ದಿನದ ಅಪರಾಧಗಳ ಪಕ್ಷಿನೋಟ 06ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 05.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 19.02.2021 ರಂದು ಬೆಳಿಗ್ಗೆ ಸುಮಾರು 9.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಶಿವಕುಮಾರ್‍, ಅಬಿಗಿರಿಹೊಸಹಳ್ಳಿ ಬಂಗಾರಪೇಟೆ ರವರ ತಾತನಾದ ರಾಮಯ್ಯ, ೭೪ ವರ್ಷ ರವರು ಕೋಲಾರದಲ್ಲಿ ಪಾಯ ನೋಡಿಕೊಂಡು ಬರಲು ಕಾರಮಾನಹಳ್ಳಿ ಗ್ರಾಮದ ಗೋಪಾಲಪ್ಪ ರವರ ಜೊತೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಡಬ್ಲ್ಯೂ-9054 ರಲ್ಲಿ ಹೋಗಿ ಪಾಯ ನೋಡಿಕೊಂಡು ಪುನಃ ಬಂಗಾರಪೇಟೆಗೆ ಬರಲು ಸದರಿ ದ್ವಿಚಕ್ರ ವಾಹನವನ್ನು ಗೋಪಾಲಪ್ಪ ರವರು ಚಲಾಯಿಸಿಕೊಂಡು ಹಿಂಬದಿಯಲ್ಲಿ ರಾಮಯ್ಯ ರವರನ್ನು ಕುಳ್ಳರಿಸಿಕೊಂಡು ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಜೈನ್ ಸ್ಕೂಲ್ ಹತ್ತಿರ ಬರುತ್ತಿದ್ದಾಗ, ಹಿಂಬದಿಯಿಂದ ದ್ವಿಚಕ್ರ ವಾಹನ ಕೆಎ-04-ಹೆಚ್.ಎಂ-9934 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕೆತಯಿಂದ ಚಲಾಯಿಸಿಕೊಂಡು ಬಂದು ಗೋಪಾಲಪ್ಪ ಮತ್ತು ರಾಮಯ್ಯ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ, ಗೋಪಾಲಪ್ಪ & ರಾಮಯ್ಯ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಾಗ, ಗೋಪಾಲಪ್ಪ ರವರಿಗೆ ತಲೆಗೆ, ಮೊಣಕಾಲಿನ ಬಳಿ, ಎಡರೂ ಕೈಗಳಿಗೆ ತರಚಿದ ಗಾಯಗಳಾಗಿರುತ್ತದೆ. ರಾಮಯ್ಯ ರವರಿಗೆ ತಲೆ ಬಳಿ, ಎಡಕೆನ್ನಯ ಬಳಿ ರಕ್ತಗಾಯ ಹಾಗೂ ಎರಡೂ ಕೈಗಳಿಗೆ ಹಾಗೂ ಮೊಣಕಾಲಿನ ಬಳಿ ತರಚಿದ ಗಾಯಗಳಾಗಿದ್ದು, ಕೂಡಲೇ ಗಾಯಾಳು ರಾಮಯ್ಯ ರವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ರಾಮಯ್ಯ ರವರಿಗೆ ಅಪಘಾತದಿಂದ ಆಗಿದ್ದ ತೀವ್ರ ಸ್ವರೂಪ ರಕ್ತಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 04.03.2021 ರಂದು ರಾತ್ರಿ 9.00 ಗಂಟೆಗೆ ಮೃತಪಟ್ಟಿರುತ್ತಾರೆ.

          

 

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯದಿ ಶ್ರೀಮತಿ ಧರಣಿ,  ಹೆನ್ರೀಸ್ 3 ನೇ ಲೈನ್ ಉರಿಗಾಂ ರವರು ದಿನಾಂಕ:03.05.2019 ರಂದು ಉರಿಗಾಂ ಹೆನ್ರೀಸ್ 3 ನೇ ಲೈನ್ ವಾಸಿ ರವಿಚಂದರ್ ಜೊತೆಯಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಪಿರ್ಯಾದಿದಾರರ ತಂದೆತಾಯಿಯವರಿಗೆ ಆರೋಪಿ ರವಿಚಂದರ್, ಸಾರಂಗಪಾಣಿ, ಪೂಸಣಂ, ಅಜಯ್ ರವರು ವರದಕ್ಷಿಣೆಯಾಗಿ ಒಂದು ಅಪಾಚ್ಚಿ ದ್ವಿಚಕ್ರವಾಹನ, 24 ಗ್ರಾಂ ಚಿನ್ನದ ಒಡವೆಗಳು, ಶೂಟ್ ಗಾಗಿ 10,000/- ರೂ ಹಣ, ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಲು ಒತ್ತಾಯಿಸಿದ್ದು, ಅದರಂತೆ ಅವರು ವರದಕ್ಷಿಣೆಯಾಗಿ ಒಂದು ಅಪಾಚ್ಚಿ ದ್ವಿಚಕ್ರವಾಹನ, ಒಂದು ಕತ್ತಿನ ಚೈನ್, ಬ್ರೇಸ್ ಲೈಟ್, ಒಂದು ಚಿನ್ನದ ಉಂಗುರ ಒಟ್ಟು 24 ಗ್ರಾಂ ತೂಕವುಳ್ಳ ಚಿನ್ನದ ಒಡವೆಗಳನ್ನು ಮತ್ತು ಶೂಟ್ ಗಾಗಿ 10,000/- ರೂ ಹಣ, ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕೊಟ್ಟಿರುತ್ತಾರೆ. ಮದುವೆಯ ನಂತರ ಮೇಲ್ಕಂಡ ಎಲ್ಲರೂ ಸೇರಿ ಬೆಂಗಳೂರಿನಲ್ಲಿ ಮನೆಯನ್ನು ಲೀಸ್ ಗೆ ಹಾಕಿಕೊಡಲು ವರದಕ್ಷಿಣೆಯಾಗಿ 5,00,000/- (ಐದು ಲಕ್ಷ) ರೂ ಗಳನ್ನು ತರಲು ಪ್ರತಿದಿನ ಕಿರುಕುಳ ನೀಡಿ ಪಿರ್ಯಾದಿದಾರಳನ್ನು ಹೊಡೆದು ತಾಳಿಯನ್ನು ಕಿತ್ತುಕೊಂಡು ಕೆಟ್ಟಮಾತುಗಳಿಂದ ಬೈದು ಕಿರುಕುಳ ನೀಡಿ ಸದರಿ ಬಾಡಿಗೆ ಮನೆಯಲ್ಲಿಯೇ ಬಿಟ್ಟು ಹೊರಟು ಹೋಗಿದ್ದು, ಆನಂತರ ಫಿರ್ಯಾದಿಯು ತನ್ನನ್ನು ಕರೆದುಕೊಂಡು ಹೋಗುತ್ತಾರೆಂದು ಕಾದಿದ್ದರೂ ಸಹಾ ಬಾರದ ಕಾರಣ ತಾನು 8 ತಿಂಗಳ ಹಿಂದೆ ತನ್ನ ತವರು ಮನೆಗೆ ಬಂದಿದ್ದು, ತನ್ನ ಗಂಡ ಅಥವಾ ಅವರ ಮನೆಕಡೆಯವರು ಬಂದು ತನ್ನನ್ನು ಕರೆದುಕೊಂಡು ಹೋಗದ ಕಾರಣ ತನಗೆ ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದವರ ವಿರುದ್ದ ತಡವಾಗಿ ಬಂದು ದೂರು ನೀಡಿರುತ್ತಾರೆ.

 

– ಸಾಧಾರಣ ಕಳ್ಳತನ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ  ಪಿರ್ಯಾದಿದಾರರು ರವಿಂದ್ರ ದೊಡ್ಡಮಣಿ, ಕಾಮಸಮುದ್ರಂ ರವರು ದಿನಾಂಕ 04.03.2021 ರಂದು ರಾತ್ರಿ ಸುಮಾರು 8.00 ಗಂಟೆಯ ಸಮಯದಲ್ಲಿ ಸುಮಾರು 55.000/- ರೂ ಬೆಲೆ ಬಾಳುವ KA-08-W-7092, HERO SPLENDOR+  ದ್ವಿ ಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿ ದಿನಾಂಕ 05.03.2021 ರಂದು ಬೆಳಿಗ್ಗೆ 7.00 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗೆ ಬಂದು   ನೋಡಲಾಗಿ ಸದರಿ ದ್ವಿ ಚಕ್ರ ವಾಹನ ನಾಪತ್ತೆಯಾಗಿದ್ದು ಅನುಮಾನವಿದ್ದ ಕಡೆ ಹೋಗಿ ನೋಡಲಾಗಿದ್ದು ಆದರೂ ಸಹ  ದ್ವಿ ಚಕ್ರ ವಾಹನ ಕಳುವಾಗಿರುವ ಬಗ್ಗೆ ಅನುಮಾನವಿದ್ದು ಸದರಿ ಮೋಟಾರ್ ಸೈಕಲನ್ನು ಪತ್ತೆ  ಮಾಡಿಕೊಡಬೇಕೆಂದು ನೀಡಿರುವ ದೂರು ನೀಡಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಮೈತಲಿ, ಬೆನ್ನವಾರ ಗ್ರಾಮ ರವರ ಗಂಡ ಸುಧಾಕರ್, ೪೦ ವರ್ಷ ರವರು ದಿನಾಂಕ 02.03.2021 ರಂದು ಮಧ್ಯಾಹ್ನ 12.30 ಗಂಟೆಯಲ್ಲಿ ಬೆಂಗಳೂರಿನ ದೇವನಹಳ್ಳಿಗೆ ಗಾರೆ ಕೆಲಸಕ್ಕೆ ಹೋಗಿ ಬಟ್ಟೆಗಳನ್ನು ತೆಗೆದುಕೊಂಡು ಬರುತ್ತೇನೆಂದು ಪಿರ್ಯಾದಿದಾರರಿಗೆ ಹೇಳಿ ಹೋದವರು, ನಂತರ ಮಧ್ಯಾಹ್ನ  1.30 ಗಂಟೆಗೆ ಪಿರ್ಯಾದಿದಾರರಿಗೆ ಪೋನ್ ಮಾಡಿ ಕೃಷ್ಣಗಿರಿಯಿಂದ ಬೆಂಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದು. ನಂತರ  ಪಿರ್ಯಾದಿದಾರರು  ಅದೇ ದಿನ ಸಂಜೆ 7.00  ಗಂಟೆಗೆ  ತನ್ನ ಗಂಡ ಸುಧಾಕರ್ ರವರಿಗೆ ಪೋನ್  ಮಾಡಿದರೆ  ಅವರ ಪೋನ್ ಸ್ವಿಚ್ಆಪ್ ಆಗಿದ್ದು, ಇದುವರೆಗೂ ಮನೆಗೆ  ಬರದೆ, ಕೆಲಸಕ್ಕೆ ಹೋಗದೆ  ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *