ದಿನದ ಅಪರಾಧಗಳ ಪಕ್ಷಿನೋಟ 06 ನೇ ಆಗಸ್ಟ್‌ 2019

– ಕೊಲೆ : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.082019 ರಂದು ಬೆಳಿಗ್ಗೆ ಸುಮಾರು 6.00 ಗಂಟೆಗೆ ದೂರುದಾದದಾದ ಶ್ರೀಮತಿ ಮಲ್ಲಿಗ ಕೋಂ ದಾಮೋಧರನ್‌ ಮಸ್ಕಂ ಎ ಬ್ಲಾಕ್‌, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ಮಗ ಪ್ರದೀಪ್ ರಾಜ್ 26 ವರ್ಷ ರವರು ಮಸ್ಕಂನ ಮಾರಿಯಮ್ಮ ದೇವಸ್ಥಾನದಲ್ಲಿ ಕೊಲೆಯಾಗಿದ್ದಾನೆಂದು ತಿಳಿದು ಬಂದಿರುತ್ತೆಂದೂ, ತಿಳಿದು ಬಂದಿರುತ್ತದೆ. ದೂರುದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಮಗನ ಎಡ ಹಣೆಯ ಮೇಲೆ ರಕ್ತಗಾಯದ ಗುರುತು ಇದ್ದು, ಮುಖದ ಮೇಲೆ, ಕೈಗಳ ಮೇಲೆ ರಕ್ತ ಸೋರಿರುವ ಕಲೆಗಳಿರುತ್ತೆಂದೂ, ಪ್ರದೀಪ್ ರಾಜ್ ರವರು ದಿನಾಂಕ 04/05.08.2019 ರಂದು ರಾತ್ರಿ 1.00 ಗಂಟೆಯವರೆಗೆ ಮಸ್ಕಂನ ಎ.ಬ್ಲಾಕ್ನ ಮಾರಿಯಮ್ಮ ದೇವಸ್ಥಾನದ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಡ್ಯಾನ್ಸ್ ಮಾಡುತ್ತಿದ್ದನೆಂದು, ನಂತರ ದೂರುದಾರಳ ಅತ್ತಿಗೆ ಉಷಾರಾಣಿ ರವರ ಮನೆಯ ಪಕ್ಕದಲ್ಲಿ ಇರುವ ಹಾಳುಬಿದ್ದ ಮನೆಯ ಬಳಿ ಯಾವುದೋ ವಿಚಾರಕ್ಕೆ ಪ್ರದೀಪ್ ರಾಜ್ ನಿಗೂ, ಬೇರೆಯವರಿಗೂ ಗಲಾಟೆಗಳಾಗಿ ಯಾವುದೋ ಆಯುಧದಿಂದ ಯಾರೋ ವ್ಯಕ್ತಿಗಳು ತನ್ನ ಮಗನನ್ನು ಕೊಲೆ ಮಾಡಿರುತ್ತಾರೆಂದು ದೂರು.

-ಕನ್ನ ಕಳುವು : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾ ಶ್ರೀಮತಿ ಜಯಕಾಂತಿ ಕೋಂ ಪ್ರೇಮಕುಮಾರ್‌ ಮಾರಿಕುಪ್ಪಂ ರವರು ನೀಡಿದ ದೂರಿನಲ್ಲಿ ದಿನಾಂಕ 04.08.2019 ರಂದು ರಾತ್ರಿ 23.00 ಗಂಟೆಯಿಂದ ದಿನಾಂಕ 05.08.2019 ರ ಬೆಳಿಗ್ಗೆ 06.00 ಗಂಟೆಯ ಮದ್ಯೆ ಯಾರೋ ಕಳ್ಳರು ದೂರುದಾರರ ಮನೆಯ ಬೀಗವನ್ನು ಹೊಡೆದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿದ್ದ 1) ಒಂದು ಬಂಗಾರದ ಚೈನು ಸುಮಾರು 3 ಗ್ರಾಂ ಇದರ ಬೆಲೆ ಸುಮಾರು 6000/- 2) ಒಂದು ಜೊತೆ ಬಂಗಾರದ ಓಲೆ ಸುಮಾರು 3 ಗ್ರಾಂ ಇದರ ಬೆಲೆ ಸುಮಾರು 6000/- 3) ಮಕ್ಕಳ ಬಂಗಾರದ 2 ಉಂಗುರಗಳು ಸುಮಾರು 3 ಗ್ರಾಂ ಇದರ ಬೆಲೆ ಸುಮಾರು 6000/- 4) ಒಂದು ಜೊತೆ ಬೆಳ್ಳಿ ಕಾಲು ಚೈನು ಸುಮಾರು 40 ಗ್ರಾಂ ಇದರ ಬೆಲೆ ಸುಮಾರು 1000/- 5) ಮಗುವಿನ ಸೊಂಟದ ಬೆಳ್ಳಿ ಉಡುದಾರ ಸುಮಾರು 12 ಗ್ರಾಂ ಇದರ ಬೆಲೆ ಸುಮಾರು 500/- ಮತ್ತು 6) ನಗದು ಹಣ 5,000/- ಗಳನ್ನು ಕಳ್ಳತನ ಮಾಡಿದ್ದು, ಕಳುವಾಗಿರುವ ಬಂಗಾರ ಮತ್ತು ಬೆಳ್ಳಿ ಒಡವೆಗಳು ಹಾಗು ನಗದು ಸೇರಿದಂತೆ ಒಟ್ಟು ಸುಮಾರು 24,500/- ರೂ ಗಳ ಬೆಲೆ ಬಾಳುವುದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
– ರಸ್ತೆ ಅಪಘಾತಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಶಂಕರ್‌ ಬಿನ್ ಬತ್ತಿಯಪ್ಪ, ನಡಗುಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 04.08.2019 ರಂದು ದೂರುದಾರರು KA-08-R-0905 ದ್ವಿ ಚಕ್ರ ವಾಹನದಲ್ಲಿ ಕನಮನಹಳ್ಳಿ ಗ್ರಾಮದಿಂದ ಚಿಗರ್ಲಹಳ್ಳಿ ಗ್ರಾಮಕ್ಕೆ ಹೋಗಲು ಕನಮನಹಳ್ಳಿ ಗ್ರಾಮದ ಕ್ರಾಸ್ ಬಳಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ KA-04-MC-7789 ಕಾರಿನ ಚಾಲಕ ರವಿ ಬಿನ್ ನಾರಾಯಣಪ್ಪ, ತೂರಂಡಹಳ್ಳಿ ಕೋಲಾರ ರವರು ಸದರಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿ ಚಕ್ರ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿಹೊಡೆದ ಪ್ರಯುಕ್ತ ದೂರುದಾರರು ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಗಾಯಗಳಾಗಿರುತ್ತೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಶೇಖರ್‌ ಬಿನ್‌ ಮುನಿಸ್ವಾಮಿ ಬಿಲ್ಲೇರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ.04.08.2019 ರಂದು ಸಂಜೆ ದೂರುದಾರರ ಹೆಂಡತಿ ರವರಿಗೆ ಮೈ ಉಷಾರಿಲ್ಲದ ಕಾರಣ ದ್ವಿ ಚಕ್ರವಾಹನ ಸಂಖ್ಯೆ TN-23 CW-8578 ರಲ್ಲಿ ಮಂಜುಳಮ್ಮ ರವರನ್ನು ಕೂರಿಸಿಕೊಂಡು ಚಲಾಯಿಸಿಕೊಂಡು ಕೆ.ಜಿ.ಎಫ್ ಹೋಗಲು ಕೆ.ಜಿ.ಎಫ್-ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಪಾರಾಂಡಹಳ್ಳಿ ಉದಯ ನಗರದ ಹತ್ತಿರ ಬರುತ್ತಿದ್ದಾಗ ಲಾರಿ ನೊಂದಣಿ ಸಂಖ್ಯೆ KA-35 C-5255 ರ ಚಾಲಕನು ಕೆ.ಜಿ.ಎಫ್ ಕಡೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿ ಪಡಿಸಿ ಕಾರಣ ದೂರುದಾರರಿಗೆ ರಕ್ತ ಗಾಯಗಳಾಗಿರುತ್ತದೆ.
– ಮೋಸ/ವಂಚನೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 05.08.2019 ರಂದು ದೂರುದಾರರಾದ ಶ್ರೀ ಶಂಕರ್‌ ಬಿನ್‌ ಸುಬ್ರಮಣಿ ವಿಜಯನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ಸುಮಾರು ವರ್ಷಗಳಿಂದ ಬಂಗಾರಪೇಟೆಯಲ್ಲಿ BR ಏಜೆನ್ಸಿಯ ಹೆಸರಿನಲ್ಲಿ ದಿನ ಬಳಕೆಯ ವಸ್ತುಗಳಾದ ನೆಸ್ಲೆ ಇಂಡಿಯಾ ಲಿಮಿಟೆಡ್, ಟಾಟಾ ಗ್ಲೋಬಲ್ ಬೆವೆರೆಜ್ ಲಿಮಿಟೆಡ್, ಆಶಿಕಾ ಇಂಕ್ ಮತ್ತು ಆರ್.ಆರ್ ಮಸಾಲಾ, ಪತಾಂಜಲಿ ಇತ್ಯಾದಿ ಏಜಿನ್ಸಿಯನ್ನು ಪಡೆದು ವಸ್ತುಗಳನ್ನು ಬಂಗಾರಪೇಟೆ ಪಟ್ಟಣದ ಮತ್ತು ಕೆಜಿಎಫ್ ಅಂಗಡಿಗಳಿಗೆ ವಿತರಿಸುತ್ತಿದ್ದು, 2002 ನೇ ಸಾಲಿನಲ್ಲಿ ಆರೋಪಿ ಹರೀಶ ರವರನ್ನು ದಿನಗೂಲಿ ನೌಕರನನ್ನಾಗಿ ಸೇರಿಸಿಕೊಂಡು ಸೇಲ್ಸ್ ಮ್ಯಾನ್ ಆಗಿ ಬಂಗಾರಪೇಟೆ ಟೌನ್ ಗೆ ನೇಮಿಸಿದ್ದು, ಆರೋಪಿಯು ಮೇಲ್ಕಂಡ ಏಜೆನ್ಸಿಯಿಂದ ಬಂದ ವಸ್ತುಗಳನ್ನು ದಿನಾಂಕ 04-01-2016 ರಿಂದ 30-05-2018 ರ ವರೆಗೆ ಅಂಗಡಿಗಳಿಗೆ ಮಾರಾಟ ಮಾಡಿ ಲೆಡ್ಜರ್ ನಲ್ಲಿ ಬೆಲೆಯನ್ನು ನಮೂದು ಮಾಡಿ ವಸೂಲಿ ಮಾಡಿದ ಹಣವನ್ನು ಸರಿಯಾಗಿ ಕಂಪ್ಯೂಟರ್ ನಲ್ಲಿ ನಮೂದು ಮಾಡದೆ ಒಟ್ಟು ರೂ 20,32,432/-ಗಳನ್ನು ಮೋಸಮಾಡಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಪ್ಪ ಬಿನ್‌ ಮ್ಯಾಕಲಪ್ಪ ಗುಂಡಲಪಾಳ್ಯ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:05.08.2019 ರಂದು ದೂರುದಾರರ ತಂಗಿ ಕವಿತಾರವರಿಗೆ 11 ವರ್ಷಗಳ ಹಿಂದೆ ತನ್ನ ಸಂಬಂಧಿ ಅಡಂಪಲ್ಲಿ ವಾಸಿ ವೇಂಕಟರಾಮ ಎಂಬುವವರಿಗೆ ಕೋಟ್ಟು ಮದುವೆ ಮಾಡಿದ್ದು ಇವರಿಗೆ 5 ವರ್ಷದ ಗಂಡು ಮಗು ಇರುತ್ತೆ. ದೂರುದಾರರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಯಾರಿಗೂ ವಿಚಾರ ತಿಳಿಸದೆ ಕವಿತಾ ಮತ್ತು ಆಕೆಯ 5 ವರ್ಷದ ಗಂಡು ಮಗುವಿನೊಂದಿಗೆ ಮನೆ ಬಿಟ್ಟು ಹೋಗಿರುತ್ತಾಳೆ. ದೂರುದಾರರು ಸಂಜೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಕವಿತಾ ಮತ್ತು ಆಕೆಯ 5 ವರ್ಷದ ಗಂಡು ಮಗು ಮನಯಲ್ಲಿ ಇರದೆ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *