ದಿನದ ಅಪರಾಧಗಳ ಪಕ್ಷಿನೋಟ 07ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 06.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾರಾಯಣಮ್ಮ ಕೊಂ ರಾಮಪ್ಪ, ಹಾರಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು  ರವರ ಮಗಳಾದ ರೂಪಾ, 27 ವರ್ಷ ರವರನ್ನು ಮುದ್ದೇಗೌಡನಹಳ್ಳಿ ಗ್ರಾಮದ ವೆಂಕಟೇಶಪ್ಪ ಬಿನ್ ವಿರುಪಾಕ್ಷಪ್ಪ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ 05-07-2018 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಮುದ್ದೇಗೌಡನಹಳ್ಳಿ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮತ್ತೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.

– ಇತರೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಾನ್ಸಂಬಾಲ್, ಸಿ.ಎಸ್.ಓ, ಬಿ.ಜಿ.ಎಂ.ಎಲ್., ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ಸತ್ತಾರ್ ಸರ್ಕಲ್ ಕಡೆಯಿಂದ ರಾಬರ್ಟ್‌‌ಸನ್‌ಪೇಟೆ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ತಿರುವಳ್ಳುವರ್ ಪ್ರತಿಮೆ ಸಮೀಪ ಬಿ.ಜಿ.ಎಂ.ಎಲ್ ಸಂಸ್ಥೆಗೆ ಸೇರಿದ ಖಾಲಿ ಸ್ಥಳದಲ್ಲಿ ಎನ್.ಟಿ. ಬ್ಲಾಕ್‌ ವಾಸಿಗಳಾದ ಕಲೈಅರಸನ್ ಮತ್ತು ಅನ್ಬರಸನ್ ರವರುಗಳು ಸುಮಾರು 2 ತಿಂಗಳುಗಳಿಂದ ಸದರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ 06 ಮಳಿಗೆಗಳನ್ನು ನಿರ್ಮಿಸುತ್ತಿದ್ದು, ದೂರುದಾರರು ನೋಟೀಸುಗಳನ್ನು ನೀಡಿದ್ದರೂ ಲೆಕ್ಕಿಸದೇ ಕಟ್ಟಡದ ಕಾಮಗಾರಿ ಮುಂದುವರೆಸಿರುತ್ತಾರೆ.

Leave a Reply

Your email address will not be published. Required fields are marked *