ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 05.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಇತರೆ : 01
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಬಲಾದ್ಗ್ರಹಣ (extortion) ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಿಜಿ ಕೊಂ ಟಿ. ಬಾಬು, ದಾಸರಹೊಸಹಳ್ಳಿ, ಕೆ.ಜಿ.ಎಫ್ ರವರು ದಿನಾಂಕ: 30-05-2020 ರಂದು ರಾತ್ರಿ 10-45 ಗಂಟೆಯಲ್ಲಿ ಮನೆಯ ವರಾಂಡದ ಬಾಲ್ಕನಿಯಿಂದ ಬಗ್ಗಿ ಗೇಟನ್ನು ಕೆಳಗಿನ ಮನೆಯವರು ಹಾಕಿರುತ್ತಾರೆಯೇ, ಇಲ್ಲವೆ ಎಂದು ನೋಡಿ, ತಿರುಗಿ ಮನೆಯ ಒಳಗೆ ಹೋದಾಗ, ಹಿಂಬದಿಯಿಂದ ಯಾರೋ ಒಬ್ಬ ಆಸಾಮಿ ದೂರುದಾರರ ಕುತ್ತಿಯನ್ನು ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡು ಕೊರಳಿನಲ್ಲಿದ್ದ ಮಾಂಗಲ್ಯದ ಚೈನನ್ನು ಎಳೆದಿದ್ದು, ಚೈನು ಕಿತ್ತುಹೋಗಿ ನೆಲದ ಮೇಲೆ ಬಿದ್ದಾಗ, ಚೈನನ್ನು ಎತ್ತಿಕೊಂಡು ಪರಾರಿಯಾಗಿರುತ್ತಾನೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಂಕರಪ್ಪ, ಹುಣಸನಹಳ್ಳಿ, ಬಂಗಾರಪೇಟೆ ವಾಸಿ ರವರ ಮಗಳಾದ ದಿವ್ಯಶ್ರೀ. ಎಸ್, 21 ವರ್ಷ ರವರು ದಿನಾಂಕ 03.06.2020 ರಂದು ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆ ಮಧ್ಯೆ ಮನೆಯಲ್ಲಿರುವ 28,000-00 ರೂ ಹಾಗೂ ವ್ಯಾಸಂಗದ ದಾಖಲಾತಿಗಳು, ಆಧಾರ್ ಕಾರ್ಡ್ ನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಹೋದವಳು ಮತ್ತೆ ಮನಗೆ ಬಾರದೇ ಕಾಣೆಯಾಗಿರುತ್ತಾಳೆ.