ದಿನದ ಅಪರಾಧಗಳ ಪಕ್ಷಿನೋಟ 05ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:04.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು :  02

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿನೇಶ್‌ ಕುಮಾರ್‌ ಬಿನ್ ಶೇಷಾದ್ರಿ, ಅಂಬೇಡ್ಕರ್‌ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ತಂದೆ ಶೇಷಾಧ್ರಿ ರವರು ದಿನಾಂಕ:04.03.2020 ರಂದು ರಾತ್ರಿ 8.30 ಗಂಟೆಯಲ್ಲಿ ಟಿ ವಿ ಎಸ್ ಸೂಪರ್ ಎಕ್ಸ್ ಎಲ್ ದ್ವಿಚಕ್ರವಾಹನ ಸಂಖ್ಯೆ ಕೆ.ಎ 08 ವೈ 8677 ರಲ್ಲಿ ಸ್ಕೂಲ್ ಆಫ್ ಮೈನ್ಸ್ ಸರ್ಕಲ್ ಕಡೆಯಿಂದ ರಾಬರ್ಟ್ ಸನ್ ಪೇಟೆ ಕಡೆಗೆ ಹೋಗುವ ಮುಖ್ಯ ತಾರ್ ರಸ್ತೆಯಲ್ಲಿ ಹೊಗುತ್ತಿರುವಾಗ, ಹಿಂಬದಿಯಿಂದ ಕಾರಿನ ಚಾಲಕ ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಶೇಷಾದ್ರಿ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿಪಡಿಸಿದ್ದು, ಶೇಷಾದ್ರಿ ರವರಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಗೀತಾ ಕೊಂ ಗೋಪಿ, ಮಾಗೋಂದಿ ಮಜರಾ ರಾಮಚಂದ್ರಾಪುರ, ಬಂಗಾರಪೇಟೆ ತಾಲ್ಲೂಕು ರವರು ಮಗಳು ನೇಹಾ ರವರೊಂದಿಗೆ ದಿನಾಂಕ 03.03.2020 ರಂದು ಸಂಜೆ 06. 00 ಗಂಟೆಯಲ್ಲಿ   ದ್ವಿಚಕ್ರ  ವಾಹನ ಸಂಖ್ಯೆ KA07W8096  ರಲ್ಲಿ ಬಂಗಾರಪೇಟೆಯಿಂದ ಹುಣಸನಹಳ್ಳಿ ಬಳಿಯಿರುವ ಬ್ರಿಡ್ಜ್ ಮೇಲೆ ಹೋಗುತ್ತಿರುವಾಗ, ಎದುರುಗಡೆಯಿಂದ ಟಿಪ್ಪರ್ ಲಾರಿ ಸಂಖ್ಯೆ KA03 AA 6796 ನ್ನು ಚಾಲಕ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ದೂರುದಾರರ  ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ  ಇಬ್ಬರಿಗೂ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹರಿಹರನ್‌ ಬಿನ್ ಇನ್ಬದಾಸ್, ಇ.ಟಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ 04.03.2020 ರಂದು ರಾತ್ರಿ 10-50 ಗಂಟೆಗೆ ರಾಬರ್ಟ್ ಸನ್ ಪೇಟೆ ಸರಹದ್ದು ಎಸ್.ಬಿ ಕಾಲೋನಿ ಪ್ರಗತಿ ಕ್ಲೀನಿಕ್ ಮುಂದೆ ಎಂಜಿಲು ಉಗಿದಿದ್ದು, ಆಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯಾರೋ 03 ಜನರು   ಎಂಜಿಲು ಏಕೆ ಉಗಿದಿದ್ದು ಎಂದು ಹರಿಹರನ್ ಮೇಲೆ ಜಗಳ ಕಾದು,  ಕೆಟ್ಟಮಾತುಗಳಿಂದ ಬೈದು, ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ನೇತ್ರಾವತಿ ಕೊಂ ಮುನಿರಾಜು, ನಾರಾಯಣಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮತ್ತು ಜ್ಯೋತೀಶ್ ಹಾಗೂ ಮುನಿಯಮ್ಮ ರವರ ಮನೆಗೆ ಒಂದೆ ವಿದ್ಯುತ್ ಮೀಟರ್ ಇದ್ದು ಬಿಲ್ ಪಾವತಿ ಮಾಡುವ ವಿಚಾರದಲ್ಲಿ ದೂರುದಾರರ ಗಂಡ ಮುನಿರಾಜು ಮತ್ತು ಜ್ಯೋತೀಶ್ ಹಾಗೂ ಮುನಿಯಮ್ಮ ರವರು ದಿನಾಂಕ 29.02.2020 ರಂದು ಬೆಳಿಗ್ಗೆ 09-45 ಗಂಟೆಯ ಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಗಲಾಟೆ ಬಿಡಿಸಲು ದೂರುದಾರರು ಹೋದಾಗ ಇಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ, ಕೆಟ್ಟಮಾತುಗಳಿಂದ ಬೈದಿರುತ್ತಾರೆ.

– ಇತರೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ-04.03.2020 ರಂದು ಮದ್ಯಾಹ್ನ 13.00 ಗಂಟೆಗೆ ಸಿ.ಹೆಚ್.ಸಿ ಶ್ರೀ ಕೋನಪ್ಪರೆಡ್ಡಿ ಮತ್ತು ಸಿ.ಹೆಚ್.ಸಿ ರಮೇಶ್ ರವರು ಗಸ್ತಿನಲ್ಲಿದ್ದಾಗ, ಸಂಜಯಗಾಂಧಿನಗರದಲ್ಲಿ ಶಿವ ಬಿನ್ ನಾಗರಾಜು ರವರು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಆತನನ್ನು ಮತ್ತು  ಸ್ಥಳದಲ್ಲಿದ್ದ 1) 02 ಪ್ಲಾಸ್ಟಿಕ್ ಲೋಟಗಳು, 2) ಹೈವರ್ಡ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್ ನ 02 ಖಾಲಿ ಟೆಟ್ರಾ ಪಾಕೇಟ್ಗಳು, 3) ಬೆಂಗಳೂರು ವಿಸ್ಕಿಯ 90 ಎಂ.ಎಲ್ ನ 09 ಟೆಟ್ರಾ ಪಾಕೇಟ್ ಗಳು, 4) ನಂ.1 ಹೈವೇ ಪೈನ್ ವಿಸ್ಕಿಯ 180 ಎಂ.ಎಲ್ ನ 03 ಟೆಟ್ರಾ ಪಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ರವಿಕುಮಾರ್ ಸಿಪಿಸಿ ಬಂಗಾರಪೇಟೆ ಪೊಲೀಸ್ ಠಾಣೆ ರವರು ದಿನಾಂಕ 04.03.2020 ರಂದು ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಬಂಗಾರಪೇಟೆ ರೈಲ್ವೇ ನಿಲ್ದಾಣದ ಬಳಿಯಿರುವ ದ್ವಿಚಕ್ರ ವಾಹನಗಳ ನಿಲುಗಡೆ ಬಳಿ ಸುಮಾರು 60 ರಿಂದ 65 ವರ್ಷವುಳ್ಳ ಅನಾಮಧೇಯ ಗಂಡಸು ಭಿಕ್ಷೆ ಬೇಡಿಕೊಂಡಿದ್ದವರು ಆಹಾರವಿಲ್ಲದೆಯೋ ಅಥವಾ ಯಾವುದೋ ಖಾಯಿಲೆಯಿಂದ ಬಳಲಿ ದಿನಾಂಕ 03.03.2020 ರಂದು ರಾತ್ರಿ  ಮೃತಪಟ್ಟಿರಬಹುದೆಂದು ನೀಡಿರುವ ದೂರು.

Leave a Reply

Your email address will not be published. Required fields are marked *