ದಿನದ ಅಪರಾಧಗಳ ಪಕ್ಷಿನೋಟ 07 ನೇ ಸೆಪ್ಟೆಂಬರ್‌ 2019

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೆಂಚೇಗೌಡ ಬಿನ್ ವೆಂಕಟರಾಮೇಗೌಡ, ಚಿಕ್ಕ ಅಂಕಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 05.09.2019 ರಂದು ಸಂಜೆ 4.30 ಗಂಟೆಯಲ್ಲಿ ಡಿಸ್ಕವರ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-07-ಎಸ್-0897 ನ್ನು ಚಲಾಯಿಸಿಕೊಂಡು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯಲ್ಲಿರುವ ಬೀರಂಡಹಳ್ಳಿ ಗೇಟ್ ಸಮೀಪ ಹೋಗುತ್ತಿದ್ದಾಗ,  ಹಿಂಬದಿಯಿಂದ ಖಾಸಗಿ ಬಸ್ ಸಂಖ್ಯೆ ಕೆಎ-08-3947 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

– ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ, ಮಾರಸಂದ್ರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ:05.09.2019 ರಂದು ರಾತ್ರಿ 7.00 ಗಂಟೆಯಲ್ಲಿ ಮನೆಯ ಬಳಿ ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕುತ್ತಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿರುವ ನಾದಿನಿ ಶ್ರೀಮತಿ ನಾಗವೇಣಿ ರವರನ್ನು ಗೋವಿಂದಪ್ಪ  ಮತ್ತು ಸುಬ್ರಮಣಿ ರವರು ವಿನಾಕಾರಣ ಕೆಟ್ಟಮಾತುಗಳಿಂದ   ಬೈಯ್ಯತ್ತಿದ್ದು,  ದೂರುದಾರರು ಆರೋಪಿಗಳನ್ನು ಯಾಕೆ ಬೈಯ್ಯುವುದು ಎಂದು ಕೇಳಿದ್ದಕ್ಕೆ, ಇಬ್ಬರೂ ದೂರುದಾರರ ಮೇಲೆ ಜಗಳಕ್ಕೆ ಬಂದು ಕೆಟ್ಟಮಾತುಗಳಿಂದ ಬೈದು, ದೊಣ್ಣೆಯಿಂದ ಹೊಡೆದು ರಕ್ತಗಾಯ ಪಡಿಸಿದ್ದು,  ಜಗಳ ಬಿಡಿಸಲು ಬಂದ ನಾದಿನಿ ನಾಗವೇಣಿ ರವರನ್ನು ಸಹ ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.

 

Leave a Reply

Your email address will not be published. Required fields are marked *