ದಿನದ ಅಪರಾಧಗಳ ಪಕ್ಷಿನೋಟ 06 ನೇ ನವೆಂಬರ್ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:05.11.2019 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 06.11.2019 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಮೋಸ/ವಂಚನೆ : 01

ಸಿ.ಇ.ಎನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಮೂರ್ತಿ ಬಿನ್ ನಾರಾಯಣಪ್ಪ, ವಿಜಯನಗರ, ಬಂಗಾರಪೇಟೆ ರವರ  ಮೊಬೈಲ್ ಗೆ ದಿನಾಂಕ: 01.11.2019 ರಂದು ಮಧ್ಯಾಹ್ನ 2.00 ಗಂಟೆಯಿಂದ 03.00 ಗಂಟೆಯ ಮಧ್ಯೆ ದೂರುದಾರರ ಬಂಗಾರಪೇಟೆ ಶಾಖೆಯ ಕೆನರಾ ಬ್ಯಾಂಕ್ ಖಾತೆಯಿಂದ  ಕ್ರಮವಾಗಿ ರೂ 48,196/-,  12,999/-,  12,999/- ಮತ್ತು 7,500/- ಒಟ್ಟು ರೂ 81,694/- ಕಡಿತವಾಗಿರುವಂತೆ ಸಂಧೇಶಗಳು ಬಂದಿದ್ದು, ದೂರುದಾರರಿಗೆ ಯಾರೋ ಮೋಸ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿರುತ್ತಾರೆ.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಭಾಗ್ಯರಾಜ್‌ ಬಿನ್ ಸುಂದರ್‌ರಾಜ್, ಅಂಬೇಡ್ಕರ್‌ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಅಕ್ಕ ಶ್ರೀಮತಿ ಸುಮಿತ್ರ, 40 ವರ್ಷ ರವರು ಮಾನಸಿಕ ಸ್ಥಿರತೆಯನ್ನು ಕಳೆದುಕೋಂಡು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ:05.11.2019 ರಂದು ಸಂಜೆ  5.00 ಗಂಟೆಗೆ  ಎಸ್.ಟಿ ಬ್ಲಾಕ್ ನ ಆಕೆಯ ವಾಸದ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *