ದಿನದ ಅಪರಾಧಗಳ ಪಕ್ಷಿನೋಟ 06ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 05.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ಕಣ್ಣಪ್ಪ, ಭುವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 05.10.2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಬಂಗಾರಪೇಟೆ ಎಸ್.ಬಿ.ಐ ಬ್ಯಾಂಕಿನಲ್ಲಿ 1,75,000-00 ರೂಗಳನ್ನು ಡ್ರಾ ಮಾಡಿಕೊಂಡು, ದ್ವಿಚಕ್ರ ವಾಹನದ ಟ್ಯಾಂಕ್ ಕವರ್ ನಲ್ಲಿ ಹಣವನ್ನಿಟ್ಟುಕೊಂಡು, ಬಂಗಾರಪೇಟೆಯ ಕಾರೋನೇಷನ್ ರಸ್ತೆ ಹಾರ್ಡ್‌ವೇರ್ ಅಂಗಡಿ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿ, ಅಂಗಡಿಯ ಮುಂದೆ ನಿಂತು ಅಂಗಡಿಯಲ್ಲಿ ವ್ಯಾಪಾರಮಾಡುತಿದ್ದಾಗ, ಯಾರೋ ಇಬ್ಬರು ಕಳ್ಳರು ದ್ವಿಚಕ್ರ ವಾಹನದಲ್ಲಿ ಬಂದು, ಆ ಪೈಕಿ ಒಬ್ಬನು ವಾಹನದಿಂದ ಇಳಿದು ದೂರುದಾರರ ವಾಹನದಲ್ಲಿರುವ ಹಣದ ಚೀಲವನ್ನು ತೆಗೆದುಕೊಂಡು ಹೊರಟುಹೋಗಿರುತ್ತಾರೆ.

 

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸಾವಿತ್ರಮ್ಮ, ದಳವಾಯಿಹೊಸಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಅನಿತಾ, 12 ವರ್ಷ ರವರು ದಿನಾಂಕ 04-10-2020 ರಂದು ಮದ್ಯಾಹ್ನ ದೂರುದಾರರ ಜಮೀನಿನಲ್ಲಿರುವ ಕೃಷಿ ಹೊಂಡದ ಬಳಿ ಕೈ ಕಾಲು ತೊಳೆಯಲು ಹೋದಾಗ  ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡದ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *