ದಿನದ ಅಪರಾಧಗಳ ಪಕ್ಷಿನೋಟ 07ನೇ ಡಿಸೆಂಬರ್‌ 2019

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪುರುಷೋತ್ತಮ್‌ ಬಿನ್ ವರದರಾಜ್‌, ಎಸ್.ಟಿ ಬ್ಲಾಕ್, ಕೋರಮಂಗಲ, ಬೆಂಗಳೂರು, ಸೆಕ್ಯೂರಿಟಿ ಸೂಪರ್ವೈಜರ್, ನ್ಯೂ ಇಂಡಸ್ರ್ಟೀಯಲ್ ಸೆಕ್ಯೂರಿಟಿ ಏಜೆನ್ಸಿ ರವರು ನೀಡಿದ ದೂರಿನಲ್ಲಿ, ದಿನಾಂಕ 03.12.2019 ರಂದು ಸಂಜೆ 5:00 ಗಂಟೆಯಿಂದ ದಿನಾಂಕ 04.12.2019 ರ ಸಂಜೆ 4:30 ಗಂಟೆಯೆ ಮಧ್ಯೆ ಯಾರೋ ಕಳ್ಳರು ದೂರುದಾರರ ಕಂಪನಿಗೆ ಸೇರಿದ 30 ಮೀಟರ್ ಡಿ.ಸಿ. ಕೇಬಲ್ ಬೆಲೆ 4800/- ರೂ ಬಾಳುವುದನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜಯಂತಿ ರಮೇಶ್ ಬಿನ್ ರಮೇಶ್‌ ಬಾಬು, ರಾಮಚಂದ್ರ ರಾವ್‌ ರಸ್ತೆ, ಬಂಗಾರಪೇಟೆ ರವರ ಗಂಡ ರಮೇಶ್‌ ಬಾಬು ರವರು ದಿನಾಂಕ 06.12.2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ತಮ್ಮ ನಿವೇಶನದಲ್ಲಿ ಇಟ್ಟಿಗೆ ಕಲ್ಲು ಮತ್ತು ಮಣ್ಣನ್ನು ಹಾಕುತ್ತಿದ್ದ ರಾಜಶೇಖರ್‌ ರವರನ್ನು  ಕೇಳಲಾಗಿ ಇಟ್ಟಿಗೆ ಕಲ್ಲು ಮತ್ತು ಮಣ್ಣು ತುಂಬಿದ ಬಾಂಡ್ಲಿಯನ್ನು ದೂರುದಾರರ ಗಂಡನ ಮೇಲೆ ಮತ್ತು ದೂರುದಾರರ ಎಸೆದಾಗ ಇಬ್ಬರಿಗೂ ರಕ್ತಗಾಯಗಳಾಗಿದ್ದು, ನಂತರ ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶಾಲ್‌ ಬಿನ್ ರಾಮ್‌ಸಿಂಗ್‌, ವಿಜಯನಗರ, ಬಂಗಾರಪೇಟೆ ರವರ  ತಂಗಿ ತೇಜಸ್ವಿನಿ, 22 ವರ್ಷ ರವರು ದಿನಾಂಕ 04.12.2019 ರಂದು ಬೆಳಿಗ್ಗೆ 11.30 ಗಂಟೆಗೆ ಮನೆಯಿಂದ ಕೆಜಿಎಫ್ ನ ವಾಣಿವಿಳಾಸ ಬೆರಳಚ್ಚು ತರಭೇತಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮರನಾರಾಯಣ ರೆಡ್ಡಿ ಬಿನ್ ಕೊಂಡಾರೆಡ್ಡಿ, ನಾಯಕನಹಳ್ಳಿ, ಸರ್ಜಾಪುರ ರಸ್ತೆ, ಬೆಂಗಳೂರು ರವರ ತಾಯಿ ಗಂಗೋಜಮ್ಮ, 70 ವರ್ಷ ರವರು ಕಂಬಂಪಲ್ಲಿಯಲ್ಲಿರುವ ತನ್ನ ಮಗಳಾದ ವನಜಮ್ಮ ರವರ ಮನೆಯಲ್ಲಿ ತಂಗಿದ್ದು, ದಿನಾಂಕ 04.12.2019 ರಂದು ಸಂಜೆ 5.00 ಗಂಟೆಗೆ ಪೊಟ್ಟೆಪಲ್ಲಿಯ ಬಳಿ ಇರುವ ಬುಡ್ಡನಕುಂಟೆ ಕೆರೆ ಹತ್ತಿರ ತಮ್ಮ ಹೊಲವನ್ನು ನೋಡಿಕೊಂಡು ಬರಲು ಹೋಗಿದ್ದು, ಆ ಸಮಯದಲ್ಲಿ ಕೆರೆಯಲ್ಲಿ ಕೈಕಾಲು ತೊಳೆಯಲು ಹೋದಾಗ  ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *