ದಿನದ ಅಪರಾಧಗಳ ಪಕ್ಷಿನೋಟ 07 ನೇ ನವೆಂಬರ್ 2019

 

– ಅಪಹರಣ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಿಥ್ವಿ ಕುಮಾರ್‌ ಬಿನ್ ವೇಣು, ಆರ್‌.ಡಿ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ 05.11.2019 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ನ್ಯೂ ಲೈಫ್ ಚಾರಿಟಬಲ್ ಸಂಸ್ಥೆಯಲ್ಲಿರುವ ಬಾಲಕ  ಶಿವಕುಮಾರ್, 9 ವರ್ಷ ರವರನ್ನು  ಶಾಲೆಗೆ ಕಳುಹಿಸಲು ಸ್ಮಿತ್ ರಸ್ತೆ ಮಾರಿಕುಪ್ಪಂ ನಲ್ಲಿ ಅಟೋ ಹತ್ತಿಸಿದ್ದು, ಬಾಲಕ ಶಿವಕುಮಾರ್ ಶಾಲೆಗೆ ಹೋಗದೆ ಇದ್ದು, ಬಾಲಕ ಶಿವಕುಮಾರ್ ರವರನ್ನು ಯಾರೋ ವ್ಯಕ್ತಿಗಳು ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿರಬಹುದೆಂದು ನೀಡಿರುವ ದೂರು.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕಾಂತಮ್ಮ, ಬಿಲ್ಲೇರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಮಂಜುನಾಥ, 45 ವರ್ಷ ರವರು  ದಿನಾಂಕ 31-10-2019 ರಂದು ಸಂಜೆ 4.30 ರಿಂದ 5.00 ಗಂಟೆ ಮದ್ಯೆ  ಒಲೆ ಅಂಟಿಸಿ  ಒಲೆ ಮುಂದೆ ಕುಳಿತು ಕೊಂಡಿದ್ದಾಗ, ದ್ವಿ ಚಕ್ರ ವಾಹನಕ್ಕೆ ತಂದು ಇಟ್ಟಿದ್ದ ಪೆಟ್ರೋಲ್ ಪ್ಲಾಸ್ಟಿಕ್  ಬಾಟಲ್ ಆಕಸ್ಮಿಕವಾಗಿ ಮಂಜುನಾಥ ರವರ ಮೇಲೆ ಬಿದ್ದುದ್ದರಿಂದ, ಒಲೆಯಿಂದ ಬೆಂಕಿ ಜ್ವಾಲೆಗಳು  ತಗುಲಿ ಬೆಂಕಿ ಅಂಟಿಕೊಂಡು ಗಾಯಗಳಾಗಿದ್ದು, ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು ದಿನಾಂಕ 05-11-2019 ರಂದು  ರಾತ್ರಿ 11.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮಂಜುನಾಥ ರವರು ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *