ದಿನದ ಅಪರಾಧಗಳ ಪಕ್ಷಿನೋಟ 07ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:06.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹರಿದಾಸ್ ಬಿನ್ ತ್ಯಾಗರಾಜ್, ಬಿ.ಜಿ.ಎಂ.ಎಲ್ ಶಾಲೆ ಬಳಿ, ಸ್ಮಿತ್‌ ರಸ್ತೆ, ಕೆ.ಜಿ.ಎಫ್ ರವರು ದಿನಾಂಕ 06.02.2020 ರಂದು ಸಂಜೆ 4-00 ಗಂಟೆಗೆ ನೇರಳೆಕೆರೆ ಗೇಟ್ ಬಳಿ 4 ಲಕ್ಷ ರೂ ಇದ್ದ ಕ್ಯಾಷ್ ಬ್ಯಾಗ್ ಸಮೇತ  ವಿಜಯ್ ಕುಮಾರ್ ಟೀ ಅಂಗಡಿ ಬಳಿ ಹೋಗಿ ಟೀ ಕುಡಿದು ಕ್ಯಾಷ್ ಬ್ಯಾಗ್ ಅನ್ನು ಟೇಬಲ್ ಮೇಲೆ ಇಟ್ಟು, ಹಣವನ್ನು ಕೊಡಲು ಜೋಬಿನಲ್ಲಿದ್ದ ಪರ್ಸ್ ಅನ್ನು ತೆಗೆಯುತ್ತಿದ್ದಾಗ, ಯಾರೋ ಒಬ್ಬ ಆಸಾಮಿ ಟೇಬಲ್ ಮೇಲೆ ಇಟ್ಟಿದ್ದ ಕ್ಯಾಷ್ ಬ್ಯಾಗ್ ಅನ್ನು ತೆಗೆದುಕೊಂಡು ಓಡಿ ಹೋಗಿ ಸ್ವಲ್ಪ ದೂರದಲ್ಲಿ ಮೊತ್ತೊಬ್ಬ  ಆಸಾಮಿ ಹೊಂಡಾ ಶೈನ್ ದ್ವಿಚಕ್ರ ವಾಹನದಲ್ಲಿ  ಕುಳಿತಿದ್ದು ಅದೇ ವಾಹನದಲ್ಲಿ ಬಂಗಾರಪೇಟೆ ಕಡೆ ಹೊರಟು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಶಹಬಾಜ್‌‌ ಬಿನ್ ಖಾದರ್‌, ದೇಶಿಹಳ್ಳಿ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ 04.02.2020 ರಂದು ರಾತ್ರಿ 7.45 ಗಂಟೆಯಲ್ಲಿ ದೇಶಿಹಳ್ಳಿಯಲ್ಲಿರುವ ಹಾಲಿನ ಡೈರಿಯ ಸಮೀಪ ರಸ್ತೆಯ ಎಡಭದಿಯಲ್ಲಿ  ಬಾಬು ಬಿನ್ ಮುನೀರ್ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ, ಕಾಮಸಮುದ್ರಂ-ಬಂಗಾರಪೇಟೆ ರಸ್ತೆಯಲ್ಲಿ  ಪಲ್ಸರ್  ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಕ್ಸ್-6976 ರ ವಾಹನವನ್ನು ಅದರ ಸವಾರ ಮುರುಗೇಶ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾಬು ರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪ್ರಯುಕ್ತ, ಬಾಬು ರವರು ಕೆಳಗೆ ಬಿದ್ದಾಗ ಬಲಭಾಗದ ತಲೆಯ ಮೇಲೆ, ಬಲಕಾಲಿಗೆ, ಎಡಗೈ ಬೆರಳಿಗೆ ಮತ್ತು ಬಲಕಣ್ಣಿನ ಮೇಲೆ ರಕ್ತಗಾಯಗಳಾಗಿರುತ್ತೆ.

ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಗಂಗಪ್ಪ, ಚಿಗರಾಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 05.02.2020 ರಂದು ರಾತ್ರಿ 8.15 ಗಂಟೆಯಲ್ಲಿ  ಮಗ ಬಾಲಾಜಿ ಮತ್ತು ಅಣ್ಣನ ಮಗನಾದ ನಂದು ಮತ್ತು ಭಾಮೈದನ ಮಗನಾದ ಸುಬ್ರಮಣಿ 04 ಜನರು ಡಿಸ್ಕವರ್ ದ್ವಿ ಚಕ್ರ ವಾಹನ ಸಂ. ಕೆ.ಎ. 08 ಯು 5319 ರಲ್ಲಿ ನಂದು ರವರು ವಾಹನವನ್ನು ಚಲಾಯಿಸಿಕೊಂಡು ಬಂಗಾರಪೇಟೆ ಕೆ.ಜಿ.ಎಫ್. ಮುಖ್ಯ ರಸ್ತೆ ಬೆಂಗನೂರು ಗೇಟ್ ಸಮೀಪ ಬರುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಬುಲೆಟ್ ದ್ವಿಚಕ್ರವಾಹನ ನಂ. ಕೆ.ಎ. 07 ಟಿ.ಸಿ. 66 ಅನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪ್ರಯುಕ್ತ ಬಾಲಾಜಿ, ಸುಬ್ರಮಣಿ, ನಂದು ಮತ್ತು ದೂರುದಾರರಿಗೆ ಗಾಯವಾಗಳಾಗಿರುತ್ತದೆ.  ಆರೋಪಿಯು ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.

– ಇತರೆ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತೀಶ್‌ ರೆಡ್ಡಿ, ಪೊಲೀಸ್ ಕಾನ್ಸ್‌ಟೆಬಲ್‌, ಬೇತಮಂಗಲ ಪೊಲೀಸ್ ಠಾಣೆ ಮತ್ತು ರಾಜ್‌ ಕುಮಾರ್‌, ಪೊಲೀಸ್ ಕಾನ್ಸ್‌ಟೇಬಲ್‌ ರವರು ದಿನಾಂಕ:06.02.2020 ರಂದು ಸಂಜೆ ಆಪದ್ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ,  ಎ.ಎಸ್.ಐ ಎನ್.ಪಿ. ಸಿಂಗ್ ರವರು ರಾಮಸಾಗರ ಗ್ರಾಮದಲ್ಲಿ ಯಾರೋ ಗಲಾಟೆಗಳು ಮಾಡಿಕೊಳ್ಳುತ್ತಿದ್ದಾರೆಂದು ರಾಮಸಾಗರ ಗ್ರಾಮಕ್ಕೆ ಹೋಗಲು  ತಿಳಿಸಿದ್ದರಿಂದ, ದೂರುದಾರರು ಸಂಜೆ 6-00 ಗಂಟೆಗೆ ರಾಮಸಾಗರ ಗ್ರಾಮಕ್ಕೆ ಹೋಗಿ ನೋಡದಾಗ, ನರೇಶ್‌ ಎಂಬುವರು ಗ್ರಾಮದ ರಸ್ತೆಯಲ್ಲಿ ನಿಂತುಕೊಂಡು ಊರಿನವರು ಯಾರದರೂ ನನ್ನ ವಿಚಾರಕ್ಕೆ ಬಂದರೆ ಸಾಯಿಸಿಬಿಡುತ್ತೇನೆ ಎಂದು ಕೂಗಾಡುತ್ತಿದ್ದು, ಆತನ ಬಳಿ ಹೋಗಿ ಯಾಕೆ ಗಲಾಟೆ ಮಾಡುತ್ತೀಯಾ ಎಂದು ಕೇಳಲಾಗಿ ಆತನು ಸಮವಸ್ತ್ರದಲ್ಲಿದ್ದ ಪೋಲೀಸರ ಮೇಲೆ ನೀವ್ಯಾರು ನನ್ನನ್ನು ಕೇಳುವುದಕ್ಕೆ ಎಂದು ಗಲಾಟೆ ಮಾಡಿ ರಾಜ್ ಕುಮಾರ್ ರವರ ಷರ್ಟ್ ನ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಎಳೆದಾಡಿ,  ಮುಖದ ಮೇಲೆ ಆತನ ಕೈ ಮುಷ್ಟಿಯಿಂದ ಗುದ್ದಿ  ಗಾಯಪಡಿಸಿರುತ್ತಾನೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಎಸ್.ಎ ಪನ್ಸಾಂಬಾಲ್, ಸಿ.ಎಸ್.ಓ, ಬಿ.ಜಿ.ಎಂ.ಎಲ್ ರವರು ನೀಡಿದ ದೂರಿನಲ್ಲಿ, ದಿನಾಂಕ:06.02.2020 ರಂದು 04.00 ಗಂಟೆಯಲ್ಲಿ ಉರಿಗಾಂ ಭಾಲಗಾಟ್ ಲೈನಿನಲ್ಲಿ ಜಯವೇಲು  ರವರು ತಮ್ಮ ಮನೆ ನಂ 91 ರ ಮನೆಯ ಮುಂಭಾಗದಲ್ಲಿ ಬಿ.ಜಿ.ಎಂ.ಎಲ್ ಗೆ ಸಂಬಂದಿಸಿದ ಸ್ಥಳದಲ್ಲಿ ಹೆಚ್ಚುವರಿಯಾಗಿ ಕಾಂಪೌಂಡ್ ಗೋಡೆಯನ್ನು ನಿರ್ಮಿಸುತ್ತಿದ್ದಾಗ, ಬಿ.ಜಿ.ಎಂ.ಎಲ್ ನ ಸೆಕ್ಯೂರಿಟಿ ಸಿಬ್ಬಂದಿಯವರಾದ ಶ್ರೀ ದಕ್ಷಿಣಾ ಮೂರ್ತಿ ರವರು ಸದರಿ ಮನೆಯ ಬಳಿ ಹೋಗಿ ಕಾಮಗಾರಿಯನ್ನು ನಡೆಸಬೇಡಿ ಎಂದು ಜಯವೇಲು ರವರಿಗೆ ಹೇಳುತ್ತಿದ್ದಾಗ ಆ ಸ್ಥಳಕ್ಕೆ ಶ್ರೀನಿವಾಸನ್ ಎಂಬಾತನು ಬಂದು ಸರ್ಕಾರದ ಕರ್ತವ್ಯದಲ್ಲಿದ್ದ ದಕ್ಷಿಣಾ ಮೂರ್ತಿ ರವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಆನಂತರ ಈ ವಿಚಾರ ಮುಖ್ಯ ದೂರುದಾರರಿಗೆ ತಿಳಿಸಿದ್ದು, ದೂರುದಾರರು ಸ್ಥಳಕ್ಕೆ ಹೋದಾಗ, ಶ್ರೀನಿವಾಸ್ ರವರು ಸರ್ಕಾರಿ ಕರ್ತವ್ಯದಲ್ಲಿದ್ದ ದೂರುದಾರರಿಗೆ ಬೆದರಿಕೆ ಹಾಕಿ, ಹಲ್ಲೆಮಾಡಲು ಪ್ರಯತ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ,  ಸಮವಸ್ತ್ರವನ್ನು ಹಿಡಿದು ಎಳೆದಾಡಿ ಸಮವಸ್ತ್ರಕ್ಕಿದ್ದ ರಿಬ್ಬನ್ ಮತ್ತು ಇಲಾಖೆಯ ಚಿಹ್ನೆಯನ್ನು ಕಿತ್ತು ಕೆಳಗೆ ಬೀಳಿಸಿರುತ್ತಾನೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಸಂತಾ, ಕಳ್ಳಿಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ತ್ರಿಷಾ, ವಯಸ್ಸು 10 ವರ್ಷ ರವರು ದಿನಾಂಕ 05.02.2020 ರಂದು ಸಂಜೆ 5.30 ಗಂಟೆಯಲ್ಲಿ ದೂರುದಾರರು ಮೈದುನನ ಮಗ ಪವನ್ ರವರನ್ನು ಆಸ್ಪತ್ರೆ ಕರೆದುಕೊಂಡು ಹೋಗಿದ್ದ  ಸಮಯದಲ್ಲಿ, ತ್ರಿಷಾ ರವರು ತನಗೆ ಅರಿವಿಲ್ಲದೇ ತನ್ನಷ್ಟಕ್ಕೆ ತಾನೇ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯಗಳಾಗಿ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ 06.02.2020 ರಂದು ಬೆಳಿಗ್ಗೆ 7.45 ಗಂಟೆಗೆ ಮೃತಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *