ದಿನದ ಅಪರಾಧಗಳ ಪಕ್ಷಿನೋಟ 07ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 06.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

             ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.12.2020 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಶ್ರೀ. ಜಗದೀಶ್ ರೆಡ್ಡಿ, ಪಿಎಸ್‌ಐ ಬಂಗಾರಪೇಟೆ ರವರು ಹಾಗೂ ಸಿಬ್ಬಂದಿಯವರು ಠಾಣಾ ಸರಹದ್ದಿನ ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಮದ್ಯಾಹ್ನ 1.00 ಗಂಟೆಯಲ್ಲಿ ನೇರಳೆಕೆರೆ ಕಡೆಯಿಂದ ದ್ವಿಚಕ್ರ ವಾಹನವೊಂದರಲ್ಲಿ ಮೂರು ಜನರು ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ವಾಹನವನ್ನು ನಿಲ್ಲಿಸದೇ ತಿರುಗಿಸಿಕೊಂಡು ಹೋಗಿದ್ದು, ಇವರನ್ನು ಹಿಂಬಾಲಿಸಿ ಸುತ್ತುವರೆದು ವಾಹನ ಸಮೇತ ಹಿಡಿದುಕೊಂಡು ಹೆಸರು ವಿಳಾಸಗಳನ್ನು ಕೇಳಲಾಗಿ, ಭಯಭೀತರಾಗಿ ತಡವರಿಸಿಕೊಂಡು ಬೆವರುತ್ತಾ 1) ಮುರುಗೇಶ್ @ ಮುರುಗ, ಗರುಡಕೆಂಪನಹಳ್ಳಿ ಗ್ರಾಮ, 2) ರಾಘವೇಂದ್ರ ಕುಮಾರ್ @ ರಾಘವೇಂದ್ರ, ಚಿನ್ನಕೋಟೆ ಗ್ರಾಮ & 3) ಸುರೇಶ್, ರಾಮಾಫುರ ಗ್ರಾಮ ಎಂದು ತಿಳಿಸಿದ್ದು, ಇವರು ಬರುತ್ತಿದ್ದ ವಾಹನದ ನೊಂದಣಿ ಸಂಖ್ಯೆ ನೋಡಿದಾಗ ಎಪಿ-03-ಬಿಯು-6853 ಪ್ಯಾಷನ್ ಪ್ರೋ ದ್ವಿಚಕ್ರ ವಾಹನವಾಗಿರುತ್ತದೆ. ವಾಹನದ ದಾಖಲಾತಿಗಳನ್ನು ಕೇಳಿದಾಗ ಯಾವುದೇ ಸಮಂಜಸವಾದ ಉತ್ತರ ನೀಡದೇ ಯಾವುದೇ ದಾಖಲಾತಿಗಳು ಇಲ್ಲವೆಂದು, ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಬರುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ ಸದರಿಯವರನ್ನು ವಶಕ್ಕೆ ಪಡೆದುಕೊಂಡು ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 05.12.2020 ರಂದು ಈ ಕೇಸಿನ ಪಿರ್ಯಾದಿ ಸೈಯದ್ ಸಲ್ಮಾನ್, ಮೆಹಬೂಬ್ ನಗರ, ಚಿಂತಮಣಿ ರವರು ತನ್ನ ಟಾಟಾ ಏಸ್ ವಾಹನ ಸಂಖ್ಯೆ ಕೆಎ-40-7427 ರಲ್ಲಿ ಈರುಳ್ಳಿಯನ್ನು ಹಾಕಿಕೊಂಡು, ಬಂಗಾರಪೇಟೆಯಲ್ಲಿ ಲೋಡ್ ಮಾಡಿ, ವಾಪಸ್ಸು ಹೋಗುತ್ತಿದ್ದಾಗ, ಯಾರೋ ಟ್ರಾಕ್ಟರ್ ಚಾಲಕನು ಪಿರ್ಯಾದಿಯನ್ನು ನಿಲ್ಲಿಸಿ, ಟ್ರಾಕ್ಟರ್ ರಿಪೇರಿಯಾಗಿದ್ದು, ಕೋಲಾರದವರೆಗೆ ಎಳೆದುಕೊಂಡು ಹೋಗಲು ತಿಳಿಸಿದ್ದರಿಂದ ಪಿರ್ಯಾದಿಯು ಒಪ್ಪಿ ಟಾಟಾಏಸ್ ವಾಹನಕ್ಕೆ ಹಗ್ಗ ಕಟ್ಟಿಕೊಂಡು ಟ್ರಾಕ್ಟರ್ ಗೆ ಕಟ್ಟಿಕೊಂಡು ಹುದುಕುಳ ಹತ್ತಿರ ಹೋದಾಗ, ಟಾಟಾ ಏಸ್ ವಾಹನದ ಇಂಜಿನ್ ನಲ್ಲಿ ಬಾಯಿಲ್ ಆಗಿ ಹೊಗೆ ಹೊರಗೆ ಬರುತ್ತಿದ್ದುದನ್ನು ಪಿರ್ಯಾದಿಯು ಕಂಡು ವಾಹನವನ್ನು ನಿಲ್ಲಿಸಿ, ಟ್ರಾಕ್ಟರ್ ಚಾಲಕನಿಗೆ ಟ್ರಾಕ್ಟರ್ ನ್ನು ಬೇರೆಯವರ ಸಹಾಯದಿಂದ ಕೋಲಾರಕ್ಕೆ ತೆಗೆದುಕೊಂಡು ಹೋಗಲು ತಿಳಿಸಿ, ರಾತ್ರಿ ಸುಮಾರು 8.45 ಗಂಟೆಯಲ್ಲಿ ಟಾಟಾ ಏಸ್ ಗೆ ಮತ್ತು ಟ್ರಾಕ್ಟರ್ ಗೆ ಕಟ್ಟಿದ್ದ ಹಗ್ಗವನ್ನು ಪಿರ್ಯಾದಿದಾರರು ಮತ್ತು ಟ್ರಾಕ್ಟರ್ ಚಾಲಕನು ಸೇರಿ ಬಿಚ್ಚುತ್ತಿದ್ದಾಗ, ಕಾರ್ ಸಂಖ್ಯೆ ಕೆಎ-08-ಎಂ-5204 ನ್ನು ಅದರ ಚಾಲಕನು ಪೋನ್ ನಲ್ಲಿ ಮಾತನಾಡಿಕೊಂಡು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಟ್ರಾಕ್ಟರ್ ನ ಬಲಗಡೆಯ ಮುಂಭಾಗದ ಚಕ್ರಕ್ಕೆ ಡಿಕ್ಕಿಪಡಿಸಿದ್ದರಿಂದ ಆ ಚಕ್ರವು ಪಿರ್ಯಾದಿಗೆ ಹಾಗೂ ಟ್ರಾಕ್ಟರ್ ಚಾಲಕನಿಗೆ ಬಿದ್ದಾಗ, ಪಿರ್ಯಾದಿಗೆ ಎಡಗಾಲಿಗೆ ಹಾಗೂ ಎಡಕಣ್ಣಿನ ಮೇಲೆ ರಕ್ತಗಾಯಗಳಾಗಿರುತ್ತದೆ. ಟ್ರಾಕ್ಟರ್ ಚಾಲಕನಿಗೂ ಸಹ ರಕ್ತಗಾಯಗಳಾಗಿರುತ್ತದೆ. ಕಾರ್ ಚಾಲಕನು ಡಿಕ್ಕಿಪಡಿಸಿ ಕಾರ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

Leave a Reply

Your email address will not be published. Required fields are marked *