ದಿನದ ಅಪರಾಧಗಳ ಪಕ್ಷಿನೋಟ 06ನೇ ಡಿಸೆಂಬರ್‌ 2019

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಮುನಿಸ್ವಾಮಿ, ಬಲ್ಲ ಗ್ರಾಮ,  ಮುಳಬಾಗಿಲು ತಾಲ್ಲೂಕು ರವರ ಅಳಿಯನಾದ ಮಂಜುನಾಥ ರವರು ದಿನಾಂಕ 03.12.2019 ರಂದು ರಾತ್ರಿ 7.30 ಗಂಟೆಯಲ್ಲಿ ಪ್ಯಾಸಂಜರ್ ಆಟೋ ಸಂಖ್ಯೆ ಕೆ.ಎ-07-ಎ-5382 ನ್ನು ಮುಳಬಾಗಿಲು ರಸ್ತೆಯ ವೆಂಕಟಾಪುರ ಗ್ರಾಮದ ಬಳಿ ಬರುತ್ತಿದ್ದಾಗ, ಮುಳಬಾಗಿಲು ಕಡೆಯಿಂದ ಕಾರ್ ಸಂಖ್ಯೆ ಕೆ.ಎ-02-ಎಂ.ಎಪ್-8209 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ಯಾಸೇಂಜರ್ ಆಟೋಗೆ ಡಿಕ್ಕಿಪಡಿಸಿದ ಪ್ರಯುಕ್ತ  ಮಂಜುನಾಥ ರವರು ಆಟೋ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

– ಜೂಜಾಟ ಕಾಯ್ದೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 05.12.2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಉರಿಗಾಂಪೇಟೆ ಯರನಾಗನಹಳ್ಳಿ ರಸ್ತೆಯಲ್ಲಿರುವ ಸರಸ್ವತಿ ವಿಧ್ಯಾಸಂಸ್ಥೆಯ ಬಳಿಯಿರುವ ನಾರಾಯಣಪ್ಪ ಎಂಬುವರ ಜಮೀನಿನ ಬಳಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ೧. ಮಂಜುನಾಥ್‌ ಬಿನ್ ಮುನಿಯಪ್ಪ, ೨. ಮಗೇಶ್ ಬಿನ್ ಸುಬ್ರಮಣಿ, ೩. ರಫೀಕ್‌ ಬಿನ್ ಉಸೇನ್‌ ಸಾಬ್‌, ೪. ಷಫೀ ಬಿನ್ ಅಮಾನುಲ್ಲಾ, ೫. ವೆಂಕಟೇಶ್‌ ಬಿನ್ ಕೃಷ್ಣಪ್ಪ, ೬. ರಂಜಿತ್‌ ಬಿನ್ ರಾಮಚಂದ್ರ ಉರಿಗಾಂಪೇಟೆ ವಾಸಿಗಳು ರವರನ್ನು ಪಿ.ಎಸ್.ಐ ವಿಜಯ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳನ್ನು ಮತ್ತು 10,700/- ರೂಗಳನ್ನು ವಶಪಡಿಸಿಕೊಂಡಿರುತ್ತಾರೆ.

– ಹಲ್ಲೆ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರತ್ತದೆ.

ದೂರುದಾರರಾದ ಶ್ರೀ. ಸೋಮ್‌ಬಾಬು ರೆಡ್ಡಿ ಬಿನ್ ನರಸಿಂಹರೆಡ್ಡಿ, ಕೊಡಿಗೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 04.12.2019 ರಂದು  ಬೆಳಗ್ಗೆ 7.30 ಗಂಟೆಯಲ್ಲಿ ಕೊಡಿಗೇನಹಳ್ಳಿ ಗೇಟ್ ಬಳಿ ದೂರುದಾರರ ತಮ್ಮ ಚಂದ್ರಶೇಖರ ರೆಡ್ಡಿ ರವರು  ದೂರುದಾರರನ್ನು ಮುಂದಕ್ಕೆ ಹೊಗದಂತೆ ಅಡ್ಡಕಟ್ಟಿ ನಿಲ್ಲಿಸಿ, ಕೈಗಳಿಂದ ಹೊಡೆದಿದ್ದು, ನಂತರ ದೂರುದಾರರು ಮನೆಯಲ್ಲಿರುವಾಗ ಚಂದ್ರಶೇಖರ ರೆಡ್ಡಿ, ನರಸಿಂಹರೆಡ್ಡಿ ಮತ್ತು ಜಾನಕಮ್ಮ ರವರು ದೂರುದಾರರ ಮನೆ ಬಳಿ ಹೋಗಿ ಗಲಾಟೆ ಮಾಡಿ, ದೂರುದಾರರ ಹೆಂಡತಿ ಮತ್ತು  ಅತ್ತಿಗೆಯನ್ನು ಕೆಟ್ಟಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀ. ನರಸಿಂಹರೆಡ್ಡಿ ಬಿನ್ ನಾರಾಯಣರೆಡ್ಡಿ, ಕೊಡಿಗೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 04.12.2019 ರಂದು  ಬೆಳಗ್ಗೆ 10.00 ಗಂಟೆಯಲ್ಲಿ ತೋಟದ ಕಡೆ ಹೋಗುತ್ತಿದ್ದಾಗ, ಸೋಮಬಾಬುರೆಡ್ಡಿ, ವನಜಾಕ್ಷಿ, ಸಂಧ್ಯಾ ರವರು ದೂರುದಾರರನ್ನು ಅಡ್ಡಗಟ್ಟಿ ನಿಲ್ಲಿಸಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮುನಿರತ್ನಮ್ಮ ಕೊಂ ನಾಗೇಶ್‌, ವಟ್ರಕುಂಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕುಮಾರಿ. ಸಂಗೀತಾ, 19 ವರ್ಷ ರವರು ದಿನಾಂಕ: 03.12.2019 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *