ದಿನದ ಅಪರಾಧಗಳ ಪಕ್ಷಿನೋಟ 05 ನೇ ಆಗಸ್ಟ್ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:04.08.2019 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಶಾಂತ್‌ ಕುಮಾರ್‌ ಬಿನ್ ಬಾಲರಾಮನ್‌, ಭಾರತ್‌ನಗರ, ಬೆಮೆಲ್ ನಗರ ರವರು ದಿನಾಂಕ.03-08-2019 ರಂದು ರಾತ್ರಿ 11-00 ಗಂಟೆಯಲ್ಲಿ 20,000/- ರೂ ಬೆಲೆ ಬಾಳುವ ತನ್ನ ಯಮಹಾ RX 100 ದ್ವಿಚಕ್ರ ವಾಹನ ಸಂಖ್ಯೆ  KA20-E-9252 ಅನ್ನು ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿ, ಬೆಳಿಗ್ಗೆ  06-00 ಗಂಟೆಗೆ ಎದ್ದು ನೋಡಲಾಗಿ  ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.08.2019 ರಂದು ಸಂಜೆ 4.30  ಗಂಟೆಯಲ್ಲಿ ನಾಯನಹಳ್ಳಿ ಗ್ರಾಮದಿಂದ ಮಾರಸಂದ್ರ ಗ್ರಾಮಕ್ಕೆ ಹೋಗುವ ಕಾಲು ದಾರಿಯಲ್ಲಿ ಇರುವ ಮಾರಸಂದ್ರ ಕೆರೆ ಅಂಗಲದಲ್ಲಿ ಅಂದರ್‌ ಬಾಹರ್‌ ಜೂಜಾಟವನ್ನು ಆಡುತ್ತಿದ್ದ ೧. ಆನಂದರೆಡ್ಡಿ ಬಿನ್ ಈರಾರೆಡ್ಡಿ, ನಾಯನಹಳ್ಳಿ ೨. ಬಾಬು ಬಿನ್ ಜಬ್ಬಾರ್‌ ಸಾಬ್‌, ನಾಯನಹಳ್ಳಿ, ೩. ಬಸವರಾಜ್ ಬಿನ್ ವೆಂಕಟಾರೆಡ್ಡಿ, ಕೂಳೂರು ಗ್ರಾಮ ರವರನ್ನು ಪಿ.ಎಸ್.ಐ., ಶ್ರೀ. ಸುನೀಲ್‌ ಕುಮಾರ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳನ್ನು ಮತ್ತು  6,630/- ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ. 

–ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವಾಜ್ ಬಿನ್ ಬಾಬು, ಗೋನಮಾಕನಹಳ್ಳಿ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ಉರಿಗಾಂ ಮಿಲ್ ಬ್ಲಾಕ್ ಸಮೀಪವಿರುವ ಸೈನೇಡ್ ಗುಡ್ಡದ ಮೇಲೆ ನಡೆಯುತ್ತಿದ್ದ  ಕೆ.ಜಿ.ಎಫ್ 2 ಚಲನಚಿತ್ರದ ಚಿತ್ರೀಕರಣ ನೋಡಲು ಹೆಂಡತಿ ಮಕ್ಕಳ ಸಮೇತ ದಿನಾಂಕ:04.08.2019 ರಂದು ಸಂಜೆ 6.30 ಗಂಟೆಯಲ್ಲಿ ಸೈನೇಡ್ ಗುಡ್ಡದ ಮೇಲೆ ಹೋಗುತ್ತಿದ್ದಾಗ, ನಾಲ್ಕು ಜನ ಆರೋಪಿಗಳು ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದಿದ್ದರಿಂದ ದೂರುದಾರರ  ಕೆಳ ಪಂಕ್ತಿಯ 2 ಹಲ್ಲುಗಳು ಮುರಿದು ಬಿದ್ದಿರುತ್ತೆ. 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲ್ ಬಿನ್ ಮುನಿವೆಂಕಟಪ್ಪ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ 25 ವರ್ಷದ ಅರುಣ್ ಕುಮಾರ್ ರವರು ದಿನಾಂಕ 02-08-2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಮನೆಯಿಂದ  ಹೊರಗೆ ಹೋದವರು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ. 

Leave a Reply

Your email address will not be published. Required fields are marked *