ದಿನದ ಅಪರಾಧಗಳ ಪಕ್ಷಿನೋಟ 06ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:05.03.2020 ರಂದು   ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಲಿಂಗಮೂರ್ತಿ ಬಿನ್ ಮುನಿವೆಂಕಟಪ್ಪ, ಮಾರಿಕುಪ್ಪಂ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಆಣ್ಣನ ಮಗನಾದ ಸುರೇಶ್ ಬಿನ್ ಲೇಟ್ ಶ್ರೀನಿವಾಸಮೂರ್ತಿ, 21 ವರ್ಷ ರವರು ದಿನಾಂಕ:03.03.2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಬಜಾಜ್ ಸಿಟಿ-100 ದ್ವಿಚಕ್ರವಾಹನ ಸಂಖ್ಯೆ ಕೆಎ-08-ಡಬ್ಲೂ-4384 ರಲ್ಲಿ ಕೆ.ಜಿ.ಎಪ್. ಕಡೆಯಿಂದ ಕ್ಯಾಸಂಬಳ್ಳಿಯ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ, ಕ್ಯಾಸಂಬಳ್ಳಿ ಕಡೆಯಿಂದ ಟಿವಿಎಸ್ ಸೂಪರ್ ಎಕ್ಸೆಲ್ ಹೆವಿಡ್ಯೂಟಿ ದ್ವಿಚಕ್ರವಾಹನ ಸಂಖ್ಯೆ ಕೆಎ 08-ಎಲ್-5187 ರ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರೇಶನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಕ್ತಗಾಯಗಾಳಾಗಿರುತ್ತದೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ವರಲಕ್ಷ್ಮಮ್ಮ ಕೊಂ ಶ್ರೀರಾಮರೆಡ್ಡಿ, ವಿವೇಕ್‌ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್  ರವರು  ದಿನಾಂಕ: 04.03.2020 ರಂದು ಸಂಜೆ 8-30 ಗಂಟೆಯಲ್ಲಿ  ಮಗಳಾದ ಕೆ.ಎಸ್. ಕಾವ್ಯ, 24 ವರ್ಷ ರವರೊಂದಿಗೆ ಮದ್ದಯ್ಯ ಚೌಲ್ಟ್ರಿ ಬಳಿ ಹೋಗುತ್ತಿದ್ದಾಗ, ಕೆ.ಎಸ್. ಕಾವ್ಯ ರವರು ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *