ದಿನದ ಅಪರಾಧಗಳ ಪಕ್ಷಿನೋಟ 06ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 05.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸುಲಿಗೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಎಸ್ ವಿ ಜಗನ್ನಾಥ್‌ ಬಿನ್ ವೆಂಕಟದಾಸಪ್ಪ, ಸುವರ್ಣಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಾಯಿ ಶ್ರೀಮತಿ ಗೌರಮ್ಮ ರವರು ದಿನಾಂಕ 05-07-2018 ರಂದು ಮದ್ಯಾನ 2.45 ಗಂಟೆಯಲ್ಲಿ ಒಬ್ಬರೇ ಮನೆಯಲ್ಲಿರುವಾಗ, ಸುಮಾರು 35 ರಿಂದ 40 ವರ್ಷ ವಯಸ್ಸಳ್ಳ ವ್ಯಕ್ತಿ ದೂರುದಾರರ ತಾಯಿ ಬಳಿ ದೂರುದಾರರು ಇದ್ದಾರ ಎಂದು ಕೇಳಿದ್ದು, ದೂರುದಾರರ ತಾಯಿ ಬೆಂಗಳೂರಿಗೆ ಹೋಗಿದ್ದಾರೆ ರಾತ್ರಿ ಬರುತ್ತಾರೆ ಅಂತ ಹೇಳಿದ್ದಕ್ಕೆ, ಸದರಿ ಆಸಾಮಿ ಏಕಾಏಕಿ ದೂರುದಾರರ ತಾಯಿಯ ಕೈಯನ್ನು ಹಿಡಿದು ಕೊಂಡು ಬೆಡ್ ರೂಂ ನೊಳಗೆ ಕರೆದುಕೊಂಡು ಹೋಗಿ ಬಾಗಿಲನ್ನು ಹಾಕಿ ಆತನ ಬಳಿ ಇದ್ದ ಒಂದು ಚಾಕುವನ್ನು ತೆಗೆದು ಕುತ್ತಿಗೆ ಬಳಿ ಇಟ್ಟು ಸಾಯಿಸಿ ಬಿಡುತ್ತೇನೆಂತ ಹೇಳಿ, 1)ಒಂದು ಬಂಗಾರದ ಮಾಂಗಲ್ಯ ಸರ 2)ಒಂದು ಜೊತೆ ಬಂಗಾರದ ಕಿವಿ ಓಲೆ 3)ಒಂದು ಜೊತೆ ಕಿವಿ ಮಾಟಿಗಳು 4) 4 ಬಂಗಾರದ ಬಳೆಗಳು ಎಲ್ಲಾ ಒಟ್ಟು 82 ಗ್ರಾಂ ತೂಕವುಳ್ಳ ಸುಮಾರು 2,00,000/- ರೂ ಬೆಲೆ ಬಾಳುವ ಒಡವೆಗಳನ್ನು ಮತ್ತು ನೋಕಿಯಾ ಮೊಬೈಲ್ ನ್ನು ಎತ್ತಿಕೊಂಡು ಬೆಡ್ ರೂಂ ಬಾಗಿಲಿನ ಚಿಲಕ ಹಾಕಿಕೊಂಡು ಹೋಗಿರುತ್ತಾನೆ.

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ಹೆಡ್‌ ಕಾನ್ಸ್‌ಟೆಬಲ್‌ಗಳಾದ ಶ್ರೀ. ಗಜೇಂದ್ರ ಮತ್ತು ಸುರೇಶ್‌ ರವರು ದಿನಾಂಕ:05.07.2018 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಪೈಪ್ ಲೈನ್ ಹೊರವಲಯ ಪೊಟ್ಟೆಪಲ್ಲಿಗೆ ಹೋಗುವ ರಸ್ತೆ ಬಿ.ವಿ.ಎನ್. ಇನ್ಸ್ ಟ್ಯೂಟ್ ಕಡೆ ಗಸ್ತಿನಲ್ಲಿದ್ದಾಗ, ಶಾಲೆಯ ಪಕ್ಕದ ಮುಳ್ಳು ಪೊದೆಗಳ ಬಳಿ ಇದಾಯಿತ್ ಅಹಮ್ಮದ್, ಅಶ್ವಥ ಲೇಔಟ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ಮತ್ತು ಶೇಕ್ ಪರ್ದೀನ್, ೨ನೇ ಬ್ಲಾಕ್, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರು ಒಂದು ಸಿಲ್ವರ್ ಬಣ್ಣದ YAMAHA SZR ನೊಂದಣಿ ಸಂಖ್ಯೆ: KA.05-H.R5107 ದ್ವಿಚಕ್ರವಾಹನವನ್ನು ನಿಲ್ಲಿಸಿ ನಿಂತಿದ್ದವರು, ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಕೂಡಲೇ ಅವರಿಬ್ಬರನ್ನು ಹಿಡಿದು ವಿಚಾರಿಸಲಾಗಿ, ವಾಹನವನ್ನು ರಂಜಾನ್ ಹಬ್ಬದ ಉಪವಾಸದ ಪ್ರಾರಂಭದ ಮೂರನೇ ದಿನ ಪಿಚ್ಛರ್ಡ್ ರಸ್ತೆಯ ವಾಜಪೇಯಿ ಸರ್ಕಲ್ ನ ಪುಟ್ ಪಾತ್ ನಲ್ಲಿ ನಿಲ್ಲಿಸಿದ್ದವುಗಳನ್ನು ಮದ್ಯಾಹ್ನ ವೇಳೆ ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದರ ಮೇರೆಗೆ ವಾಹನ ಸಮೇತ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *