಖಾಯಿಲೆಯಿಂದ ಅಸ್ವಸ್ಥನಾಗಿ ದಿನಾಂಕ 06.01.2020 ರಂದು ರಾತ್ರಿ ದೂರುದಾರರ ರವರ ಗದ್ದೆಯಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *