ದಿನದ ಅಪರಾಧಗಳ ಪಕ್ಷಿನೋಟ 05 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 04.07.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸ ನಿರ್ವಹಣೆ ಮಾಡಲು ಅಡ್ಡಿ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಸುರೇಂದ್ರ ಅಶೋಕ್ ಪನಸಂಬಲ್,  ಬಿ.ಜಿ.ಎಂ.ಎಲ್. ನ ಸಿ.ಎಸ್.ಒ ಅಧಿಕಾರಿಯಾಗಿದ್ದು,  ದಿನಾಂಕ 04.07.2020 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ಕ್ರಿಷ್ಣಗಿರಿ ಲೈನಿನಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಅಸಾಮಿಗಳು ಬಿ.ಜಿ.ಎಂ.ಎಲ್. ಗೆ ಸೇರಿದ ಸರ್ವೇ ನಂ 2 ರಲ್ಲಿ 55*20 ವಿಸ್ತೀರ್ಣದ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಪಿರ್ಯಾದಿದಾರರು ಬಿ.ಜಿ.ಎಂ.ಎಲ್. ಗೆ ಸೇರಿದ ಸ್ಥಳದಲ್ಲಿ ಏಕೆ ಕಟ್ಟಡ ನಿರ್ಮಾಣ ಮಾಡುತ್ತಿದ್ದೀರ ? ಎಂದು ಕೇಳಿ ಸ್ಥಳದ ಚಿತ್ರೀಕರಣ ಮಾಡುತ್ತಿದ್ದಾಗ 3 ಜನ ಅಸಾಮಿಗಳು ಏಕೋದ್ದೇಶದಿಂದ ಪಿರ್ಯಾದಿಯೊಂದಿಗೆ ಗಲಾಟೆ ಮಾಡಿ ಹೊಡೆಯಲು ಪ್ರಯತ್ನಿಸಿ , ಹಿಂದಕ್ಕೆ ತಳ್ಳಿ, ಕೆಟ್ಟ ಮಾತುಗಳಿಂದ ಬೈದು ,ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 03

ಚಾಂಪಿಯನ್‌ ರೀಫ್ಸ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.  ಪಿರ್ಯಾದಿದಾರರಾದ ಶ್ರೀ ವೆಂಕಟೇಶ್, ಬ್ಯಾಂಡ್ ಲೇನ್, ಚಾಂಪಿಯನ್‌ ರೀಪ್ಸ್  ರವರ ತಮ್ಮ ಶಾಂತಕುಮಾರ್, ೩೮ ವರ್ಷ ರವರಿಗೆ ಲಿವರ್ ಮತ್ತು ಊಸಿರಾಟದ ತೊಂದರೆಯಿಂದ ಆರೋಗ್ಯ ಕೆಟ್ಟಿದ್ದರಿಂದ ಕುಡಿತದ ಚಟ ಇದ್ದು,  ದಿನಾಂಕ 03-07-2020 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಶಾಂತ್ ಕುಮಾರ್ ಹೊಟ್ಟೆ ನೋವು ಬಂದಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ವಿಷವನ್ನು ಸೇವಿಸಿ ವಾಂತಿ ಮಾಡಿಕೊಳ್ಳುತ್ತಿದ್ದರಿಂದ ಸದರಿಯವರಿಗೆ ಕೆಜಿಎಫ್ ಮತ್ತು ಕೋಲಾರದ ಆಸ್ವತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಕೆಜಿಎಫ್ ಸಂಬ್ರಮ್ ಆಸ್ವತ್ರೆಗೆ ಕರೆತಂದಿದ್ದು ವೈದ್ಯರು ಪರೀಸ್ದಿತಿ ಗಂಬೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೋಗಲು ತಿಳಿಸಿದ್ದ ಮೇರೆಗೆ ಕೋಲಾರದ ಆಸ್ವತ್ರೆಗೆ ಹೋಗಲೆಂದು ಅಂಬ್ಯೂಲೆನ್ಸ್ ನಲ್ಲಿ ದಾಸರಹೊಸಹಳ್ಳಿ ದಾಟಿ ಮುಂದೆ ಹೋಗುತ್ತಿದ್ದಾಗ ಅಂಬ್ಯೂಲೆನ್ಸ್ ನಲ್ಲಿ ಇದ್ದ ವೈದ್ಯಕೀಯ ಸಿಬ್ಬಂದಿ ಶಾಂತಕುಮಾರ್ ರವರನ್ನು ಗಮಮಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿದಾರರಾದ ಶ್ರೀ.ಪ್ರಭಾಕರನ್.ಪಿ, 7ನೇ ಕ್ರಾಸ್‌, ನೆಹರು ಗ್ರೌಂಡ್‌, ರಾಬರ್ಟ್‌‌ಸನ್‌ಪೇಟೆ ರವರ ಮೊಮ್ಮಗಳಾದ ಕೀರ್ತನಾ.ಬಿ. ೫ ವರ್ಷ, ರವರಿಗೆ ಡೆಂಗ್ಯೂ ಜ್ವರ ಬಂದು ಎಡಗಾಲು ಕುಂಠಿತವಾಗಿ ಸರಿಯಾದ ಬೆಳವಣಿಗೆಯಾಗದೆ ಸರಿಯಾಗಿ ನಡೆಯಲು ಸಾದ್ಯವಾಗುತ್ತಿರಲಿಲ್ಲ, ಈಗಿರುವಾಗ ದಿನಾಂಕ:-23.06.2020 ರಂದು ಬೆಳಿಗ್ಗೆ 9:00 ಗಂಟೆಯ ಸಮಯದಲ್ಲಿ ಪಿರ್ಯಾದಿ ಮನೆಯಲ್ಲಿದ್ದಾಗ ಮೊಮ್ಮಗಳಾದ ಕೀರ್ತನಾ ರವರಿಗೆ ತನ್ನ ಸೊಸೆಯಾದ ಯಮುನಾ ರವರು ಬಿಸಿ ನೀರಿನಿಂದ ಸ್ನಾನ ಮಾಡಿಸಲು ಬಕೆಟ್ ನಲ್ಲಿ ಬಿಸಿನೀರು ಇಟ್ಟು, ತನ್ನ ಮೊಮ್ಮಗಳನ್ನು ಬಕೆಟ್ ಪಕ್ಕದಲ್ಲಿ ನಿಲ್ಲಿಸಿ ಬಟ್ಟೆತರಲು ಬೆಡ್ ರೂಂ ಗೆ ಹೋಗಿ ಬರುವಷ್ಠರಲ್ಲಿ ತನ್ನ ಮೊಮ್ಮಗಳಾದ ಕೀರ್ತನಾ ರವರು ಹೇಗೋ ಆಕಸ್ಮಿಕವಾಗಿ ಬಿಸಿ ನೀರಿನ ಬಕೆಟ್ ನಲ್ಲಿ ಬಿದ್ದಿದ್ದು, ತನ್ನ ಸೊಸೆ ನೋಡಿ ಆಕೆಯನ್ನು ಮೇಲೆತ್ತಿದ್ದಾದ ತನ್ನ ಮೊಮ್ಮಗಳಿಗೆ ಹೊಟ್ಟೆಯ ಭಾಗದಿಂದ ತೊಡೆಗಳ ವರೆಗೂ ಸುಟ್ಟು ಚರ್ಮಕಿತ್ತು ಬಂದಿತ್ತು, ಕೂಡಲೇ ಪಿರ್ಯಾದಿದಾರರು ಮತ್ತು ತನ್ನ ಸೊಸೆ ಯೊಂದಿಗೆ ಮೊಮ್ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಗೆ ಕರೆದುಕೊಂಡು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದು,  ದಿನಾಂಕ:-.04.07.2020 ರಂದು ಸಂಜೆ 4:10 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಮೊಮ್ಮಗಳಾದ ಕೀರ್ತನಾ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.

ರಾಬರ್ಟ್‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-04.07.2020 ರಂದು ದೂರುದಾರಾದ ಶ್ರೀ.ಅಪ್ಜಲ್  ಬಿನ್‌ ಮೊಹ್ಮದ್‌ ಫಿಷ್‌ ಲೈನ್‌ ಉರಿಗಾಂ ಪೇಟೆ ರವರು ನೀಡದ ದೂರಿನಲ್ಲಿ ದಿನಾಂಕ.04.07.2020 ರಂದು ಕೆಲಸದ ಮೇರೆಗೆ ರಾಬರ್ಟಸನ್ ಪೇಟೆ ಬಸ್ ನಿಲ್ದಾಣಕ್ಕೆ ಬರಲು  ಮಿನಿ ಇಬ್ರಾಹಿಂ ರಸ್ತೆಯ ಸಮದ್ ಮಿಲ್ ಮುಂದೆ ಬರುತ್ತಿದ್ದ ಸಮಯದಲ್ಲಿ ಸಮದ್ ಮಿಲ್ ನ ಕಲ್ಲು ಕಾಂಪೌಂಡ್ ಪಕ್ಕದ ಕೊಳಚೆ ನೀರಿನ ಚರಂಡಿಯಿಂದ ಮನುಷ್ಯನ ದೇಹವು ಕೊಳೆತ ವಾಸನೆ ಬಂದಿದ್ದು, ದೂರುದಾರರು  ದ್ವಿಚಕ್ರ ವಾಹನ ನಿಲ್ಲಿಸಿ ನೋಡಲಾಗಿ ಗಂಡಸಿನ ವ್ಯಕ್ತಿಯ ಶವವಾಗಿದ್ದು, ಕೊಳೆತು ದುರ್ವಾಸನೆ ಬರುತ್ತಿದ್ದು, ಸುಮಾರು 45 ರಿಂದ 50 ವರ್ಷ ವಯಸ್ಸುಳ್ಳವನಾಗಿದ್ದು, ಮುಖದ ಮೇಲೆ ಕಸವು ತುಂಬಿಕೊಂಡು ಎದೆಯಿಂದ ಕಾಲುಗಳವರೆಗೆ ಕಾಣಿಸುತ್ತಿದ್ದು, ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಗೆ ವಿಷಯವನ್ನು ತಿಳಿಸಿದ್ದು ಕಾನೂನು ಕ್ರಮ ಜರುಗಿಸಿರುತ್ತಾರೆ. ಸದರಿ ಶವದ ಬಗ್ಗೆ ಯಾರೂ ವಾರಸ್ಸುದಾರರು ಇಲ್ಲದೆ ಇರುವ ಕಾರಣ ಶವವನ್ನು ರಾಬರ್ಟ್‌‌ಸನ್‌‌ಪೇಟೆ ಜನರಲ್‌ ಅಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

Leave a Reply

Your email address will not be published. Required fields are marked *