ದಿನದ ಅಪರಾಧಗಳ ಪಕ್ಷಿನೋಟ 08ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:07.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಸುಲಿಗೆ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಮತಿ, ವಿಜಯನಗರ, ಬೆಮೆಲ್‌ನಗರ ಮತ್ತು ಅವರ ಗಂಡ ದಿನಕರ್ ರವರು ದಿನಾಂಕ.07.03.2020 ರಂದು ಸಂಜೆ 5-45 ಗಂಟೆಯಲ್ಲಿ ಎ ಟೈಪ್‌ ಕ್ವಾಟ್ರಸ್‌ ರಸ್ತೆಯಲ್ಲಿರುವ ಹಳೆ ಪೋಸ್ಟ್ ಆಪೀಸ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಯಾರೋ ಒಬ್ಬ ಅಪರಿಚಿತ ಆಸಾಮಿಯು ನೊಂದಣಿ ಸಂಖ್ಯೆ ಇಲ್ಲದ ಕಪ್ಪು ಬಣ್ಣದ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಮುಖ ಕಾಣಿಸದ ಹಾಗೆ ತಲೆಗೆ ಕಪ್ಪು ಬಣ್ಣದ ಹೆಲ್ಮೆಟ್ ಹಾಕಿಕೊಂಡು, ಕಪ್ಪು ಬಣ್ಣದ ಜರ್ಕಿನ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ದರಿಸಿದ್ದವನು ದೂರುದಾರರ ಕತ್ತಿನಲ್ಲಿದ್ದ  50 ಗ್ರಾಂ ನ ಎರಡೆಲೆ ಚಿನ್ನದ ತಾಳಿ ಚೈನು ಸುಮಾರು 1,50,000/- ರೂ ಬೆಲೆ ಬಾಳುವುದನ್ನು ಕಿತ್ತುಕೊಂಡು ಹೋಗಿರುತ್ತಾನೆ.

– ಇತರೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 07.03-2020 ರಂದು ಬೆಳಿಗ್ಗೆ 10.15  ಗಂಟೆಗೆ ಸಿ.ಹೆಚ್.ಸಿ ಶ್ರೀ.ಕೋನಪ್ಪರೆಡ್ಡಿ  ಮತ್ತು ಸಿ.ಹೆಚ್.ಸಿ ರಮೇಶ ರವರು ಗಸ್ತನ್ನು ನಿರ್ವಹಿಸುತ್ತಿದ್ದಾಗ, ನೀಲಗಿರಿಪಲ್ಲಿ ಗ್ರಾಮದ ಕೃಷ್ಣಮೂರ್ತಿ ಬಿನ್ ವೆಂಕಟಪ್ಪ ರವರು ಅಂಗಡಿ ಯ ಮುಂಬಾಗದಲ್ಲಿ ಮದ್ಯಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಕೃಷ್ಣಮೂರ್ತಿ ಮತ್ತು ಸ್ಥಳದಲ್ಲಿದ್ದ 1) 02 ಪ್ಲಾಸ್ಟಿಕ್ ಲೋಟಗಳು, 2) ಬೆಂಗಳೂರು ವಿಸ್ಕಿಯ 90 ಎಂ.ಎಲ್ ನ 02 ಖಾಲಿ ಟೆಟ್ರಾ ಪಾಕೇಟ್ ಗಳು, 3) CROWN FINE WHISKY ಯ 180 ಎಂ.ಎಲ್ ನ 03 ಟೆಟ್ರಾ ಪಾಕೇಟ್ ಗಳು, 4) No.1 HIGHWAY DELUXE WHISKY ಯ 180 ಎಂ.ಎಲ್ ನ 02 ಟೆಟ್ರಾ ಪಾಕೇಟ್ ಗಳು, 5) No.1 HIGHWAY DELUXE WHISKY ಯ 90 ಎಂ.ಎಲ್ ನ 02 ಟೆಟ್ರಾ ಪಾಕೇಟ್ ಗಳು. 6) ಬೆಂಗಳೂರು ವಿಸ್ಕಿಯ 90 ಎಂ.ಎಲ್ ನ 02 ಟೆಟ್ರಾ ಪಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *