ದಿನದ ಅಪರಾಧಗಳ ಪಕ್ಷಿನೋಟ 08ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  07.08.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಸ್ವಾಭಾವಿಕ ಮರಣ ಪ್ರಕರಣ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ  ಪಿರ್ಯಾದಿದಾರರಾದ ನಾಗಲಕ್ಷ್ಮಿ, ಟ್ಯಾಂಕ್ ರಸ್ತೆ, ವಿಜಯ ಚಿತ್ರಮಂದಿರದ ಬಳಿ ಬಂಗಾಎಪೇಟೆ ರವರ ಗಂಡನಾದ ಶಿವಕುಮಾರ್, 49 ವರ್ಷ ರವರು ಕೋಲಾರದ ಎ.ಪಿ.ಎಂ.ಸಿ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಸೌಕರ್ಯಕ್ಕಾಗಿ ಕೈ ಸಾಲಗಳನ್ನು ಮಾಡಿಕೊಂಡಿರುತ್ತಾರೆ ಹಾಗೂ ಕೋವಿಡ್-19 ರೀತ್ಯಾ ಲಾಕ್ ಡೌನ್ ಆಗಿದ್ದರಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದದರಿಂದ ಹಾಗೂ ಕೈ ಸಾಲವನ್ನು ತೀರಿಸಲಾಗದೇ ಹಾಗೂ ಸಂಪಾದನೆ ಇಲ್ಲದೇ ಇರುವುದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07.08.2020 ರಂದು ಬೆಳಿಗ್ಗೆ 11.00 ಗಂಟೆಯಿಂದ ಮದ್ಯಾಹ್ನ 2.20 ಗಂಟೆ ಮದ್ಯೆ ಮನೆಯಲ್ಲಿ ಬಾತ್ ರೂಂನೊಳಗೆ ತರಾಯಿಗೆ ಒಂದು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕಾಳಮ್ಮ ಕೊಂ ಮಲ್ಲಪ್ಪ, ಗಾರೇಬಾವಿ ರಸ್ತೆ, ಬಂಗಾರಪೇಟೆ ರವರ ಗಂಡನಾದ ಮಲ್ಲಪ್ಪ, 50 ವರ್ಷ ರವರು ದಿನಾಂಕ 06.08.2020 ರಂದು ರಾತ್ರಿ ಮದ್ಯಪಾನ ಸೇವನೆ ಮಾಡಿ, ಬಂಗಾರಪೇಟೆ ಪಟ್ಟಣದಲ್ಲಿರುವ ಮುರುಗನ್ ದೇವಸ್ಥಾನದ ಬಳಿಯಿರುವ ಒಂದು ಅಂಗಡಿಯ ಬಳಿ ರಸ್ತೆಯಲ್ಲಿ ಬಿದ್ದು, ಚಳಿಯನ್ನು ತಾಳಲಾಗದೇ ಮೃತಪಟ್ಟಿರುತ್ತಾರೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಲ್ಲಿ ಕೊಂ ಕದರಿವೇಲು, ವಿವೇಕ್‌ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ  ಮಗ ಕಾಳಿಚರಣ್, 42 ವರ್ಷ ರವರು ದಿನಾಂಕ 24.07.2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ದ್ವಿಚಕ್ರ ವಾಹನ ಟಿವಿಎಸ್ ಜೆಸ್ಟ್ ಸಂಖ್ಯೆ ಕೆಎ-08-ವೈ-5601 ನ್ನು ಚಲಾಯಿಸಿಕೊಂಡು ಕೆಜಿಎಫ್-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಆರ್.ಆರ್ ಪೆಟ್ರೋಲ್ ಬಂಕ್ ಮುಂದೆ ಇರುವ ಪಂಪ್ ಹೌಸ್ ಹತ್ತಿರ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಕಾಳಿಚರಣ್ ರವರ ಹಿಂದುಗಡೆಯಿಂದ ಕಾರ್ ಸಂಖ್ಯೆ ಕೆಎ-53-ಎಂಸಿ-0680 ನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕಾಳಿಚರಣ್ ರವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ, ಕಾಳಿಚರಣ್ ವಾಹನ ಸಮೇತ ಕೆಳಗೆ ಬಿದ್ದಾಗ, ರಕ್ತ ಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *