ದಿನದ ಅಪರಾಧಗಳ ಪಕ್ಷಿನೋಟ 06ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍05.01.2020 ರಂದು ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

 

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನೀಲ ಕೊಂ ನ್ಯಾತಪ್ಪರೆಡ್ಡಿ, ಒಂಬತ್ತುಗುಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 12.03.2010 ರಂದು ನ್ಯಾತಪ್ಪರೆಡ್ಡಿಯೊಂದಿಗೆ ವಿವಾಹವಾಗಿದ್ದು, ದೂರುದಾರರಿಗೆ ಮದುವೆ ಸಮಯದಲ್ಲಿ ತವರು ಮನೆಯಿಂದ ಕೊಟ್ಟಿದ್ದ ಬಂಗಾರದ ಒಡವೆಗಳನ್ನು ಗಂಡ ನ್ಯಾತಪ್ಪರೆಡ್ಡಿ ರವರು ಮಾರಾಟ ಮಾಡಿಕೊಂಡು, ಪ್ರತೀ ದಿನ ಕುಡಿದು ಬಂದು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಹೊಡೆದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು,  ದಿನಾಂಕ 21.12.2019 ರಂದು ರಾತ್ರಿ 08.00 ಗಂಟೆಯಲ್ಲಿ ಹೊಡೆದು ನೀನು ನನಗೆ ಬೇಡ ವಿಚ್ಛೇದನ ನೀಡಿ ಹೊರಟು ಹೋಗು ಎಂದು ಹೇಳಿ ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *