ದಿನದ ಅಪರಾಧಗಳ ಪಕ್ಷಿನೋಟ 08ನೇ ಮಾರ್ಚ್‌ 2021

 ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 07.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಮುನಿರಾಜು, ಸಕ್ಕನಹಳ್ಳಿ ಗ್ರಾಮ ರವರು ಎರಡು ದಿನಗಳ ಹಿಂದೆ ತನ್ನ ಟ್ರಾಕ್ಟರ್ ಟ್ರಾಲಿ ಮಾಡಿಸಲು ಬಂಗಾರಪೇಟೆಯ ಗಾಂಧಿನಗರದಲ್ಲಿರುವ ಸಿಂಗ್ ಗ್ಯಾರೇಜ್ ರವರಿಗೆ ಆರ್ಡರ್ ಮಾಡಿದ್ದು, ಟ್ರಾಲಿ ಕೆಲಸವನ್ನು ನೋಡಲು ದಿನಾಂಕ 07.03.2021 ರಂದು ಸಂಜೆ ಸುಮಾರು 4.00 ಗಂಟೆಯಲ್ಲಿ ಪಿರ್ಯಾದಿ ಹಾಗೂ ಆತನ ಮಗನಾದ ಸುಧನ್ ಎಂಬುವರು ಬಂದಿರುತ್ತಾರೆ. ಸುಧನ್ ರವರು ಸಿಂಗ್ ಗ್ಯಾರೇಜ್ ಬಳಿಯಿರುವ ಚರಂಡಿ ಕಲ್ಲಿನ ಮೇಲೆ ಕುಳಿತುಕೊಂಡಿದ್ದಾಗ, ಆರೋಪಿ ಪ್ರಸಾದ್ ಹುನಸನಹಳ್ಳಿ ಗ್ರಾಮ ರವರು ಏಕಾಏಕಿ ಸುಧನ್ ರವರನ್ನು ಕುರಿತು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮುಖದ ಹೊಡೆದು ಷರ್ಟನ್ನು ಹಿಡಿದು ಎಳೆದಾಡಿರುತ್ತಾರೆ. ಅಷ್ಟರಲ್ಲಿ ಗ್ರಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದವರು, ಮತ್ತಿತರರು ಗಲಾಟೆ ಬಿಡಿಸಿರುತ್ತಾರೆ. ಅಷ್ಟಕ್ಕೆ ಸುಮ್ಮನಾಗದೇ ಆರೋಪಿ ಪ್ರಸಾದ್, ಅನಿಲ್, ಉದಯ್ ಕೈಗಳಲ್ಲಿ ಲಾಂಗ್ ಗಳನ್ನು ಹಿಡಿದುಕೊಂಡು ಬಂದು ಸುಧನ್ ರವರನ್ನು ಕುರಿತು ‘ನಿನ್ನನ್ನು ಇದೇ ಲಾಂಗ್ ಗಳಿಂದ ಹೊಡೆದು ಕೊಲೆ ಮಾಡುತ್ತೇನೆಂದು ಕೂಗಾಡಿಕೊಂಡು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಷ್ಟರಲ್ಲಿ ಸುಧನ್ ರವರು ಅವರಿಂದ ತಪ್ಪಿಸಿಕೊಂಡಿರುತ್ತಾರೆಂದು ದೂರು ನೀಡಿರುತ್ತಾರೆ.

 ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 06.03.2021 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಪಿರ್ಯಾದಿ ಅಶೋಕ್, ಮರಗಲ್ ಗ್ರಾಮ ರವರ ಭಾವನಾದ ರಾಮಚಂದ್ರಪ್ಪ, ಬೂರ್ಗಮಾಕನಹಳ್ಳಿ ಗ್ರಾಮ ರವರು ತನ್ನ ದ್ವಿಚಕ್ರ ವಾಹನ ಸ್ಪ್ಲೆಂಡರ್ ಪ್ಲಸ್ ರಲ್ಲಿ ಬಂಗಾರಪೇಟೆ ಕಾಮಸಮುದ್ರಂ ರಸ್ತೆ ದಿನ್ನಕೊತ್ತೂರು ಗ್ರಾಮದ ಬಳಿ ಇರುವ ಭಾರತ್ ಗ್ಯಾಸ್ ಗೋಡನ್ ಬಳಿ ಹೋಗುತ್ತಿದ್ದಾಗ ತನ್ನ ದ್ವಿಚಕ್ರ ವಾಹನ ಸ್ಕಿಡ್ ಆಗಿ ಕೆಳಗೆ ಬಿದ್ದ ಪ್ರಯುಕ್ತ ರಾಮಚಂದ್ರಪ್ಪನ ತಲೆಗೆ, ಮೂಗು, ಬಾಯಿ, ಬಲಗೈಗೆ, ಬಲ ಕಾಲಿನ ಪಾದಕ್ಕೆ ರಕ್ತಗಾಯವಾಗಿ ಹೆಚ್ಚಿನ ರಕ್ತ ಗಾಯವಾಗಿರುತ್ತದೆ.

ದಿನಾಂಕ 07.03.2021 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಶಿವ, ೩೦ ವರ್ಷ, ಜಾಗೃತಿ ನಗರ, ಬಳ್ಳಾರಿ ಹಾಗೂ ರಾಮ್ ಸಿಂಗ್, ಬಂಗಾರಪೇಟೆ ವಾಸಿ ಎಂಬುವರು ಜೆಸಿಬಿ ಯಂತ್ರದ ಪೈಪ್ ತರಲು ದ್ವಿಚಕ್ರ ವಾಹನ ಹೀರೋಹೋಂಡಾ ಜಿ.ಆರ್.ಎಸ್ ಸಂಖ್ಯೆ ಕೆಎ-35-ಆರ್-9079 ರಲ್ಲಿ ಬಂಗಾರಪೇಟೆ ಟೌನ್ ಕಡೆಗೆ ಬೂದಿಕೋಟೆ ಸರ್ಕಲ್ ಬಳಿ ಬರುತ್ತಿದ್ದಾಗ, ಬಂಗಾರಪೇಟೆ ಬಸ್ ಸ್ಟಾಂಡ್ ಕಡೆಯಿಂದ ಕೆ.ಆರ್.ಆರ್ ಬಸ್ ಸಂಖ್ಯೆ ಕೆಎ-08-6219 ರ ವಾಹನವನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಮತ್ತು ರಾಮ್ ಸಿಂಗ್ ರವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಾಗ ಪಿರ್ಯಾದಿಗೆ ಎಡಗಾಲಿಗೆ, ಎಡಕೈಗೆ ಮತ್ತು ಎಡಕೆನ್ನೆಗೆ ರಕ್ತಗಾಯಗಳಾಗಿರುತ್ತದೆ.

ದಿನಾಂಕ 05.03.2021 ರಂದು ಮದ್ಯಾಹ್ನ ಈ ಕೇಸಿನ ಪಿರ್ಯಾದಿ ರಿಹಾನ್ ಪಾಷ, ೧೮ ವರ್ಷ, ಮಹಲಕ್ಷ್ಮಿ ಲೇಔಟ್, ಕೋಲಾರ ರವರು ಬಂಗಾರಪೇಟೆಯಲ್ಲಿರುವ ದರ್ಗಾಗೆ ನಮಾಜ್ ಗೆ ಬಂದು, ನಂತರ ಮನೆಗೆ ಕೋಲಾರಕ್ಕೆ ಹೋಗಲು ಸಂಜೆ ಸುಮಾರು 5.00 ಗಂಟೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಹಂಚಾಳ ಸಮೀಪ ಹೋಗುತ್ತಿದ್ದಾಗ, ಹಂಚಾಳ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಆರ್-4454 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ, ಪಿರ್ಯಾದಿಯು ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.03.2021 ರಂದು ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ದೇವರಾಜ, ರಾಮಪುರ ಗ್ರಾಮ ತನ್ನ ಮಗಳಾದ ಕು/ಪ್ರಮೀಳ, 23 ವರ್ಷ ರವರು ನೇರಳೆಕೆರೆ ಬಳಿಯಿರುವ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು, ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.

– ಅಬಕಾರಿ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.03.2021 ರಂದು ಬೆಳಿಗ್ಗೆ 10.15 ಗಂಟೆಯಲ್ಲಿ ಆರೋಪಿ ನಾರಾಯಣಮೂರ್ತಿ, ಯಲಬುರ್ಗಿ ಗ್ರಾಮ ಬಂಗಾರಪೇಟೆ ರವರು ಗ್ರಾಮದಲ್ಲಿ ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಬಂಗಾರಪೇಟೆ ಪಿಎಸ್‌ಐ ಶ್ರೀ.ಜಗದೀಶ್ ರೆಡ್ಡಿ ರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ, ಮಧ್ಯವಿರುವ ಪಾಕೇಟ್‌ಗಳನ್ನು ವಶಪಡಿಸಿಕೊಂಡು, ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

Leave a Reply

Your email address will not be published. Required fields are marked *