ದಿನದ ಅಪರಾಧಗಳ ಪಕ್ಷಿನೋಟ 08ನೇ ಡಿಸೆಂಬರ್‌ 2020

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ದಿನಾಂಕ 07.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮನುಷ್ಯ ನಾಪತ್ತೆ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಲೀಂ ಪಾಷಾ ಬಿನ್ ಸೈಯದ್ ಅಕ್ರಂ, ಸೇಠ್‌ ಕಾಂಪೌಂಡ್, ಬಂಗಾರಪೇಟೆ ರವರ ಹೆಂಡತಿ ಶ್ರೀಮತಿ. ಕೌಸರ್‌ ರವರು ದಿನಾಂಕ 05.12.2020 ರಂದು ಸಂಜೆ 4.00 ಗಂಟೆಯಲ್ಲಿ ಎರಡೂವರೆ ವರ್ಷದ ರಿದಾ ರವರೊಂದಿಗೆ ಮನೆಯಿಂದ ಹೋದವರು ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವರುಣ್ ಕುಮಾರ್‌ ಬಿನ್ ವೆಂಕಟಾಚಲಪತಿ, ನ್ಯೂಟೌನ್, ಬೇತಮಂಗಲ ರವರು ರವರ ತಂದೆ ವೆಂಕಟಾಚಲಪತಿ, 45 ವರ್ಷ ರವರು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು ಜೀವನ ಮಾಡಿಕೊಂಡಿದ್ದು, ಜೀವನ ನಡೆಸಲು ಕಷ್ಟವಾದ್ದರಿಂದ ಮದ್ಯಪಾನ ಮಾಡುವುದು ಅಬ್ಯಾಸ ಮಾಡಿಕೊಂಡಿದ್ದು, ಇದರಿಂದ ಜೀವನದಲ್ಲಿ ಬೇಸತ್ತು 06.12.2020 ರಂದು ಹಗ್ಗದಿಂದ ಗುಟ್ಟಹಳ್ಳಿ ಹಳೇ ಹೈಸ್ಕೂಲ್ ಮೈದಾನದ ಪಕ್ಕದಲ್ಲಿರುವ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಇತರೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.12.2020 ರಂದು ಸಂಜೆ 5.30 ಗಂಟೆಯಲ್ಲಿ ಸಿ.ಹೆಚ್.ಸಿ 80 ಶ್ರೀ. ಚಂದ್ರಶೇಖರ್‌ ಮತ್ತು ಸಿಪಿಸಿ 91 ಶ್ರೀ.ಲಕ್ಷ್ಮಣತೇಲಿ ರವರು ತಳೂರು ಗ್ರಾಮದಲ್ಲಿ ಸಂಜೆ ಗಸ್ತಿನಲ್ಲಿದ್ದಾಗ ತಳೂರು ಗ್ರಾಮದ ಸರ್ಕಾರಿ ಶಾಲೆಯ ಸಾರ್ವಜನಿಕ ರಸ್ತೆಯಲ್ಲಿ ವಿಜಯ್‌ಕುಮಾರ್ ಮತ್ತು ಶ್ರೀನಿವಾಸ್‌ ರವರು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಕೆಟ್ಟ ಮಾತುಗಳಿಂದ ದ್ದಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದು ಇವರ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *