ದಿನದ ಅಪರಾಧಗಳ ಪಕ್ಷಿನೋಟ 07ನೇ ಮಾರ್ಚ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:05.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಮುನಿಸ್ವಾಮಿ, ಲಕ್ಕೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 06.03.2020 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ ತೋಟದಿಂದ ಮನೆಗೆ ನಡದುಕೊಂಡು ಬಾಸ್ಕರ್ ರವರ ಮನೆಯ ಸಮೀಪ ಹೋಗುತ್ತಿದ್ದಾಗ, ಹಿಂದುಗಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ KA 02-JB-7167, HERO I-SMART ನ  ವಾಹನ  ಸವಾರ ಮುರಳಿ ಬಿನ್ ನರಸಿಂಹಪ್ಪ, ಮಾಸ್ತಿ ಸಮೀಪದ ನಾಗದೇನಹಳ್ಳಿ ಗ್ರಾಮದ  ವಾಸಿ ರವರು ವಾಹನವನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿಪಡಿಸಿದ ಪರಿಣಾಮ, ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

 

– ಇತರೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.06.03.2020 ರಂದು ಬೆಳಿಗ್ಗೆ 11.00 ಗಂಟೆಗೆ ಸಿ.ಹೆಚ್.ಸಿ ಶ್ರೀ ರಮೇಶ್ ರವರು ಗಸ್ತನ್ನು ನಿರ್ವಹಿಸುತ್ತಿದ್ದಾಗ ದೊಡ್ಡಚಿನ್ನಹಳ್ಳಿ ಗ್ರಾಮದಲ್ಲಿ ಪಾಂಡುರಂಗಸ್ವಾಮಿ ದೇವಸ್ಥಾನ ಬಳಿಯಿರುವ ಹೋಟಲ್ ನ  ಬಳಿ ಬಲರಾಮ್ ಸಿಂಗ್ ಬಿನ್ ರಾಮ್ ಸಿಂಗ್ ರವರು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಬಲರಾಮ್‌ ಸಿಂಗ್‌ ಮತ್ತು ಸ್ಥಳದಲ್ಲಿದ್ದ  1) 02 ಪ್ಲಾಸ್ಟಿಕ್ ಲೋಟಗಳು, 2) McDowells DELUXE XXX RUM ಯ 180 ಎಂ.ಎಲ್ ನ 02 ಖಾಲಿ ಟೆಟ್ರಾ ಪಾಕೇಟ್ಗಳು, 3) McDowells DELUXE XXX RUM ಯ 180 ಎಂ.ಎಲ್ ನ 01 ಟೆಟ್ರಾ ಪಾಕೇಟ್. 4) HAYWARDS CHEERS WHISKY ಯ 180 ಎಂ.ಎಲ್ ನ 01 ಟೆಟ್ರಾ ಪಾಕೇಟ್. 5) OLD TAVERN WHISKY ಯ 180 ಎಂ.ಎಲ್ ನ 01 ಟೆಟ್ರಾ ಪಾಕೇಟ್. 6) No.1 HIGHWAY DELUXE WHISKY ಯ 90 ಎಂ.ಎಲ್ ನ 08 ಟೆಟ್ರಾ ಪಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *