ದಿನದ ಅಪರಾಧಗಳ ಪಕ್ಷಿನೋಟ 08ನೇ ಸೆಪ್ಟೆಂಬರ್‌ 2019

– ಹಲ್ಲೆ : 02

 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಿವಾಕರ್‌ ಬಿನ್ ಕುಮಾರ್‌, ವಸಂತ್‌ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ:06-09-2019 ರಂದು ರಾತ್ರಿ 11-45 ಗಂಟೆಯಲ್ಲಿ ಮನೆಯ ಬಳಿ ಇದ್ದಾಗ, ವಿಜಯನಗರದ ಅಭಿಲಾಷ್ ರವರು ದೂರುದಾರರಿಗೆ ಪೋನ್ ಮಾಡಿ, ನಿನಗೆ ಬರ್ತಡೇ ವಿಷ್ ಮಾಡಬೇಕಾಗಿದೆ ವಸಂತನಗರದ ಕೆನರಾ ಬ್ಯಾಂಕ್ ಬಳಿ ಬಾ ಎಂದು ಕರೆದಿದ್ದು, ಮಧ್ಯರಾತ್ರಿ 12-05 ಗಂಟೆಗೆ ದೂರುದಾರರು ಕೆನರಾ ಬ್ಯಾಂಕ್ ಬಳಿ ಹೋದಾಗ, ಅಭಿಲಾಷ್, ಲಕ್ಷ್ಮಣ್ @ ಲಕ್ಷ್ಮೀನಾರಾಯಣ, ಪಾಲರಾಜ್ ಮತ್ತು ಲಕ್ಷ್ಮಣ್ ರವರು ಅಲ್ಲಿಗೆ ಬಂದು,  ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಬೀರಪ್ಪ, ತ್ಯಾರನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 06.09.2019 ರಂದು ರಾತ್ರಿ 8-15 ಗಂಟೆಯಲ್ಲಿ ಮನೆಯಲ್ಲಿರುವಾಗ, ಆರೋಪಿ ಅಶ್ವಥ್‌ ರವರು ದೂರುದಾರರ ಮನೆಯ ಬಳಿ ಬಂದು ನಮ್ಮ ಜಮೀನನ್ನು ನೀವೇ ತೆಗೆದುಕೊಂಡಿದ್ದೀರಿ, ನನ್ನ ಮೊದಲನೇ ಹೆಂಡತಿ ಸಾಯಲು ನೀವೆ ಕಾರಣ ಎಂದು ಏಕಾಏಕಿ ಜಗಳ ಮಾಡಿ ಕೆಟ್ಟ ಮಾತುಗಳಿಂದು ಬೈದು, ಮಚ್ಚಿನಿಂದ ದೂರುದಾರರ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

– ರಸ್ತೆ ಅಪಘಾತಗಳು : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿ ಬಿನ್ ವೆಂಕಟೇಶಪ್ಪ, ತುಮಟೆಗಿರಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ 07.09.2019 ರಂದು ಬೆಳಿಗ್ಗೆ 11.05 ಗಂಟೆಗೆ ದೂರುದಾರರ ತಮ್ಮ ಕನಕರಾಜ್, 24 ವರ್ಷ ರವರು  ದ್ವಿಚಕ್ರ ವಾಹನ ಬಜಾಜ್ ಪಲ್ಸರ್ ಡಿಟಿಎಸ್ 150 ಸಿಸಿ ಸಂಖ್ಯೆ ಕೆಎ೦8ಎಕ್ಸ್4439 ರಲ್ಲಿ   ತಂದೆ ವೆಂಕಟೇಶಪ್ಪ, 59 ವರ್ಷ ರವರನ್ನು ಹಿಂಭಾಗ ಕುರಿಸಿಕೊಂಡು  ಕೆಜಿಎಫ್ ನಿಂದ ಆಂದ್ರಪ್ರದೇಶದ ಕುಪ್ಪಂ ಗೆ ಹೋಗುವ ರಸ್ತೆಯ ಕೊಡಿಗೇನಹಳ್ಳಿ ಮತ್ತು ಘಟ್ಟಮಾದಮಂಗಲ ಗ್ರಾಮಗಳ ಮದ್ಯೆ ಹೋಗುತ್ತಿದ್ದಾಗ, ಆಂದ್ರಪ್ರದೇಶದ ಸರ್ಕಾರಿ ಬಸ್ ಸಂಖ್ಯೆ ಎಪಿ 29 ಜೆಡ್ 2124 ನ್ನು ಚಾಲಕ ರಾಜನ್ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕನಕರಾಜ್ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದಲ್ಲಿದ್ದ ಕನಕರಾಜ್ ಮತ್ತು ವೆಂಕಟೇಶಪ್ಪ ರವರು  ಮೃತಪಟ್ಟಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್ ಕುಮಾರ್‌ ಬಿನ್ ಚಂದ್ರನ್, ಕೋರಮಂಡಲ್, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ,  ದಿನಾಂಕ-05/09/2019 ರಂದು ರಾತ್ರಿ 10.30 ಗಂಟೆಗೆ ಎಜೆಲ್ ರವರು ಪಲ್ಸರ್ ದ್ವಿಚಕ್ರ ವಾಹನ ಸಂಖ್ಯೆ K.A-08 S 2578 ರಲ್ಲಿ ಆಂಡ್ರಸನ್ ಪೇಟೆ ಸುಸ್ಯೆಪಾಳ್ಯಂ ಬಳಿ ಚಲಾಯಿಸಿಕೊಂಡು ಬರುವಾಗ ರಾಬರ್ಟಸನ್ ಪೇಟೆ ಕಡೆಯಿಂದ ಯಮಹಾ ದ್ವಿಚಕ್ರವಾಹನ ಸಂಖ್ಯೆ-ಕೆ.ಎ 08 ವಿ 8959 ನ್ನು ಅದರ ಸವಾರನು ಅತಿ ವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಜೆಲ್ ರವರ ಪಲ್ಸರ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ಎಜೆಲ್ ರವರು ವಾಹನ ಸಮೇತ ಕೆಳಕ್ಕೆ ಬಿದ್ದಾಗ ರಕ್ತಗಾಯಗಳಾಗಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಕೃಷ್ಣಪ್ಪ, ಚಿಕ್ಕಬೊಂಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಅರ್ಚನಾ.ಎಸ್ ರವರನ್ನು ದಿನಾಂಕ 27.03.2019 ರಂದು ಶ್ರೀ.ಕೆ.ವಿ ಮುರುಗೇಶ್ ರವರಿಗೆ ಕೊಟ್ಟು ಮದುವೆ ಮಾಡಿದ್ದು ಅಂದಿನಿಂದ ದೂರುದಾರರ ಮಗಳು ಮತ್ತು ಅಳಿಯ ದೂರುದಾರರ ಮನೆಯಲ್ಲಿಯೇ ವಾಸವಾಗಿದ್ದು, ದಿನಾಂಕ 20.08.2019 ರಂದು ಬೆಳಿಗ್ಗೆ 05.00 ಗಂಟೆಗೆ ದೂರುದಾರರ ಅಳಿಯ ಶ್ರೀ.ಕೆ.ವಿ ಮುರುಗೇಶ್, 28 ವರ್ಷ ರವರು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗುರಪ್ಪ ಬಿನ್ ನಾಗಪ್ಪ, ಬಿಲ್ಲೇರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಶ್ರೀಮತಿ ರಾಜೇಶ್ವರಿ, 26 ವರ್ಷ ರವರನ್ನು 8 ವರ್ಷಗಳ ಹಿಂದೆ ಅನಂತರಾಮಪುರ ಗ್ರಾಮದ ಶಿವಪ್ಪ ರವರಿಗೆ ಮದುವೆ ಮಾಡಿಕೊಟ್ಟಿದ್ದು, 10 ತಿಂಗಳ ಹಿಂದೆ ಗಂಡನ ಜೊತೆ ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡು ಮಗನೊಂದಿಗೆ ಬಂದು ದೂರುದಾರರ ಮನೆಯಲ್ಲಿ ಇದ್ದು, 6 ವರ್ಷಗಳಿಂದ ಮಾನಸಿಕ ಆಶ್ವಸ್ಥತೆ ಯಿಂದ ಬಳಲುತ್ತಿದ್ದ ರಾಜೇಶ್ವರಿ ರವರು ದಿನಾಂಕ 05-09-2019 ರಂದು ಬೆಳಿಗ್ಗೆ 8.00 ಗಂಟೆಯಿಂದ 11.00 ಗಂಟೆಯ ಮದ್ಯೆ ಮನೆಯಿಂದ ಎಲ್ಲಿಯೋ ಹೋಗಿ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *