ದಿನದ ಅಪರಾಧಗಳ ಪಕ್ಷಿನೋಟ 07 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 06.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮೋಸ/ವಂಚನೆ : 01

ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಹೇಶ್ ಬಿನ್ ಕೃಷ್ಣಪ್ಪ, ವಿವೇಕಾನಂದ ನಗರ, ಬಂಗಾರಪೇಟೆ ರವರ ಮೊಬೈಲ್‌ಗೆ ದಿನಾಂಕ.31.12.2020 ರಂದು ಬೆಳಿಗ್ಗೆ 7.30 ಗಂಟೆಯಲ್ಲಿ ಮೊ.ನಂ.8409886145 ಮತ್ತು 8388926221 ಗಳಿಂದ ಕರೆ ಮಾಡಿ ತಾನು ಪ್ರದೀಪ್ ಶರ್ಮ ಎಂತ ಪರಿಚಯ ಮಾಡಿಕೊಂಡು, ಡ್ವಾನೆ ಜಾನ್ಸನ್ ಪೌಂಡೇಷನ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ, ಕಂಪನಿಯಿಂದ  ನಡೆಸಿದ ಸಮೀಕ್ಷೆಯಲ್ಲಿ ರನ್ನರ್ ಆಫ್ ಆಗಿದ್ದು, 12.83 ಲಕ್ಷ ರೂಪಾಯಿಗಳನ್ನು ಡಾಲರ ರೂಪದಲ್ಲಿ ಗೆದ್ದಿರುತ್ತೀರಿ, ಈ ಹಣವನ್ನು  ಪಡೆದುಕೊಳ್ಳಬೇಕಾದರೆ 60 ಸಾವಿರ ರೂಪಾಯಿಗಳನ್ನು ಪಾವತಿ ಮಾಡಬೇಕೆಂದು ದೂರುದಾರರಿಗೆ ನಂಬಿಸಿ, Mr.Debdulal charon ಎಂಬುವರ ಎಸ್.ಬಿ.ಐ ಬ್ಯಾಂಕ್ ಖಾತೆ ಗಳಾದ 1. 35820652193 ಮತ್ತು 2. 37950657154 ಗಳಿಗೆ ಮೊಬೈಲ್ ನಂ.8603464587 ಗೆ Google pay ಮೂಲಕ ಪಾವತಿ ಮಾಡಲು ಸೂಚಿಸಿದ್ದು, ಅದರಂತೆ ದೂರುದಾರರು ದಿನಾಂಕ:31.12.2020 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಒಟ್ಟು 58,000/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದು, ಆರೋಪಿಗಳು ದೂರುದಾರರಿಗೆ ಬಹುಮಾನದ ಮೊತ್ತವನ್ನು ನೀಡದೇ, ಹಣವನ್ನು ವಾಪಸ್ಸು ಮಾಡದೇ ಮೋಸ ಮಾಡಿರುತ್ತಾರೆ.

Leave a Reply

Your email address will not be published. Required fields are marked *