ದಿನದ ಅಪರಾಧಗಳ ಪಕ್ಷಿನೋಟ 08ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 07.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸ ಬಿನ್ ವೆಂಕಟೇಶಪ್ಪ, ಮದಿನಾಯಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಚಿಕ್ಕಪ್ಪನ ಮಗನಾದ ಮಂಜುನಾಥ, 26 ವರ್ಷ ರವರು ದಿನಾಂಕ 07-05-2020 ರಂದು  ಬೆಳಿಗ್ಗೆ 8.00 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.03-ಕೆ.ಎ-3337  ರಲ್ಲಿ ಗಜೇಂದ್ರ ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು   ಮದಿನಾಯಕನಹಳ್ಳಿ  ಗ್ರಾಮದ ಕೆರೆ ಕಟ್ಟೆ  ಪಕ್ಕದ  ರಸ್ತೆಯಲ್ಲಿ ಬರುತ್ತಿದ್ದಾಗ, ಜಯಮಂಗಲ ಕಡೆಯಿಂದ  ಅಪ್ಪೋಜಿ ರವರು ದ್ವಿಚಕ್ರ ವಾಹನ ಸಂ. ಕೆ.ಎ-11-ಇ.ಸಿ-3503 ನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಜುನಾಥ ರವರು ಚಲಾಯಿಸುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಮಂಜುನಾಥ ಮತ್ತು ಗಜೇಂದ್ರ ರವರು ಕೆಳಗೆ ಬಿದ್ದು, ಮಂಜುನಾಥ ರವರಿಗೆ ತೀರ್ವವಾದ ರಕ್ತಗಾಯ ಮತ್ತು ಗಜೇಂದ್ರ ರವರಿಗೆ ತರುಚಿದ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಮಂಜುನಾಥ ರವರಿಗೆ ವೈದ್ಯರು ಚಿಕಿತ್ಸೆ ನೀಡುವ ಕಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *