ದಿನದ ಅಪರಾಧಗಳ ಪಕ್ಷಿನೋಟ 06ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:05.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ  ಪ್ರರಕಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪಲ್ಲವಿ ಕೊಂ ಅನಿಲ್‌ ಕುಮಾರ್‌, ಕಾಲುವಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಅನಿಲ್ ಕುಮಾರ್ ರವರು ದಿನಾಂಕ: 02.01.2020 ರಂದು  ಸಂಜೆ 4.50 ಗಂಟೆಗೆ ಕೆಜಿಎಫ್ – ಕುಪ್ಪಂ ಮುಖ್ಯ ರಸ್ತೆ ಘಟ್ಟಮಾದಮಂಗಲ ಗ್ರಾಮದ ಬಳಿ ಸಂಜೆ  ಗಂಟೆಯಲ್ಲಿ ಹೋಗುತ್ತಿದ್ದಾಗ, ಹಿಂಬದಿಯಿಂದ ಬರುತ್ತಿದ್ದ ಯಾವುದೋ ಬುಲೋರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ದೂರುದಾರರ ಗಂಡ ನಿಲ್ ಕುಮಾರ್ ರವರು ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅನಿಲ್ ಕುಮಾರ್ ರವರಿಗೆ ಬಲಕಾಲಿನ ಮೂಲೆ ಮುರಿದು ರಕ್ತಗಾಯವಾಗಿದ್ದು, ಬುಲೋರೋ ವಾಹನದ ಚಾಲಕ ವಾಹನವನ್ನು ನಿಲ್ಲಸದೆ ಪರಾರಿಯಾಗಿರುತ್ತಾನೆ.

– ದೊಂಬಿ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ನರೇಶ್‌ ಕುಮಾರ್‌ ಬಿನ್ ಸೆಲ್ವ ಕುಮಾರ್‌, ಇ.ಟಿ ಬ್ಲಾಕ್, ಉರಿಗಾಂ ಅಂಚೆ, ಕೆ.ಜಿ.ಎಫ್ ರವರ ತಂಗಿ ಸರಣ್ಯದೇವಿ ರವರು ಈಗ್ಗೆ 5 ವರ್ಷಗಳ ಹಿಂದೆ ಕೃಷ್ಣಗಿರಿ ಲೈನ್ ವಾಸಿ ಅಂಬರೀಶ್ ರಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ಸಂಸಾರದ ವಿಚಾರದಲ್ಲಿ ಮನಸ್ಥಾಪಗಳಾಗಿ ಹೆರಿಗೆಗೆಂದು ತವರು ಮನೆಗೆ ಬಂದವಳು ಮತ್ತೆ ವಾಪಸ್ಸು ಹೋಗದೇ ತವರು ಮನೆಯಲ್ಲಿಯೇ ಇರುತ್ತಾಳೆ. ದಿನಾಂಕ: 04.02.2020 ರಂದು ರಾತ್ರಿ ದೂರುದಾರರ ಅಣ್ಣ ಸೆಂದಿಲ್ ರವರಿಗೆ ಅಮರೇಶ್‌ ರವರು ಪೋನ್ ಮಾಡಿ ಬೈದಿರುವ ವಿಚಾರ ತಿಳಿದು ಕೇಳಲು ದೂರುದಾರರು ಮತ್ತು ಸೆಂದಿಲ್ ರವರು ರಾತ್ರಿ 10.30 ಗಂಟೆಗೆ ಅಮರೇಶ್‌ ರವರ ಮನೆಯ ಬಳಿ ಹೋಗಿ ಕೇಳುತ್ತಿದ್ದಾಗ, ಶೀಲಾ ರವರು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದಿದ್ದು, ಅಮರೇಶ್‌, ಶ್ರೀಧರ್‌, ಶೀಲಾ ಮತ್ತು ಇತರೆ ಇಬ್ಬರು ಅಕ್ರಮಕೂಟ ಕಟ್ಟಿಕೊಂಡು ದೂರುದಾರರೊಂದಿಗೆ ಜಗಳ ಮಾಡಿ  ಕ್ರಿಕೇಟ್ ಬ್ಯಾಟ್‌, ಹಾಕಿ ಸ್ಟಿಕ್‌ ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದು  ಗಾಯಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ಅಮರೇಶ್‌ ಬಿನ್ ಸುಗುಮಾರ್‌, ಕೃಷ್ಣಗಿರಿ ಲೈನ್‌, ಮಾರಿಕುಪ್ಪಂ, ಕೆ.ಜಿ.ಎಫ್ ರವರು ಈಗ್ಗೆ 5 ವರ್ಷಗಳ ಹಿಂದೆ ಸರಣ್ಯದೇವಿ ಎಂಭಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ಸಂಸಾರದ ವಿಚಾರಗಳಲ್ಲಿ ಮನಸ್ಥಾಪಗಳಾಗಿ ಸರಣ್ಯದೇವಿ ರವರು ತವರು ಮನೆಯಲ್ಲಿದ್ದು, ಬೇರೆಯವರೊಂದಿಗೆ ಸಲಿಗೆಯಿಂದ ಮಾತನಾಡಿದ ವಿಚಾರದ ಬಗ್ಗೆ ಸರಣ್ಯದೇವಿ ರವರನ್ನು ಕೇಳಿದ್ದಕ್ಕೆ ಅವರ ಕುಟುಂಬದ ಸದಸ್ಯರಾದ ನರೇಶ್‌, ಸೆಂದಿಲ್‌ ಮತ್ತಿ ಇತರೆ 4 ಜನರು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ದಿನಾಂಕ: 04.02.2020 ರಂದು ರಾತ್ರಿ 10:30 ಗಂಟೆಗೆ ದೂರುದಾರರ ಮನೆಯ ಬಳಿ ಬಂದು ದೂರುದಾರರ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು, ದೂರುದಾರರು ಕೇಳಿದ್ದಕ್ಕೆ  ಕೆಟ್ಟ ಮಾತುಗಳಿಂದ ಬೈದು, ದೊಣ್ಣೆಗಳಿಂದ  ಹೊಡೆದು ರಕ್ತ ಗಾಯಪಡಿಸಿದ್ದು,  ಜಗಳ ಬಿಡಿಸಲು ಬಂದ ದೂರುದಾರರ ಅಣ್ಣನಾದ ಶ್ರೀಧರ್ ರವರನ್ನು  ಕತ್ತಿ ಮತ್ತು ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

 

Leave a Reply

Your email address will not be published. Required fields are marked *