ದಿನದ ಅಪರಾಧಗಳ ಪಕ್ಷಿನೋಟ 07ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍06.01.2020 ರಂದು   ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.01.2020 ರದು ಇಮ್ರಾನ್ ರವರು ಕೆಲಸ ಮಾಡುವ ಚಿಕನ್ ಅಂಗಡಿಯಲ್ಲಿ ಕೋಳಿ ಕಳೆದು ಹೋಗಿರುವುದಾಗಿ ಬಂದು ಈ ಕೇಸಿನ ದೂರುದಾರರಾದ ಶೋಯಬ್ ಅಹ್ಮದ್ ಖಾನ್, ಗಾಂಧಿನಗರ, ಬಂಗಾರಪೇಟೆ ರವರ ತಮ್ಮನಾದ ಶಬಾಶ್, ಚಿಕನ್ ಅಂಗಡಿಯಲ್ಲಿ ಬಂದು ನೋಡಿರುತ್ತಾರೆ. ಇದೇ  ವಿಷಯದಲ್ಲಿ ದಿನಾಂಕ 06.01.2020 ರಂದು ದೂರುದಾರರು  ಸಿ.ರಹೀಂ ನಗರದ  ಟೀ ಅಂಗಡಿಯ ಬಳಿ ಟೀ ಕುಡಿಯುತ್ತಿದ್ದಾಗ, ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಇಮ್ರಾನ್ ಬಿನ್ ರೌಫ್ ಎಂಬುವರು ಒಂದು ಕಬ್ಬಿಣದ ಪೈಪಿನಿಂದ ದೂರುದಾರರು ಮೊಣಕಾಲಿಗೆ ಹೊಡೆದು ಊತಗಾಯವುಂಟು ಮಾಡಿರುತ್ತಾರೆ. ಉಳಿದ ಆರೋಪಿಗಳಾದ ವಾಸೀಂ, ಮೂನೀರ್, ಆರೀಪ್ ಮತ್ತು ಅರ್‍ಬಸ್‌  ರವರು ತಮ್ಮ ಕೈಗಳಿಂದ ದೂರುದಾರರಿಗೆ ಮೈಕೈ ಮೇಲೆ ಹೊಡೆದು ಊತ ಗಾಯವುಂಟು ಮಾಡಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮಮ್ಮ ಕೊಂ ನಾರಾಯಣಸ್ವಾಮಿ, ಪಾರಾಂಡಹಳ್ಳಿ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳಾದ ರಮ್ಯಾ, 20 ವರ್ಷ ರವರು ದಿನಾಂಕ.31-12-2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *