ದಿನದ ಅಪರಾಧಗಳ ಪಕ್ಷಿನೋಟ 06ನೇ ಅಕ್ಟೋಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:05.10.2019 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಚಂದ್ರಾಚಾರಿ, ಚಾಂದ್‌ ಲೈನ್, ಬಂಗಾರಪೇಟೆ  ರವರು ದಿನಾಂಕ 01.10.2019 ರಂದು ರಾತ್ರಿ 8-45 ಗಂಟೆಯಲ್ಲಿ  ಬಂಗಾರಪೇಟೆ ರೈಲ್ವೆ ಕ್ವಾಟ್ರಸ್ ಮುಂಭಾಗ ಬರುತ್ತಿದ್ದಾಗ, ಆರೋಪಿ ವೆಂಕಟೇಶ್‌ಮೂರ್ತಿ, ದಿಡೀರ್‌ ನಗರ ರವರನ್ನು ಕಂಡು ಆತನಿಗೆ ಕಾರಹಳ್ಳಿ ಗ್ರಾಮದ ಜಮೀನು ಸರ್ವೆ ನಂ 140 ರ ಜಮೀನು ವಿಚಾರದಲ್ಲಿ ಜಾಗವನ್ನು ವೀಕ್ಷಣೆ ಮಾಡಲು ಅಧಿಕಾರಿಗಳು ಬರುತ್ತಾರೆ, ಕುಳಿತು ಮಾತನಾಡೋಣವೆಂದು ಹೇಳಿದಾಗ ವೆಂಕಟೇಶ್‌ಮೂರ್ತಿ ರವರು ತಾವು ಬರುವುದಿಲ್ಲವೆಂದು ಹೇಳಿ ಕೆಟ್ಟಮಾತುಗಳಿಂದ ಬೈದು,  ಕೋಲಿನಿಂದ  ಹೊಡೆದು ರಕ್ತ ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *