ದಿನದ ಅಪರಾಧಗಳ ಪಕ್ಷಿನೋಟ 05 ನೇ ನವೆಂಬರ್ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:04.11.2019 ರಂದು   ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶಿಫಾ ಕುಲ್ಸುಂ ಕೊಂ ಶೋಹಿಬ್‌ ಅಹ್ಮದ್‌, ಸೇಠ್‌ ಕಾಂಪೌಂಡ್‌, ಬಂಗಾರಪೇಟೆ ರವರು ದಿನಾಂಕ 03.01.2016 ರಂದು ಶೋಹಿಬ್‌ ಅಹ್ಮದ್‌ ರವರೊಂದಿಗೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ದೂರುದಾರರಿಗೆ ಒಂದು ಕೆಜಿ ಬಂಗಾರದ ವಡವೆಗಳು, ಶೋಹಿಬ್‌ ಅಹ್ಮದ್‌ ರವರಿಗೆ ವರದಕ್ಷಣೆಯಾಗಿ 3 ಪ್ಲಾಟಿನಂ ಹಾಗೂ ಒಂದು ಬಂಗಾರದ ಉಂಗುರ, 3 ವಾಚ್ ಗಳನ್ನು ಮತ್ತು ಸಂಸಾರದ ಬಳಕೆಯ ವಸ್ತುಗಳನ್ನು ಕೊಡುವಂತೆ ಕೇಳಿದ್ದು ಅದರಂತೆ ದೂರುದಾರರ ಮನೆಯವರು ಕೊಟ್ಟಿದ್ದು, ಸಂಸಾರದ ವಿಚಾರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ದೂರುದಾರರ ಮೇಲೆ ಶೋಹಿಬ್‌ ಅಹ್ಮದ್‌, ಜಮೀಲ್‌ ಅಹ್ಮದ್‌, ಖುರತ್‌ ಪರ್ವೀನ್‌, ಅಬ್ದು‌‌ಲ್‌ ಖಾದೀರ್‌, ಆಸ್ಫೀಯಾ ಬೇಗಂ ಮತ್ತು ವಾಸೀಮ್‌ ಪಾಷಾ  ರವರುಗಳು ಜಗಳ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ, ತವರು ಮನೆಯಿಂದ 10,00,000/- ರೂಗಳನ್ನು ವರದಕ್ಷಣೆಯಾಗಿ ತರುವಂತೆ ಹೇಳಿ, ಹಣವನ್ನು ತರದ ಕಾರಣ ದಿನಾಂಕ 23.07.2019 ರಂದು ದೂರುದಾರರನ್ನು ಬೆಲ್ಟ್ ಮತ್ತು ಕೋಲಿನಿಂದ ಹೊಡೆದು,  ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಕನ್ನ ಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಖಲೀಂ, ಜಂಡಾ ಸ್ಟ್ರೀಟ್, ಆಂಡ್ರಸನ್‌ಪೇಟೆ ರವರ ದಿನಾಂಕ: 03.11.20109 ರಂದು ಮದ್ಯಾಹ್ನ 2-00 ಗಂಟೆಗೆ ಬೇತಮಂಗಲದಲ್ಲಿ ತನ್ನ ಸಂಬಂಧಿಕರು ಮೃತಪಟ್ಟಿದ್ದು, ಅವರನ್ನು ನೋಡಿಕೊಂಡು ಬರಲು ಮನೆಗೆ ಬೀಗ ಹಾಕಿಕೊಂಡು ತಾನು ಮತ್ತು ತನ್ನ ತಾಯಿ ಶ್ರೀಮತಿ ದಿಲ್ ಶಾದ್ ಬೇಗಂ ರವರೊಂದಿಗೆ ತನ್ನ ಸಂಬಂಧಿಕರಾದ ಜಬೀ ರವರ ಅಟೋದಲ್ಲಿ ಬೇತಮಂಗಲಕ್ಕೆ ಹೋಗಿ ಮತ್ತೆ ಸಂಜೆ 4-00 ಗಂಟೆಗೆ ಮನೆಗೆ ಬಂದು ಮನೆಯ  ಮನೆಯೊಳಗಡೆ ಹೋಗಿ ನೋಡಲಾಗಿ ಮನೆಯ ಮೇಲ್ಚಾವಣಿಯ ಹೆಂಚುಗಳು ತೆಗೆದಿರುವುದು ಕಂಡು ಬಂದಿದ್ದು, ತಕ್ಷಣ ಬೀರುವನ್ನು ಪರಿಶೀಲಿಸಲಾಗಿ ಬೀರುವಿನಲ್ಲಿದ್ದ ಒಂದು ಜೊತೆ ಬಂಗಾರದ ಸಾಧಾ ಕಿವಿಯ ಓಲೆ ಮತ್ತು ಜುಮುಕಿ (10 ಗ್ರಾಂ, ಬೆಲೆ ಸುಮಾರು 20,000/-ರೂ), ಒಂದು ಬಂಗಾರದ ಉಂಗುರ ( 6 ಗ್ರಾಂ, ಬೆಲೆ ಸುಮಾರು 12,000/-ರೂ), ನಗದು ಹಣ 13000 ರೂ ಬೆಲೆ ಬಾಳುವ ವಸ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಮನೆಯ ಹಿಂಬಾಗಿಲಿನ ಮುಖಾಂತರ ಹೊರಟು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

– ರಸ್ತೆ ಅಪಘಾತಗಳು :   01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.11.2019 ರಂದು ಮದ್ಯಾಹ್ನ ಸುಮಾರು 1-00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಶ್ರೀನಿವಾಸ, ದೇಶಹಳ್ಳಿ ಬಂಗಾರಪೇಟೆ  ರವರು ತನ್ನ ದ್ವಿಚಕ್ರ ವಾಹನದಲ್ಲಿ  ಕಾಮಸಮುದ್ರಂ ರಸ್ತೆಯಲ್ಲಿರುವ ಹಳ್ಳಿ ಡಾಭಾ ಮುಂದೆ ಹೋಗುತ್ತಿದ್ದಾಗ, ಒಂದು ಕಪ್ಪು ಬಣ್ಣದ ಕಾರ್ ಸಂಖ್ಯೆ ಟಿ.ಎನ್-02 ಹೆಚ್-7008 ಅದರ ಚಾಲಕ ಅತಿವೇಗ ಮತ್ತು ಅಜಾಗರೂ ಕತೆಯಿಂದ ಬಂಗಾರಪೇಟೆ ಕಡೆಯಿಂದ ಚಲಾಯಿಸಿಕೊಂಡು ಬಂದು ತಮ್ಮ ಗ್ರಾಮದ ವಾಸಿಯಾದ ರವಿ ಬಿನ್ ವೆಂಕಟರಾಯಪ್ಪ ರವರು ಚಾಲಾಯಿಸಿಕೊಂಡು ಬರುತ್ತಿದ್ದ ದ್ವಿಚಕ್ರಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ರವಿ ರವರು ಕೆಳಗೆ ಬಿದ್ದು ಮೂಗಿನಿಂದ ಹಾಗೂ ಕಿವಿಯಲ್ಲಿಯೂ ಸಹ ರಕ್ತ ಬಂದಿದ್ದು, ಸದರಿ ಕಾರಿನ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆಂತ ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *