ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 05.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಶೋಕ್ ಕುಮಾರ್ ಬಿನ್ ಬೆಲ್ಲಪ್ಪ, ವಡಗೂರು ಗ್ರಾಮ, ಕೋಲಾರ ತಾಲ್ಲೂಕು ರವರು ದಿನಾಂಕ 05-01-2021 ರಂದು ಸಂಜೆ 5.30 ಗಂಟೆಯಲ್ಲಿ ದ್ವಿ ಚಕ್ರವಾಹನ ಸ್ಪೆಂಡರ್ ಪ್ಲಸ್ ಸಂಖ್ಯೆ KA-07-X-3575 ರಲ್ಲಿ ನಾದಿನಿ ಪಾರ್ವತಿ ರವರನ್ನು ಕುಳ್ಳರಿಸಿಕೊಂಡು ಬಸವನಗುಡಿದಿನ್ನೆ ಸಮೀಪ ಬರುತ್ತಿದ್ದಾಗ, ಕ್ಯಾಸಂಬಳ್ಳಿ ಕಡೆಯಿಂದ ಪಲ್ಸರ್ ದ್ವಿ ಚಕ್ರ ವಾಹನ ಸಂಖ್ಯೆ KA-53-EF-5926 ರಲ್ಲಿ ಅದರ ಚಾಲಕ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ದೂರುದಾರರು ಮತ್ತು ಪಾರ್ವತಿ ರವರು ವಾಹನ ಸಮೇತ ಕೆಳಗೆ ಬಿದ್ದು ಗಾಯಗಳಾಗಿರುತ್ತದೆ.