ದಿನದ ಅಪರಾಧಗಳ ಪಕ್ಷಿನೋಟ 05 ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍04.01.2020 ರಂದು   ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 04.01.2020 ರಂದು ದೂರುದಾರರಾದ  ಶ್ರೀ .ಶಿವಪ್ಪ ಬಿನ್‌ ವೆಂಕಟಪ್ಪ ಚೊಕ್ಕರಬಂಡೆ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 04-01-2020 ರಂದು ಮದ್ಯಾಹ್ನ ಸುಮಾರು 03.00 ಗಂಟೆ ಸಮಯದಲ್ಲಿ ದೂರುದಾರರು ಮನೆಯಲ್ಲಿದ್ದಾಗ, ಚೊಕ್ಕರ ಬಂಡೆ ಗ್ರಾಮದ ವಾಸಿ ಬಾಬು ರವರು ದೂರುದಾರರ ಮೊಬೈಲ್ ಗೆ ಕರೆ ಮಾಡಿ ಚೊಕ್ಕರ ಬಂಡೆಯ ಹೊಸ ಕರೆಯಲ್ಲಿ ಯಾರೋ ಮನುಷ್ಯನ ಕಾಲುಗಳು ತೇಲುವ ಸ್ಥಿತಿಯಲ್ಲಿ ಕಾಣಿಸುತ್ತಿರುವುದಾಗಿ ತಿಳಿಸಿದ್ದು, ಕೂಡಲೇ ದೂರುದಾರರು & ಚೊಕ್ಕರಬಂಡೆ ಗ್ರಾಮದ ವಾಸಿಗಳಾದ ಅಬ್ಬ ರೆಡ್ಡಿ, ರಾಮ ರೆಡ್ಡಿ ಹಾಗೂ ಇತರರು ಚೊಕ್ಕರಬಂಡೆಯ ಹೊಸ ಕರೆಯ ಬಳಿ ಮದ್ಯಾಹ್ನ ಸುಮಾರು 03.30 ಗಂಟೆಗೆ ಹೋಗಿ ನೋಡಲಾಗಿ ಕಾಲುಗಳು ನೀರಿನಲ್ಲಿ ತೇಳುತ್ತಿದ್ದು, ಕೂಡಲೇ ಅದೇ ಗ್ರಾಮದ ಬಾಬು ರವರನ್ನು ಕೆರೆಯಲ್ಲಿ ಇಳಿಸಿ, ಮೃತದೇಹವನ್ನು ದಡಕ್ಕೆ ತೆಗೆಯಿಸಿ ನೋಡಲಾಗಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಆಕೆಯ ಸೊಂಟಕ್ಕೆ ಕಬ್ಬಿಣದ ಬೈಡಿಂಗ್ ಕಂಬಿಯಿಂದ ಒಂದು ದೊಡ್ಡ ಕಲ್ಲನ್ನು ಕಟ್ಟಿ ಯಾವುದೋ ಆಯುಧದಿಂದ ಮುಖದ ಮೇಲೆ ಗಾಯಪಡಿಸಿ ಗುರುತು ಸಿಗದ ಹಾಗೇ ಸುಮಾರು 03-04 ದಿನಗಳ ಹಿಂದೆ ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ ಎಂದು ದೂರು ನೀಡಿರುತ್ತಾರೆ.

– ಹಲ್ಲೆ : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ ಸಾವಿತ್ರಿ ಕೋಂ ವೇಲು, ಘಟ್ಟರಾಗಡಹಳ್ಳಿ ಗ್ರಾಮ, ಉರಿಗಾಂ ರವರ ಮಗ ಅರುಣ್ ರವರು ಐಶ್ವರ್ಯ ಎಂಬಾಕೆಯನ್ನು ಪ್ರೀತಿಸಿ ದಿನಾಂಕ 22.09.2019 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ಯಾರಿಗೂ ತಿಳಿಯದಂತೆ ಐಶ್ವರ್ಯಳನ್ನು ಮದುವೆ ಮಾಡಿಕೊಂಡಿರುವ ವಿಚಾರದಲ್ಲಿ ಆ ದಿನ ಐಶ್ವರ್ಯ ಮನೆಯವರು ಮತ್ತು ದೂರುದಾರರ ಮನೆಯವರು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿರುತ್ತಾರೆ. ದಿನಾಂಕ 04.01.2020 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಐಶ್ವರ್ಯಳ ಸಂಬಂದಿಕರಾದ ಕಲ್ಪನಾ, ಜೋತಿ, ನವೀನ್, ನರೇಶ್ ರವರು ದೂರುದಾರರ  ಬಳಿ ಬಂದು ಕೆಟ್ಟ ಮಾತುಗಳಿಂದ ಬೈದು,  ಆರೋಪಿ ನವೀನ್ ಎಂಬುವನು ಒಂದು ಚಿಕ್ಕ ಇಟ್ಟಿಗೆ ಕಲ್ಲನ್ನು ಎತ್ತಿ ಪಿರ್ಯಾದಿ ಕಡೆ ಬೀಸಿದ್ದು ಅದು ಪಿರ್ಯಾದಿಯ ತಲೆಯ ಎಡ ಹಿಂಭಾಗ ಬಿದ್ದು ರಕ್ತಗಾಯವಾಗಿರುತ್ತೆ. ಪಿರ್ಯಾದಿದಾರರ ಮಗ ಅರುಣ್ ಜಗಳ ಬಿಡಿಸಲು ಬಂದಾಗ ಆತನನ್ನು ಎಲ್ಲರೂ ಸೇರಿ ಕೈಗಳಿಂದ ಹೊಡೆದಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.01.2020 ರಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ರಾಮದಾಸಪ್ಪ, ಬೀರಂಡಹಳ್ಳಿ ಗ್ರಾಮ ಬಂಗಾರಪೇಟೆ ರವರು ಊಟವನ್ನು ಮಾಡಿಕೊಂಡು ತನ್ನ ಮನೆಯ ಮುಂಭಾಗದ ಕಲ್ಲಿನ ಮೇಲೆ ಕುಳಿತಿರುವಾಗಿ ಅದೇ ಗ್ರಾಮದ ಆರೋಪಿ ಪ್ರದೀಪ್ ರವರು ಪಿರ್ಯಾದಿಯನ್ನು ಕುರಿತು  ಕೆಟ್ಟ ಮಾತುಗಳಿಂದ ಬೈಯ್ಯುತ್ತಿದ್ದಾಗ, ಈ ಬಗ್ಗೆ  ಪಿರ್ಯಾದಿ ಕೇಳಿದಕ್ಕೆ ಆರೋಪಿ ಏಕಾಏಕಿ ಜಗಳ ತೆಗೆದು ಒಂದು ದೊಣ್ಣೆಯಿಂದ ಪಿರ್ಯಾದಿಯ ಬಲ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಆರೋಪಿಗಳಾದ ಅನುಸುಯಮ್ಮ ಮತ್ತು ಅಂಬಿಕ ರವರು ಪಿರ್ಯಾದಿಗೆ ಕೈಗಳಿಂದ ಹೊಡೆದು ಮೈಕೈ ನೋವುಂಟು ಮಾಡಿರುತ್ತಾರೆ.

 

Leave a Reply

Your email address will not be published. Required fields are marked *