ದಿನದ ಅಪರಾಧಗಳ ಪಕ್ಷಿನೋಟ 06 ನೇ ಡಿಸೆಂಬರ್‌ 2018

 – ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ   ಶ್ರೀ. ಸುರೇಶ್‌ ಬಿನ್‌  ಚಿಕ್ಕರಾಮರೆಡ್ಡಿ ಉರಿಗಾಂ ಪೇಟೆ ರವರು  ದಿನಾಂಕ 21.05.2018 ರಂದು  ಮನೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಗಿಡಗಳಿಗೆ ನೀರು ಹಾಕುತ್ತಿರುವಾಗ,  ತೆಂಗಿನ ಮರದಿಂದ ಒಣತೆಂಗಿನ ಗರಿ ರವಿಂದ್ರ ರೆಡ್ಡಿಯವರು ಹಸು ಕಟ್ಟುವುದಕ್ಕೆ ಹಾಕಿದ್ದ ಪ್ಲಾಸ್ವೀಕ್ ಟಾರ್ಪಲ್ ಮೇಲೆ ಬಿದ್ದಿರುವ ಕಾರಣ ಆರೋಪಿ  ರವಿಂದ್ರರೆಡ್ಡಿ ಮತ್ತು  ಸುಧಾಕರ್ ರೆಡ್ಡಿ,  ಎಂಬುವರು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ  ಹೊಡೆದು,  ಪ್ರಾಣ ಬೆದರಿಕೆ ಹಾಕಿರುತ್ತಾರೆ,

– ರಸ್ತೆ ಅಪಘಾತಗಳು :‍  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಗೋವಿಂದಪ್ಪ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮಗಳಾದ ಬಾರ್ಗವಿ, 16 ವರ್ಷ ಜೊತೆಗೆ ಜುಪಿಟರ್ ದ್ವಿಚಕ್ರ ವಾಹನ ಸಂಖ್ಯೆ KA-08 S-5725 ರಲ್ಲಿ ಬಂಗಾರಪೇಟೆಯಿಂದ ತನ್ನ ಗ್ರಾಮಕ್ಕೆ ಹೋಗಲು ಬೂದಿಕೋಟೆ ವೃತ್ತದ ಸ್ವಲ್ಪ ಮುಂದೆ, ಶೇಷಾದ್ರಿ ಮೊದಲಿಯರ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಸ್ಪ್ಲೆಂಡರ್‌ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ, ದೂರುದಾರರಿಗೆ ಮತ್ತು ಬಾರ್ಗವಿ ರವರಿಗೆ ರಕ್ತಗಾಯಗಳಾಗಿರುತ್ತೆ.

Leave a Reply

Your email address will not be published. Required fields are marked *