ದಿನದ ಅಪರಾಧಗಳ ಪಕ್ಷಿನೋಟ 07 ನೇ ಆಗಸ್ಟ್‌ 2019

– ಕೊಲೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:06.08.2019 ರಂದು ಬೆಳ್ಳಿಗ್ಗೆ 09.00 ಗಂಟೆಯಲ್ಲಿ ದೂರುದಾರರಾದ ಶ್ರೀ ರಾಧಾಕೃಷ್ನ ಬಿನ್ ರಾಮಪ್ಪ. ಸುವರ್ಣಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:06.08.2019 ರಂದು ಬೆಳ್ಳಿಗ್ಗೆ 08.00 ಗಂಟೆಯಲ್ಲಿ ದೂರುದಾರರು ಗ್ರಾಮದಲ್ಲಿ ಇದ್ದಾಗ ಗಂದೋಡಹಳ್ಳಿ ರಸ್ತೆ ಎಸ್. ಎನ್. ವೇಣುನಾಥ ರವರ ಜಮೀನಿನ ಬಳಿ ಇರುವ ಮೋರಿ ಕೆಳಗೆ ಯಾರೋ ಒಬ್ಬ ಅಪರಚಿತ ವ್ಯಕ್ತಿಯನ್ನು ಸುಟ್ಟು ಹಾಕಿರುತ್ತಾರೆ ಎಂಬ ವಿಚಾರ ಗೊತ್ತಾಯಿತು. ಸ್ಥಳಕ್ಕೆ ನೋಡಿದಾಗ ಮೋರಿ ಕೆಳಬಾಗದಲ್ಲಿ ಒಬ್ಬ ಮನುಷ್ಯನನ್ನು ಟೈರ್ ಗಳಿಂದ ಸುಟ್ಟು ಹಾಕಿರುವುದು ಕಂಡು ಬಂದಿರುತ್ತೆ. ಸದರಿ ಮನುಷ್ಯನ ದೇಹವು ಪೂರ್ತಿ ಸುಟ್ಟು ಹೋಗಿದ್ದು ಗಂಡಸಾ ಅಥವಾ ಹೆಂಗಸಾ ಎಂಬುವುದು ಗುರ್ತು ಸಿಗುತ್ತಿಲ್ಲ. ಬೆಳಗಿನ ಜಾವ ಸುಮಾರು 4-5 ಗಂಟೆ ಮದ್ಯ ಬೆಂಕಿಹಚ್ಚಿರುವುದೆಂಬ ಬಗ್ಗೆ ಕಂಡು ಬಂದಿರುತ್ತೆ. ಸತ್ತು ಹೋಗಿರುವ ಮನುಷ್ಯನ ಯಾರೆಂಬುದು ತಿಳಿದು ಬಂಧಿಲ್ಲ. ಪೂರ್ತಿ ಸುಟ್ಟು ಹೋಗಿರುತ್ತದೆ. ಯಾರೋ ಕೊಲೆ ಮಾಡಿ ತಂದು ಮೋರಿ ಕೆಳಗೆ ಹಾಕಿ ಟಯರ್ ಮತ್ತು ಪೆಟ್ರೋಲ್ ನಿಂದ ಸುಟ್ಟಿರುವಂತೆ ಕಂಡು ಬಂದಿರುತ್ತೆ.
–ಹಲ್ಲೆ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ:06.08.2019 ರಂದು ಬೆಳಿಗ್ಗೆ 10.30 ಗಂಟೆಗೆ ದೂರುದಾರರಾದ ಶ್ರೀ. ಅದಿನಾರಾಯಣರೆಡ್ಡಿ ಬಿನ್‌ ಗಂಟ್ಲರೆಡ್ಡಿ ಐಮಾಸಪುರ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಪಕ್ಕದ ಮನೆಯ ವಾಸಿಯಾದ ಆರೋಪಿ ಕೃಪಾಕರರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿರವರು ದಿನಾಂಕ:06.08.2019 ರಂದು ಬೆಳಿಗ್ಗೆ ಸುಮಾರು 08.15 ಗಂಟೆ ಸಮಯದಲ್ಲಿ ಮನೆಗೆ ಶೌಚಾಲಯಕ್ಕೆ ಪೈಪ್ ಆಳವಡಿಸಿಕೊಳ್ಳಲು ಸಾರ್ವಜನಿಕ ರಸ್ತೆಯನ್ನು ಆಗೆಯುತ್ತಿದ್ದು ವಿಚಾರದಲ್ಲಿ ದೂರುದಾರರಿಗೆ ಮತ್ತು ಆರೋಪಿಗಳಿಗೆ ಏಕಾಎಕಿ ಗಲಾಟೆಗಳಾಗಿ ಆರೋಪಿ ದೂರುದಾರರಿಹೆ ಹೊಡೆದು ರಕ್ರ ಗಾಯ ಪಡಿಸಿರುತ್ತಾರೆ.
– ಮೋಸ/ವಂಚನೆ : 01

ಅಪರಾದ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 06.08.2019 ರಂದು ದೂರುದಾರರಾದ ಶ್ರೀ ನಾರಾಯಣಪ್ಪ ಬಿನ್‌ ಯಲ್ಲಪ್ಪ ಪಲವತಿಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರು ವೈಟ್ ಪೀಲ್ಡ್ ನಲ್ಲಿರುವ, ಶಾಂತಿನಿಕೇತನ್ ಬ್ರಾಂಚ್ ನ AXIS ಬ್ಯಾಂಕ್ ಖಾತೆ ಸಂಖ್ಯೆ-913010025079315 ಗೆ ಕ್ರೆಡಿಟ್ ಕಾರ್ಡ್ ಸಂಖ್ಯೆ 4514570010975061 ನ್ನು ಹೊಂದಿರುತ್ತಾರೆ ಈಗಿರುವಲ್ಲಿ ದಿನಾಂಕ: 28.06.2019 ರಂದು ಬೆಳಗ್ಗೆ ಸುಮಾರು 10.00 ಗಂಟೆಯಲ್ಲಿ ಯಾರೋ ಒಬ್ಬ ವ್ಯಕ್ತಿ ದೂರುದಾರರ ಮೊಬೈಲ್ ಸಂಖ್ಯೆ 8050315472 ಗೆ ಕರೆ ಮಾಡಿ ತಾನು AXIS ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ನಿಮ್ಮ ಕ್ರೆಡಿಟ್ ಕಾರ್ಡ್ ಚಾಲನೆ ಅವದಿ ಮುಕ್ತಾಯ ಆಗಿರುತ್ತೆ ಆದ್ದರಿಂದ ನಿಮ್ಮಗೆ ಹೊಸ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಬೇಕಾಗಿರುವುದರಿಂದ ನಿಮ್ಮ ಹಳೆಯ ಕಾರ್ಡ್ ಸಂಖ್ಯೆ, ಸಿ.ವಿ.ವಿ ಸಂಖ್ಯೆ , ಹಾಗೂ ನಿಮ್ಮ ಮೊಬೈಲ್ ಗೆ ಕಳುಹಿಸುವ ಓ.ಟಿ.ಪಿ ಸಂಖ್ಯೆ ಮತ್ತು ಇತ್ತರೆ ಮಾಹಿತಿಯನ್ನು ದೂರುದಾರರು ನೀಡಿದ್ದರಿಂದ ದಿನಾಂಕ: 28.06.2019 ಮತ್ತು 01.07.2019 ರಂದು ಅವರ ಮೇಲ್ಕಂಡ ಬ್ಯಾಂಕ್ ಖಾತೆಯಿಂದ ಒಟ್ಟು 39447/- ರೂಗಳನ್ನು ಅಕ್ರಮವಾಗಿ ಮೋಸದಿಂದ ವರ್ಗಾವಣೆ ಮಾಡಿಕೊಂಡಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.08.2019 ರಂದು ದೂರುದಾರರಾದ ಶ್ರೀ. ಬಾಬು ಬಿನ್‌ ವೀಣಪ್ಪ ಕಣ್ಣೂರು ಗ್ರಾಮ ರವರು ನೀಡದ ದೂರಿನಲ್ಲಿ ದೂರುದಾರರ ಮಗನಾದ ಮನೋಜ್ ಕುಮಾರ್ 10 ನೇ ತರಗತಿ ಕ್ಯಾಸಂಬಳ್ಳಿ ಪ್ರೌಡಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ. ದಿನಾಂಕ:05.08.2019 ರಂದು ಮನೋಜ್ ಕುಮಾರ್ ಸಂಜೆ 06.00 ಗಂಟೆಗೆ ಶಾಲೆಯಿಂದ ಮನೆಗ ಬಂದು ಮತ್ತೆ ಹೊರಗಡೆ ಹೋದವನು ತಮ್ಮ ಮನೆಯ ಪಕ್ಕದಲ್ಲಿ ಗೋವಿಂದಮ್ಮರವರ ಖಾಲಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *