ದಿನದ ಅಪರಾಧಗಳ ಪಕ್ಷಿನೋಟ 07ನೇ ಮೇ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 06.05.2018 ರಂದು  ದಾಖಲಾಗಿರುವ ಪ್ರಕರಣಗಳ ವಿವರಗಳು.

– ಹಲ್ಲೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ 02 ಪ್ರಕರಣಗಳು ದಾಖಲಾಗಿರುತ್ತದೆ.

ದೂರುದರರಾದ ಶ್ರೀ.  ನವೀನ್ ಕುಮಾರ್ ಬಿನ್ ಶ್ರೀಧರ್, 32 ವರ್ಷ,  ವಾಸ: 112, ಎಸ್.ಟಿ. ಬ್ಲಾಕ್, ಚಾಂಪಿಯನ್ ರೀಪ್ಸ್, ಕೆ.ಜಿ.ಎಫ್ ರವರೊಂದಿಗೆ ದಿನಾಂಕ:06-05-2018 ರಂದು ಸಂಜೆ 4.50 ಗಂಟೆಯಲ್ಲಿ ಚುನಾವಣೆ ವಿಚಾರದಲ್ಲಿ ದಿಲೀಪ್ ಮತ್ತು ಪ್ರಭು ರವರು ಜಗಳಮಾಡಿ, ದೊಣ್ಣೆ, ಕತ್ತಿ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿದ್ದು, ಜಗಳ ಬಿಡಿಸಲು ಬಂದ ಪ್ರೇಮ್ ಕುಮಾರ್ ರವರಿಗೂ ಚಾಕುವಿನಿಂದ  ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀ.ದಿಲೀಪ್ ಬಿನ್ ದಿವಾಕರ್, 25 ವರ್ಷ,  ವಾಸ: # 671 , ಎಸ್.ಟಿ.ಬ್ಲಾಕ್, 1 ನೇ ಬ್ರಾಂಚ್, ಚಾಂಪಿಯನ್ ರೀಪ್ಸ್ ರವರು ದಿನಾಂಕ: 06.05.2018 ರಂದು ಸಂಜೆ 03.30 ಗಂಟೆಯಲ್ಲಿ  “ಚೌಕಬಾರ” ಆಟವಾಡುತ್ತಿದ್ದಾಗ ನವೀನ್ ರವರು ಸರಿಯಾಗಿ ಆಟವಾಡದೆ ಇದ್ದಾಗ, ದೂರುದಾರರು  ಬೇಸರದಿಂದ ಹೋಗಿದ್ದು, ಸಂಜೆ 05-00 ಗಂಟೆಯಲ್ಲಿ ದೂರುದಾರರು ಮನೆಯಲ್ಲಿರುವಾಗ ನವೀನ್ ರವರ ಮಾವಂದಿರಾದ ನವೀನ್ ಬಿನ್ ಶ್ರೀಧರ್, ಪ್ರೇಮ್ ಬಿನ್ ಶ್ರೀಧರ್, ಪ್ರವೀಣ್, ಉದಯ್, ಕುಟ್ಟಿ, ಮತ್ತು ಉದಯ್ ರವರು ಗಳು ಬಂದು ಕೆಟ್ಟಮಾತುಗಳಿಂದ ಬೈದು, ಮರದ ರೀಪರ್ ಗಳಿಂದ ಹೊಡೆದು ರಕ್ತಗಾಯಪಡಿಸಿದ, ದೂರುದಾರರ ತಮ್ಮ ಪ್ರಭು ಜಗಳ ಬಿಡಿಸಲು ಬಂದಾಗ ಆತನಿಗೆ ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ರಸ್ತೆ ಅಪಘಾತಗಳು :‍ 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆಂಜಿರೆಡ್ಡಿ ಬಿನ್ ಜಯರಾಮರೆಡ್ಡಿ, ಜಂಗಮಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ತಂದೆ  ಜಯರಾಮರೆಡ್ಡಿ, 70 ವರ್ಷ ರವರು ದಿನಾಂಕ 03-05-2018 ರಂದು ಸಂಜೆ 6.00 ಗಂಟೆಯಲ್ಲಿ ಬೇತಮಂಗಲ ಕ್ಯಾಸಂಬಳ್ಳಿ ರಸ್ತೆ ಬಳಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ ಬಳಿ  ನಡೆದುಕೊಂಡು  ಹೋಗುತ್ತಿದ್ದಾಗ, ಬೇತಮಂಗಲ ಕಡೆಯಿಂದ ಪಲ್ಸರ್ ದ್ವಿಚಕ್ರವಾಹನ ಸಂಖ್ಯೆ ಕೆ.ಎ-08-ಡಬ್ಲಿಯೋ-2995 ರ ಸವಾರ ವಾಹನವನ್ನು ಅತಿ ವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದೆಯಿಂದ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರ ತಂದೆಗೆ ತಲೆ ಮತ್ತು ಎರಡು ಕಾಲುಗಳಿಗೆ ತೀವ್ರವಾದ ರಕ್ತಗಾಯಗಳಾಗಿರುತ್ತೆ.

Leave a Reply

Your email address will not be published. Required fields are marked *