ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 05.05.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕನ್ನಕಳುವು : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜು ಬಿನ್ ರಾಮಲಿಂಗ, ಸಲಾಮ್ ಗುಡಿಸಲು ಏರಿಯಾ, ಬಂಗಾರಪೇಟೆ ರವರು ಉರಿಗಾಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಇರುವ ಎಸ್.ಎಲ್.ವಿ ಮೆಡಿಕಲ್ ಸ್ಟೋರ್ ನಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ದಿನಾಂಕ:04.05.2020 ರಂದು ರಾತ್ರಿ 9-00 ಗಂಟೆಯಲ್ಲಿ ಅಂಗಡಿಗೆ ಬೀಗ ಹಾಕಿಕೊಂಡು ಹೋಗಿ, ದಿನಾಂಕ:05.05.2020 ರಂದು ಬೆಳಿಗ್ಗೆ 10-00 ಗಂಟೆಗೆ ಮೆಡಿಕಲ್ ಸ್ಟೋರ್ ಗೆ ಬಂದು ನೋಡಲಾಗಿ, ಯಾರೋ ಕಳ್ಳರು ಅಂಗಡಿಯ ಡೋರ್ ಲಾಕ್ ಮುರಿದು ಒಳಗೆ ಪ್ರವೇಶಿಸಿ 01) 1.5 ಕೆ.ಜಿ ತೂಕದ 03 ಹಾರ್ಲಿಕ್ಸ್ ಪಾಕೆಟ್ ಗಳು 2) 300 ಗ್ರಾಂ ತೂಕದ ಸೆರೆಲಾಕ್ ನ 04 ಪಾಕೆಟ್ ಗಳು 3) 0.5 ಕೆ.ಜಿ ತೂಕದ ಬೂಸ್ಟ್ ನ 03 ಪಾಕೆಟ್ ಗಳು 4) 400 ಗ್ರಾಂ ತೂಕದ ಲ್ಯಾಕ್ಟೋಜನ್ 04 ಪಾಕೆಟ್ ಗಳು 5) 0.5 ಕೆ.ಜಿ ತೂಕದ ವುಮೆನ್ ಹಾರ್ಲಿಕ್ಸ್ 02 ಪಾಕೆಟ್ ಗಳು ಒಟ್ಟು ಬೆಲೆ 4,431/- ರೂ ಹಾಗೂ 15,000/- ರೂ ನಗದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
– ಹಲ್ಲೆ : 02
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.
ದೂರುದಾರರಾದ ಶ್ರೀ. ವಿಜಯ್ಕುಮಾರ್ ಬಿನ್ ಶ್ರೀಕಾಂತ್, ಸಿ.ಎ. ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ: 04.05.2020 ರಂದು ಮಧ್ಯಾಹ್ನ 3.00 ಗಂಟೆಗೆ ಮನೆಯ ಮುಂಭಾಗ ಕುಳಿತುಕೊಂಡಿದ್ದಾಗ, ಶಕ್ತವೇಲು, ಸುನೀಲ್ ಮತ್ತು ರವೀಂದ್ರನಾಥ್ ರವರು ಅಲ್ಲಿಗೆ ಬಂದು ದೂರುದಾರರನ್ನು ತಳ್ಳಿದ್ದು, ದೂರುದಾರರು ಕೇಳಿದ್ದಕ್ಕೆ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಬ್ಯಾಟಿನಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.
ದೂರುದಾರರದ ಶ್ರೀ. ಸತೀಶ್ ಕುಮಾರ್ ಬಿನ್ ಸೆಲ್ವರಾಜ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ 04.05.2020 ರಂದು ಮದ್ಯಾಹ್ನ 3.45 ಗಂಟೆಯಲ್ಲಿ ಪ್ರಶಾಂತ್ ಮನೆಯ ಬಳಿ ಹೋದಾಗ, ಅರವಿಂದ್ ಮತ್ತು ವಿನೋದ್ ರವರು ದೂರುದಾರರಿಗೆ “ಏನು ನಿನ್ನದು ಜಾಸ್ತಿ ಆಯಿತು” ಎಂದು ವಿನಾ ಕಾರಣ ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು ಮಚ್ಚು, ಕಬ್ಬಿಣದ ರಾಡ್ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋವಿಂದಪ್ಪ ಬಿನ್ ಮುನಿವೆಂಕಟಪ್ಪ, ಬೋಡಗುರ್ಕಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಶೋಭಾ, 35 ವರ್ಷ ರವರು ದಿನಾಂಕ 25.04.2020 ರಂದು ಮನೆಯಿಂದ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.