ದಿನದ ಅಪರಾಧಗಳ ಪಕ್ಷಿನೋಟ 08ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 07.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟಲಕ್ಷ್ಮಮ್ಮ ಕೊಂ ನಾರಾಯಣಪ್ಪ, ಕುಪ್ಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡನಾದ ನಾರಾಯಣಪ್ಪ.ಕೆ.ಎಸ್ ರವರು ದಿನಾಂಕ 05.10.2020 ರಂದು ಸಂಜೆ ಸುಮಾರು 7.30 ಗಂಟೆಯಲ್ಲಿ ಕುಪ್ಪನಹಳ್ಳಿ ಗೇಟ್ ಬಳಿ ರಸ್ತೆಯ ಎಡಬದಿಯಲ್ಲಿ ನಿಂತಿದ್ದಾಗ, ಕೋಲಾರ ಕಡೆಯಿಂದ ಮಾರುತಿ ವ್ಯಾಗನರ್ ಕಾರ್ ಸಂಖ್ಯೆ ಕೆಎ-08-ಎಂ-4033 ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣಪ್ಪ.ಕೆ.ಎಸ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಕ್ತಗಾಯಗಳಾಗಿರುತ್ತದೆ.

– ಜೂಜಾಟ ಕಾಯ್ದೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 07.10.2020  ರಂದು   ಸಂಜೆ 5.30  ಗಂಟೆಗೆ ಕೀರ್ತಿಕುಪ್ಪ ಗ್ರಾಮದ ಬಳಿ ಇರುವ ಶ್ರೀ ಸೆಂದಿಲ್ ಎಂಬುವವರ ಕೋಳಿಪಾರಂ ಶೆಡ್ ಪಕ್ಕದಲ್ಲಿ ೧.  ಚಂದರ್‍, 4 ಬ್ಲಾಕ್, ರಾಬರ್ಟ್‌ಸನ್‌ಪೇಟೆ, ೨. ಮೊಹಿದ್ದೀನ್, ಬಿ.ಎಂ. ರಸ್ತೆ, ಆಂಡ್ರಸನ್‌ಪೇಟೆ, ೩. ಮುರುಗ, ಬಿ.ಎಂ. ರಸ್ತೆ, ಆಂಡ್ರಸನ್‌ಪೇಟೆ, ೪. ಸೆಂದಿಲ್ ಕುಮಾರ್‌, ಗಣೇಶ್‌ಪುರಂ, ರಾಬರ್ಟ್‌ಸನ್‌ಪೇಟೆ ಮತ್ತು ೫. ಸುಹೇಲ್, ಗೀತಾ ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಹಣವನ್ನು ಆಟಕ್ಕೆ ಪಣವಾಗಿಟ್ಟು ಇಸ್ಪೀಟ್ ಎಲೆಗಳ ಮೂಲಕ ಅಂದರ್- ಬಾಹರ್ ಜೂಜಾಡುತ್ತಿದ್ದವರನ್ನು  ಮತ್ತು 12,870/- ರೂಗಳನ್ನು ಪಿ.ಎಸ್.ಐ ಶ್ರೀ. ಎಂ.ಎಲ್ ಮುನಿಯಪ್ಪ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್‌ ಬಿನ್ ವೆಂಕಟಪ್ಪ, ವಿವೇಕಾನಂದನಗರ, ಬಂಗಾರಪೇಟೆ ರವರ ಹೆಂಡತಿ ಶ್ರೀಮತಿ ಅಂಬಿಕಾ.ವಿ, 28 ವರ್ಷ ರವರು ದಿನಾಂಕ 26.09.2020 ರಂದು ಬೆಳಿಗ್ಗೆ 5.30 ಗಂಟೆಯಿಂದ  ರಾತ್ರಿ 10.00 ಗಂಟೆಯ ಮದ್ಯೆ  ಮನೆಯಿಂದ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಕೃಷ್ಣ, ಸಿ.ಪಿ.ಸಿ ಕಾಮಸಮುದ್ರಂ ಪೊಲೀಸ್ ಠಾಣೆ ರವರು ದಿನಾಂಕ 07.10.2020 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಕಾಮಸಮುದ್ರಂ ಬಸ್ ನಿಲ್ದಾಣದ ಕಡೆ  ಗುಪ್ತಮಾಹಿತಿ ಸಂಗ್ರಹಿಸುತ್ತಿದ್ದಾಗ ಕಾಮಸಮುದ್ರಂ ಕೆರೆಯ ನೀರು ಕಾಲುವೆಯ ಹಳ್ಳದಲ್ಲಿ ಸುಮಾರು 45 ರಿಂದ 50 ವಯಸ್ಸಿನ ಮಹಿಳೆ, ಗೋಧಿ ಮೈಬಣ್ಣ, ಎತ್ತರ ಸುಮಾರು 5.2 ಅಡಿಗಳು, ಬಿಳಿ ಕೂದಲು, ಗುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಇವರು ಸುಮಾರು 3-4 ದಿನಗಳ ಹಿಂದೆ ನೀರು ಕುಡಿಯಲಿಕ್ಕೋ ಅಥವಾ ಕೈ ಕಾಲು ತೊಳಿಯಲಿಕ್ಕೊ ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಜಾರಿ ಬಿದ್ದು ಮೃತಪಟ್ಟಿರುವಂತೆ ಕಂಡು ಬಂದಿರುತ್ತದೆಂದು ನೀಡಿರುವ ದೂರು.

Leave a Reply

Your email address will not be published. Required fields are marked *