ದಿನದ ಅಪರಾಧಗಳ ಪಕ್ಷಿನೋಟ 07ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 06.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜ್‌ಗೋಪಾ‌ಲ್‌ ಬಿನ್ ಮುನಿಯಪ್ಪ, ರಾಮಾಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 05/05/2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ  ಫ್ಯಾಷನ್ ಪ್ರೋ ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ.07-ಇಸಿ-0332 ರಲ್ಲಿ ಸ್ನೇಹಿತ ಮಲ್ಲೇಶ್ ರವರನ್ನು ಹಿಂಬದಿ ಕುಳ್ಳರಿಸಿಕೊಂಡು ಬಂಗಾರಪೇಟೆ – ಕೋಲಾರ ಮುಖ್ಯ ರಸ್ತೆಯ ಕುಪ್ಪನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಶಿಫ್ಟ್ ಕಾರ್ ಸಂಖ್ಯೆ: ಕೆ.ಎ.01-ಎಹೆಚ್ – 8147 ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ್ದು, ದೂರುದಾರರಿಗೆ ಮತ್ತು ಮಲ್ಲೇಶ್‌ ರವರಿಗೆ ರಕ್ತಗಾಯಗಳಾಗಿರುತ್ತೆ. ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕ, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತೇನೆ.

– ಹಲ್ಲೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಿಕ್ಕ ಬಿನ್ ಮುನಿಯಪ್ಪ, ಎ. ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ದೊಡ್ಡಮ್ಮ ಮುನಿಯಮ್ಮ ರವರೊಂದಿಗೆ ವೆಂಕಟೇಶ್ ಹಾಗೂ ನವೀನ್ ಕುಮಾರ್ ರವರು ಜಗಳ ಮಾಡುತ್ತಾ ಕೆಟ್ಟ ಮಾತುಗಳಿಂದ ಬೈಯುತ್ತಿದ್ದು, ದೂರುದಾರರು ಕೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಷಣ್ಮುಗಂ ಬಿನ್ ಮುನಿಯನ್‌, ಮಸ್ಕಂ ಸಿ ಬ್ಲಾಕ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 05.05.2020 ರಂದು ರಾತ್ರಿ 09.00 ಗಂಟೆಯಲ್ಲಿ ಮನೆಯ ಮುಂದೆ ಇರುವಾಗ, ಮಸ್ಕಂ “ಸಿ” ಬ್ಲಾಕ್ ವಾಸಿಗಳಾದ ಅರಳಪ್ಪ, ವಸಂತ, ಮತ್ತೀಸ್ ಹಾಗೂ ರಾಯಪ್ಪ ರವರುಗಳು ದೂರುದಾರರಿಗೆ “ಏಕೇ ಹೊರಗಡೆ ಇದ್ದೀರಾ” ಎಂದು ಹೇಳಿ, ಕೆಟ್ಟಮಾತುಗಳಿಂದ ಬೈದು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದಿದ್ದು, ಜಗಳ ಬಿಡಿಸಲು ಬಂದ ದೂರುದಾರರ ಹೆಂಡತಿ ವಿಜಯಲಕ್ಷ್ಮೀ ಮತ್ತು ತಮ್ಮ ಮುರುಗೇಶ್‌ ರವರಿಗೂ ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

 

– ದೊಂಬಿ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೆಂದಿಲ್‌ನಾಧನ್‌ ಬಿನ್ ಕಮಲನಾಧನ್‌, ನಾಚಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಸುಧಾಕರ್ ರವರೊಂದಿಗೆ ದಿನಾಂಕ 05.05.2020 ರಂದು ಬೆಳಿಗ್ಗೆ 11:30 ಗಂಟೆಗೆ  ಪಾರಾಂಡಹಳ್ಳಿ ಪಂಪ್ ಹೌಸ್ ಬಳಿ ಇರುವ ಸಾಯಿ ಬಾಬಾ ಲೇಔಟ್  ಕಡೆ ನಡೆದುಕೊಂಡು  ಹೋಗುತ್ತಿದ್ದಾಗ, ಸಂತೋಷ್, ಸತೀಶ್, ಬರ್ನಾಡ್, ದಿನೇಶ್ ಮತ್ತಿಬ್ಬರು ಕುಳಿತುಕೊಂಡು ಮಧ್ಯಪಾನ ಮಾಡುವ ತಯಾರಿಯಲ್ಲಿದ್ದು, ದೂರುದಾರರು ಮತ್ತು ಸುಧಾಕರ್  ರವರನ್ನು ನೋಡಿ ಸಂತೋಷ್ ಎಂಬುವನು “ನಿಂತುಕೊಳ್ಳಿ” ಎಂದು ಹೇಳಿದ್ದು, ಆಗ ದೂರುದಾರರು ಮತ್ತು ಸುಧಾಕರ್  ರವರು ಅವರ ಮಾತುಕೇಳದೆ ಮುಂದೆ ನಡೆದುಕೊಂಡು ಹೋದಾಗ, ಆರೋಪಿಗಳು ಖಾಲಿ ಬಿಯರ್ ಬಾಟಲ್‌, ಕಲ್ಲು ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿದ್ದು, ಅಡ್ಡ ಬಂದ ಸುಧಾಕರ್ ರವರಿಗೂ ಹೊಡೆದು ರಕ್ತಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *